ಕನ್ನಡ ವಾರ್ತೆಗಳು

ಕೊಲ್ಲೂರು: ದೈಹಿಕ ಶಿಕ್ಷಣ ಶಿಕ್ಷಕನಿಂದ ೭ ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಪೀಡನೆ.?

Pinterest LinkedIn Tumblr

ಕುಂದಾಪುರ: ದೈಹಿಕ ಶಿಕ್ಷಣ ಶಿಕ್ಷಕನೋರ್ವ ೭ ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಪೀಡನೆ ನೀಡಿದ ಬಗ್ಗೆ ಪೋಸ್ಕೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾದ ಘಟನೆ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ವರದಿಯಾಗಿದೆ.

ಕೊಲ್ಲೂರು ಸರಕಾರಿ ಪ್ರಾಥಮಿಕ ಶಾಲೆಯ ದೈ.ಶಿ. ಶಿಕ್ಷಕನಾದ ಶಾಂತಪ್ಪ (೫೧) ಎನ್ನುವಾತ ಲೈಂಗಿಕ ಪೀಡನೆ ಆರೋಪಕ್ಕೊಳಗಾಗಿ ಪೋಸ್ಕೋ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ.

Kolluru_Student_rape (9) Kolluru_Student_rape (8) Kolluru_Student_rape (7) Kolluru_Student_rape (5) Kolluru_Student_rape (6) Kolluru_Student_rape (3) Kolluru_Student_rape Kolluru_Student_rape (4) Kolluru_Student_rape (2)

ಶಾಲೆಯಲ್ಲಿ ಈ ವಿದ್ಯಾರ್ಥಿನಿಗೆ ತರಗತಿ ವೇಲೆಯಲ್ಲಿ ಹೊಡೆದಿದ್ದಕ್ಕೆ ಈ ರೀತಿಯಾಗಿ ಲೈಂಗಿಕ ಪೀಡನೆ ಕೇಸು ದಾಖಲಿಸಿ ತೇಜೋವಧೆ ಮಾಡಲಾಗುತ್ತಿದೆಯೆಂಬ ಆರೋಪ ಶಾಂತಪ್ಪ ಹಾಗೂ ಅವರ ಕುಟುಂಬಿಕರಿಂದ ಕೇಳಿಬರುತ್ತಿದ್ದು, ಶಾಂತಪ್ಪ ಅವರನ್ನು ಬಂಧಿಸುವ ವೇಲೆ ಅವರ ಪತ್ನಿ ಹಾಗೂ ಸಣ್ಣ ವಯಸ್ಸಿನ ಮಕ್ಕಳಿಬ್ಬರು ದುಖಿಃತರಾಗಿದ್ದರು. ಮೂಲವೊಂದರ ಪ್ರಕಾರ ವೈಯಕ್ತಿಕ ದ್ವೇಶಗಳನ್ನಿಟ್ಟುಕೊಂಡು ಸ್ಥಳೀಯರ ಪ್ರೇರಣೆಗೊಳಗಾಗಿ ಈ ರೀತಿಯಾಗಿ ಕೇಸು ನೀಡಲಾಗಿದೆ ಎನ್ನುತ್ತಿದ್ದರಾದರೂ ತನಿಖೆ ಬಳಿಕವಷ್ಟೇ ನಿಜಾಂಶ ಹೊರಬೀಳಬೇಕಾಗಿದೆ.

Write A Comment