ಕನ್ನಡ ವಾರ್ತೆಗಳು

ದ.ಕ. ಜಿಲ್ಲೆಯ ಹಲವೆಡೆ ಗುಡುಗು ಮಿಂಚು ಸಹಿತ ಅಕಾಲಿಕ ಭಾರೀ ಮಳೆ

Pinterest LinkedIn Tumblr

Kundapur_heavy_rain

ಮಂಗಳೂರು, ಡಿ.11: ದ.ಕ. ಜಿಲ್ಲೆಯ ಹಲವೆಡೆ ಬುಧವಾರ ಅಪರಾಹ್ನದ ಬಳಿಕ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದೆ. ಮಂಗಳೂರು ನಗರಾದ್ಯಂತ ಇಂದು ರಾತ್ರಿ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಈ ಅಕಾಲಿಕ ಮಳೆ ಕೆಲ ಸಮಯ ನಗರ ವಾಸಿಗಳಲ್ಲಿ ಭಯದ ವಾತಾವರಣ ಮೂಡಿಸಿತ್ತು. ಸಂಜೆ 6:30ರ ಸುಮಾರಿಗೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಕಳೆದೆರಡು ದಿನಗಳ ಭಾರೀ ಬಿಸಿಲ ಧಗೆಯಿಂದ ದಣಿದಿದ್ದ ನಗರವಾಸಿಗಳಿಗೆ ಅರ್ಧ ಗಂಟೆ ಸುರಿದ ಮಳೆ ತಂಪೆರೆಯಿತು. ಮಳೆ ಆರಂಭಗೊಳ್ಳುತ್ತಿದ್ದಂತೆಯೇ ವಿದ್ಯುತ್ ಕೂಡಾ ಕೈ ಕೊಟ್ಟಿತು. ರಾತ್ರಿ 9 ಗಂಟೆಯವರೆಗೂ ವಿದ್ಯುತ್ ಕಣ್ಣುಮುಚ್ಚಾಲೆ ಮುಂದು ವರಿದಿತ್ತು.

ನಗರದ ವಿವಿಧೆಡೆ ಬುಧವಾರ ಸಂಜೆ ಮಳೆ ಸುರಿದಿದೆ. ಗುಡುಗು ಮಿಂಚಿನೊಂದಿಗೆ ಆರಂಭವಾದ ಮಳೆಯಿಂದಾಗಿ ಜನಜೀವನ ಕೆಲಹೊತ್ತು ಅಸ್ತವ್ಯಸ್ತಗೊಂಡಿತು. ಬಿ.ಸಿ.ರೋಡ್, ಬಂಟ್ವಾಳ ಮೊದಲಾದೆಡೆ ಸುಮಾರು ಅರ್ಧ ತಾಸುಗಳ ಕಾಲ ಮಳೆ ಸುರಿದಿದೆ. ಮೂಡುಬಿದಿರೆ-ಬಂಟ್ವಾಳ ಹೆದ್ದಾರಿಯ ಸೊರ್ನಾಡು ಎಂಬಲ್ಲಿ ಮಣ್ಣು ರಸ್ತೆಯೊಂದು ಕುಸಿತಕ್ಕೊಳಗಾದ್ದರಿಂದ ವಾಹನ ಸಂಚಾರಕ್ಕೆ ತೊಡಕಾದ ಘಟನೆಯು ನಡೆದಿದೆ. ಹಾಗೆಯೆ ರಾಯಿ ಎಂಬಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಅಡಚಣೆ ಯಾಗಿತ್ತು ಎಂದು ತಿಳಿದುಬಂದಿದೆ.

Write A Comment