ಕನ್ನಡ ವಾರ್ತೆಗಳು

ಪಾಕಿಸ್ತಾನ – ಭಾರತ ಕ್ರಿಕೆಟ್ ಕಾಳಗ : ವಿಶ್ವ ಕಪ್ಎತ್ತಿ ಹಿಡಿದ ಭಾರತದ ಅಂಧರ ತಂಡ.

Pinterest LinkedIn Tumblr

world_cup_blind_ppl

ನವದೆಹಲಿ,ಡಿ.11: ಪಾಕಿಸ್ತಾನವನ್ನು ಬಗ್ಗು ಬಡಿದು ವಿಶ್ವಕಪ್ ಎತ್ತಿಹಿಡಿದ ಭಾರತದ ಅಂಧರ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಅಂಧರ ತಂಡದ ನಾಯಕ ಶಿವಮೊಗ್ಗದ ಶೇಖರ್ ನಾಯ್ಕ್ ಅವರಿಗೆ ಮೋದಿ ಬುಧವಾರ ವಿಶೇಷ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮೋದಿ, ನೀವು ದೇಶದ ಗೌರವ ಹೆಚ್ಚಿಸಿದಲ್ಲದೇ ಎಷ್ಟೋ ಜನರಿಗೆ ಪ್ರೇರಣೆಯಾಗಿದ್ದೀರಿ ಎಂದು ಹೇಳಿದರು.

ಈ ವೇಳೆ ಮೋದಿ ಕ್ರಿಕೆಟ್ ನಲ್ಲಿ ಅಂಧರು ಉಪಯೋಗಿಸುವ ಚೆಂಡೊಂದನ್ನು ಆಟಗಾರರಿಗೆ ನೀಡಿ ಎಲ್ಲರೂ ಹಸ್ತಾಕ್ಷರ ಹಾಕುವಂತೆ ತಿಳಿಸಿದರು. ನಂತರ ಇದನ್ನು ಮ್ಯೂಸಿಯಂ ವೊಂದರಲ್ಲಿ ಕಾಪಾಡಲಾಗುವುದು ಎಂದು ಮಾಹಿತಿ ನೀಡಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಧರ ವಿಶ್ವಕಪ್ ಭಾರತದ ಪಾಲಾಗಿತ್ತು. ಪೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಸೋಲಿಸಿ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಕೇಂದ್ರ ಸಚಿವ ಅನಂತ ಕುಮಾರ್ ಅಭಿನಂದನೆ ಜಯಭೇರಿ ಬಾರಿಸಿರುವ ಭಾರತದ ಅಂಧರ ತಂಡವನ್ನು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅಭಿನಂದಿಸಿದ್ದಾರೆ. ಭಾರತ ತಂಡದ ಈ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿರುವ ಅವರು ರಾಷ್ಟ್ರಕ್ಕೆ ಕೀರ್ತಿ ತಂದಿರುವ ಶೇಖರ್ ನಾಯ್ಕ್ ಸೇರಿದಂತೆ ತಂಡದ ಎಲ್ಲ ಸದಸ್ಯರನ್ನು ಅಭಿನಂದಿಸಿದ್ದಾರೆ.

Write A Comment