ಕನ್ನಡ ವಾರ್ತೆಗಳು

ಡಿ.20 ರಿಂದ 30ರವರೆಗೆ “ಕರಾವಳಿ ಬೀಚ್ ಉತ್ಸವ” : ಹಾಡು, ನೃತ್ಯ ಸ್ಪರ್ಧೆಗೆ ಅಹ್ವಾನ

Pinterest LinkedIn Tumblr

Beach_Utsava_Logo

ಮಂಗಳೂರು, ಡಿ.11: ಕರಾವಳಿ ಬೀಚ್ ಉತ್ಸವವು ಡಿ.20ರಿಂದ 30ರವರೆಗೆ ಪಣಂಬೂರು ಬೀಚ್‌ನಲ್ಲಿ ನಡೆಯಲಿದ್ದು, ಅದರ ಅಂಗವಾಗಿ ಹಾಡುಗಾರಿಕೆ ಸ್ಪರ್ಧೆಯು ಜರಗಲಿದೆ. ಈ ಸಂಬಂಧ ಡಿ. 14ರಂದು ಪೂರ್ವಾಹ್ನ 8:30 ಗಂಟೆಯಿಂದ ಕೆನರಾ ಪ್ರೌಢ ಶಾಲೆ (ಮೇನ್), ಡೊಂಗರಕೇರಿ, ಮಂಗಳೂರು ಇಲ್ಲಿ ಹಾಡುಗಾರರಿಗೆ ಆಡಿಶನ್ ನಡೆಯಲಿದೆ.

ಸ್ಪರ್ಧೆಯು ಒಬ್ಬರಿಗೆ ಮತ್ತು ಗ್ರೂಪ್‌ಗೆ (ಗರಿಷ್ಠ ನಾಲ್ಕು ಮಂದಿ ಸದಸ್ಯರು) ಇದೆ.ಆಡಿಶನ್‌ಗೆ ಹೆಸರು ನೋಂದಾಯಿಸಲು ಇಚ್ಛಿಸುವವರು ತಮ್ಮ ಗ್ರೂಪ್‌ನ ಹೆಸರು, ಸಂಪರ್ಕಿಸಬೇಕಾದವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು panamburbeachfestival@gmail.com ಗೆ ಈ-ಮೇಲ್ ಮೂಲಕ ಡಿ.13ರ ಸಂಜೆ 5ರ ಒಳಗೆ ಕಳುಹಿಸಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ. ಚಲನಚಿತ್ರ ಅಥವಾ ಭಾವಗೀತೆಗಳಿಗೆ ಅವಕಾಶ ಇದೆ. ಅವಧಿ: 4+1 ನಿಮಿಷ ಅಥವಾ ಹಾಡಿನ ಅವಧಿ ಯಾವುದು ಕಡಿಮೆಯೋ ಅದು. ಗ್ರೂಪ್ ಹಾಡುಗಳಿಗೆ ಯಾವುದೇ ವಾದ್ಯ ಸಂಗೀತವನ್ನು ಅಳವಡಿಸುವಂತಿಲ್ಲ.

ನೃತ್ಯ ಸ್ಪರ್ಧೆ: ಕರಾವಳಿ ಬೀಚ್ ಉತ್ಸವದ ಅಂಗವಾಗಿ ನೃತ್ಯ ಸ್ಪರ್ಧೆಯು ಡಿ.14ರಂದು ಬೆಳಗ್ಗೆ 8:30 ರಿಂದ ಭುವನೇಂದ್ರ ಹಾಲ್, ಕೆನರಾ ಪ್ರೌಢ ಶಾಲೆ (ಮೇನ್), ಡೊಂಗರಕೇರಿ, ಮಂಗಳೂರು ಇಲ್ಲಿ ನೃತ್ಯ ಸ್ಪರ್ಧೆ ಬಗ್ಗೆ ಆಡಿಶನ್ ನಡೆಯಲಿದೆ. ಸ್ಫರ್ಧೆಯು ಒಬ್ಬರಿಗೆ ಮತ್ತು ಗ್ರೂಪ್‌ಗೆ (ಗರಿಷ್ಠ ಎಂಟು ಮಂದಿ ಸದಸ್ಯರು) ಇದೆ. ಆಡಿಶನ್‌ಗೆ ಹೆಸರು ನೋಂದಾಯಿಸಲು ಇಚ್ಛಿಸುವವರು ತಮ್ಮ ಗ್ರೂಪ್‌ನ ಹೆಸರು, ಸಂಪರ್ಕಿಸಬೇಕಾದವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು panamburbeachfestival@gmail.com ಗೆ ಈಮೇಲ್ ಮೂಲಕ ಡಿ.13ರ ಸಂಜೆ 5ರ ಒಳಗೆ ಕಳುಹಿಸಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.

ಯಾವುದೇ ಭಾಷೆಯ ಹಾಡುಗಳಿಗೆ ಅವಕಾಶ ಇದೆ ರಿಮಿಕ್ಸ್ ಅಥವಾ ಎಡಿಟ್ ಮಾಡಿದ ಹಾಡುಗಳಿಗೆ ಅವಕಾಶವಿಲ್ಲ. ನೃತ್ಯದ ವೇಳೆ ಬೆಂಕಿ ಉಪಯೋಗಿಸಲು ಹಾಗೂ ಕಾರ್ಯಕ್ರಮದ ಹಿನ್ನೆಲೆಯನ್ನು ಬದಲಾಯಿಸಲು ಅವಕಾಶವಿಲ್ಲ. ಅವಧಿ: 4+1 ನಿಮಿಷ ಅಥವಾ ಹಾಡಿನ ಅವಧಿ ಯಾವುದು ಕಡಿಮೆಯೋ ಅದು. ಗ್ರೂಪ್ ಹಾಡುಗಳಿಗೆ ಯಾವುದೇ ವಾದ್ಯ ಸಂಗೀತವನ್ನು ಅಳವಡಿಸುವಂತಿಲ್ಲ. ಹೆಚ್ಚಿನ ವಿವರಗಳಿಗಾಗಿ ಯತೀಶ್ ಬೈಕಂಪಾಡಿ (ಮೊಬೈಲ್ ಸಂಖ್ಯೆ: 9449035570) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

Write A Comment