ಕನ್ನಡ ವಾರ್ತೆಗಳು

ಸುಮಾರು 2.5 ಕೋಟಿ ರೂ.ವೆಚ್ಚದಲ್ಲಿ ಕರ್ನಾಟಕ ಜೀವನದಿ ಕಾವೇರಿಯ ಗ್ಯಾಲರಿ ಮೈಸೂರಿನಲ್ಲಿ ನಿರ್ಮಾಣಕ್ಕೆ ಸಿದ್ದತೆ.

Pinterest LinkedIn Tumblr

tourist_minstar_rv_despande

ಬೆಂಗಳೂರು, ಡಿ.2 : ಗಂಗಾನದಿ ಮತ್ತು ಅಸ್ಸಾಂನ ಬ್ರಹ್ಮಪುತ್ರಾ ನದಿ ಗ್ಯಾಲರಿ ಮಾದರಿಯಲ್ಲಿ ಕರ್ನಾಟಕ ಜೀವನದಿ ಕಾವೇರಿಯ ಗ್ಯಾಲರಿ ಮೈಸೂರಿನಲ್ಲಿ ನಿರ್ಮಾಣಗೊಳ್ಳಲಿದೆ. ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಗ್ಯಾಲರಿ ನಿರ್ಮಾಣಗೊಳ್ಳಲಿದ್ದು, ಸ್ಥಳ ನೀಡಲು ವಿಶ್ವವಿದ್ಯಾಲಯ ಒಪ್ಪಿಗೆಯನ್ನು ನೀಡಿದೆ. ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಕುರಿತು ಮಾಹಿತಿ ನೀಡಿದ್ದು,

ಮುಂದಿನ 9 ತಿಂಗಳಿನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸುಮಾರು 2.5 ಕೋಟಿ ರೂ.ವೆಚ್ಚದಲ್ಲಿ ಗ್ಯಾಲರಿ ನಿರ್ಮಾಣಗೊಳ್ಳಲಿದೆ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿರುವ ಗಂಗಾನದಿ  ಗ್ಯಾಲರಿ’ ಮತ್ತು ಅಸ್ಸಾಂನ ‘ಬ್ರಹ್ಮಪುತ್ರಾ ನದಿ ಗ್ಯಾಲರಿ’ ಮಾದರಿಯಲ್ಲಿ ಮೈಸೂರು ವಿವಿ ಆವರಣದಲ್ಲಿ ‘ಕಾವೇರಿ ನದಿ ಗ್ಯಾಲರಿ’ ನಿರ್ಮಾಣವಾಗಲಿದೆ. ಕೆಲವು ದಿನಗಳ ಹಿಂದೆ ನಡೆದ ಕರ್ನಾಟಕ ಜ್ಞಾನ ಆಯೋಗದ ಸಭೆಯಲ್ಲಿ ಈ ಯೋಜನೆ ಕುರಿತು ಚರ್ಚಿಸಲಾಗಿದೆ.

ಗ್ಯಾಲರಿಯಲ್ಲಿ ಏನಿರುತ್ತೆ? : ಕಾವೇರಿ ನದಿ ಗ್ಯಾಲರಿಯು ನೋಡುಗರಿಗೆ ನದಿಯ ಒಟ್ಟು ವಿಸ್ತೀರ್ಣ 746 ಕಿ.ಮೀ. ಪ್ರಯಾಣದ ಅನುಭವ ನೀಡುವುದರ ಜೊತೆಗೆ, ಕಾವೇರಿ ನದಿಯ ಇತಿಹಾಸ, ಉಗಮ ಸ್ಥಳ, ಹಾದು ಹೋಗುವ ಪ್ರದೇಶಗಳು, ಉಪನದಿಗಳು, ಡ್ಯಾಂಗಳು ಮುಂತಾದ ಮಾಹಿತಿಗಳನ್ನು ದೃಶ್ಯ ಮತ್ತು ಚಿತ್ರಗಳ ರೂಪದಲ್ಲಿ ನೀಡಲಿದೆ. ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತು (ಎನ್‌ಸಿಎಸ್‌ಎಂ), ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರು ವಿವಿ ಜಂಟಿ ಸಹಕಾರದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಎನ್‌ಸಿಎಸ್‌ಎಂ ಈ ಗ್ಯಾಲರಿಯ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. ಉನ್ನತ ತಂತ್ರಜ್ಞಾನ ಬಳಕೆ : ಗ್ಯಾಲರಿಯಲ್ಲಿ ನೋಡುಗರಿಗೆ ಸ್ಯಾಟ್‌ಲೈಟ್ ಚಿತ್ರಗಳು, ಡಿಜಿಟಲ್‌ ವಿಡಿಯೋ ಶೋ ಸೇರಿದಂತೆ ಇತರ ಆಧುನಿಕ ಮತ್ತು ವೈಜ್ಞಾನಿಕ ಸಾಧನಗಳ ಮೂಲಕ ಕಾವೇರಿ ನದಿಯ ಇತಿಹಾಸ, ಪರಿಸರ, ಸಂಸ್ಕೃತಿ, ಪರಂಪರೆಯ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.

ಕಾವೇರಿ ನದಿ ಗ್ಯಾಲರಿ ನಿರ್ಮಾಣ ಮಾಡಲು ಸೂಕ್ತ ಕಟ್ಟಡ ಒದುಗಿಸಲು ಮೈಸೂರು ವಿವಿ ಒಪ್ಪಿಗೆ ಸೂಚಿಸಿದೆ. ಕಾರ್ಯ ಯೋಜನೆ ತಯಾರಿಸಿದ ಬಳಿಕ ಸುಮಾರು 9 ತಿಂಗಳಿನಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ. ಕಾವೇರಿ ನದಿ ಗ್ಯಾಲರಿ ಪೂರ್ಣಗೊಂಡ ಬಳಿಕ ಸರ್ಕಾರ ತುಂಗಾ, ಶರಾವತಿ, ಭದ್ರಾ ಮುಂತಾದ ನದಿಗಳ ಗ್ಯಾಲರಿಗಳನ್ನು ನಿರ್ಮಿಸುಬಹುದು ಎಂದು ಜನರ ಆಶಯವಾಗಿದೆ.

Write A Comment