ಕನ್ನಡ ವಾರ್ತೆಗಳು

ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಪುರಸಭಾ ಸದಸ್ಯರ ಸಭಾತ್ಯಾಗ

Pinterest LinkedIn Tumblr

kundapra prsbe

ಕುಂದಾಪುರ: ಕುಂದಾಪುರ ಪುರಸಭೆಯಲ್ಲಿ ನಿನ್ನೆ ಮದ್ಯಾಹ್ನ 3.30 ಕ್ಕೆ ಸಾಮಾನ್ಯ ಸಭೆ ನಡೆಯುತ್ತಿತ್ತು. ಎಲ್ಲ ವಾರ್ಡಿನ ಬಿಜೆಪಿ ಸದಸ್ಯರು ಹಾಜರಿದ್ದು ತಮ್ಮ ತಮ್ಮ ವಾರ್ಡಿನ ಸಮಸ್ಯೆಗಳನ್ನು ಪುರಸಭೆಯ ಅಧ್ಯಕ್ಷರಲ್ಲಿ ತಿಳಿಸುತ್ತಿದ್ದರು.

ನೀರಿನ ಮಾಸಿಕ ಬಿಲ್ಲನ್ನು ಕಡಿಮೆ ಮಾಡಬೇಕಾಗಿ ವಿಜಯ ಎಸ್ ಪೂಜಾರಿಯವರು, ಪುರಸಭೆಯಲ್ಲಿ ಕಳೆದ ಮೂರು ತಿಂಗಳಿಂದ ಸಂಬಂದಪಟ್ಟ ಯಾವುದೇ ಇಂಜಿನಿಯರ್‌ಗಳು ಇಲ್ಲದಿರುವುದರ ಬಗ್ಗೆ ರವಿರಾಜ್ ಖಾರ್ವಿಯವರು, ಪ್ರಾಧಿಕಾರದಿಂದ ಪುರಸಭೆಯ ನಾಗರಿಕರಿಗೆ ಆಗುವ ತೊಂದರೆಯನ್ನು ಮೋಹನದಾಸ್ ಶಣೈ ಯವರು ಅನೇಕ ನಿರ್ಣಯಗಳನ್ನು ಮಾಡದರೂ ಸಹ ಜಾರಿಯಾಗುವುದಿಲ್ಲ ಎನ್ನುವುದನ್ನು ರಾಜೇಶ್ ಕಾವೇರಿಯವರು ಸಭೆಯಲ್ಲಿ ಆಕ್ರೋಷ ವ್ಯಕ್ತ ಪಡಿಸಿದರು.

ಹೀಗೆ ಎಲ್ಲಾ ಬಿಜೆಪಿಯ ಪುರಸಭಾ ಸದಸ್ಯರು ಮಾತನಾಡುತ್ತಾ 6 ತಿಂಗಳಿನಿಂದಲೂ ವಾರ್ಡಿನ ಸಮಸ್ಯೆಗಳನ್ನು ಹೇಳುತ್ತಿದ್ದರೂ ಸಹ ಅಧ್ಯಕ್ಷರು ಯಾವುದರ ಬಗ್ಗೆಯೂ ತಲೆ ಕಡಿಸಿಕೊಳ್ಳದೆ ಹಾರಿಕೆಯ ಉತ್ತರ ನೀಡುತ್ತಿದ್ದರು. ಅದೇ ರೀತಿಯಲ್ಲಿ ಬಿಜೆಪಿ ಸದಸ್ಯೆ ಗೀತಾರವರು ತಮ್ಮ ವಾರ್ಡಿನ ಕಾಮಗಾರಿ ಬಗ್ಗೆ ಹೇಳಿದಾಗ ಮಾಡುವುದಿಲ್ಲ ಎನ್ನುವ ಮಾತನ್ನು ಅಧ್ಯಕ್ಷರ ಬಾಯಿಯಿಂದ ಬಂದಾಗ ಸಭೆಯಲ್ಲಿ ಹಾಜರಿದ್ದ 21 ಸದಸ್ಯರ ಪೈಕಿ 12 ಜನ ಭಾರತೀಯ ಜನತಾ ಪಾರ್ಟಿಯ ಸದಸ್ಯರು ಸಭಾ ತ್ಯಾಗ ಮಾಡಿzರು.

Write A Comment