ಕನ್ನಡ ವಾರ್ತೆಗಳು

ತಣ್ಣೀರುಬಾವಿ ಬಳಿ ಬೆಂಕಿ ಆಕಸ್ಮಿಕ : ಸುಟ್ಟು ಕರಕಲಾದ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಬೋಟ್

Pinterest LinkedIn Tumblr

boat_burned_photo_1

ಮಂಗಳೂರು,ಡೊ.05 : ಕರಾವಳಿ ಭದ್ರತಾ ಪೊಲೀಸ್ ಪಡೆಗೆ ಸೇರಿದ ಪೃಥ್ವಿ ಹೆಸರಿನ ಬೋಟ್ ಬೆಂಕಿಗಾಹುತಿಯಾದ ಘಟನೆ ಗುರುವಾರ ಸಂಜೆ  ತಣ್ಣೀರುಬಾವಿ ಸಮೀಪ ಭಾರತಿ ಶಿಪ್ ಯಾರ್ಡ್ ಬಳಿ ಸಂಭವಿಸಿದೆ.

ಕರಾವಳಿ ಭದ್ರತಾ ಪೊಲೀಸ್ ಗುರುವಾರ ಪ್ಯಾಟ್ರೋಲಿಂಗ್ ನಡೆಸಿ ಬೋಟ್‌ನ್ನು ತಣ್ಣೀರುಬಾವಿ ಸಮೀಪ ಭಾರತಿ ಶಿಪ್‌ಯಾರ್ಡ್ ಬಳಿ ಲ್ಗುಣಿ ನದಿಯಲ್ಲಿ ನಿಲ್ಲಿಸಿದ್ದರು. ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಸಿಬ್ಬಂದಿ ಊಟದ ಸಿದ್ಧತೆಯಲ್ಲಿರುವಾಗ ಬೋಟ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಕೂಡಲೇ ಎನ್‌ಎಂಪಿಟಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಇದರ ಮಧ್ಯ ದೋಣಿಯ ಮೂಲಕ ಬೆಂಕಿ ನಂದಿಸುವ ಪ್ರಯತ್ನಿ ನಡೆಸಲಾಗಿತ್ತಾದರೂ ಅದು ಫಲಕಾರಿ ಆಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿರಬಹುದು ಎಂದು ಹೇಳಲಾಗುತ್ತಿದೆ.

boat_burned_photo_3 boat_burned_photo_2

boat_burned_photo_4 boat_burned_photo_5

ಕದ್ರಿ ಅಗ್ನಿ ಶಾಮಕ ದಳ ಹಾಗೂ ಎನ್‌ಎಂಪಿಟಿ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. 2010ರಲ್ಲಿ ಖರೀದಿಸಲಾಗಿದ್ದ ಈ ಬೋಟ್‌ನ ಆಗಿನ ವೌಲ್ಯ ಎರಡು ಕೋಟಿ ರೂ. ಆಗಿತ್ತು.  ಮಂಗಳೂರು ಪೊಲೀಸ್ ಕಮಿಷನರ್ ಆರ್.ಹಿತೇಂದ್ರ, ಪಣಂಬೂರು ವಿಭಾಗದ ಎಸಿಪಿ ರವಿ ಕುಮಾರ್, ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಪಡೆದ ಇನ್‌ಸ್ಪೆಕ್ಟರ್ ಗಂಗೀರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಘಟನೆ ಬಗ್ಗೆ ಇಲಾಖೆ ಮಟ್ಟದಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Write A Comment