ಅಂತರಾಷ್ಟ್ರೀಯ

89 ವರ್ಷ ವೈವಾಹಿಕ ಜೀವನ ಸಾಗಿಸಿದ ಭಾರತೀಯ ಮೂಲದ ದಂಪತಿಗಳ ವಿಶೇಷ ಜನ್ಮ ದಿನಾಚರಣೆ.

Pinterest LinkedIn Tumblr

london_old_couples

ವಿಶ್ವದಲ್ಲಿಯೇ ಅತಿ ದೀರ್ಘಕಾಲ ವೈವಾಹಿಕ ಜೀವನವನ್ನು ಸಾಗಿಸಿದ ಹೆಗ್ಗಳಿಕೆಗೆ ಭಾರತೀಯ ಮೂಲದ ದಂಪತಿ ಪಾತ್ರರಾಗಿದ್ದಾರೆ. ಪ್ರಸ್ತುತ ಲಂಡನ್ ನಿವಾಸಿಗಳಾದ 100ಕ್ಕಿಂತ ಹೆಚ್ಚು ವಯಸ್ಸಿನ ದಂಪತಿಗಳು ಇತ್ತೀಚಿಗೆ ಜಂಟಿಯಾಗಿ ತಮ್ಮಿಬ್ಬರ ಜನ್ಮದಿನವನ್ನಾಚರಿಸಿಕೊಂಡರು.

ಬರೊಬ್ಬರಿ 89 ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 11, 1925ರಲ್ಲಿ ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಭಾನುವಾರ ಈ ಆದರ್ಶ ದಂಪತಿಗಳು ಹದಿಹರೆಯದವರನ್ನು ನಾಚಿಸುವಂತೆ ಜನ್ಮದಿನವನ್ನು ಆಚರಿಸಿಕೊಂಡರು. ಮಾರ್ಗರೆಟ್ ಥ್ಯಾಚರ್ ಜನಿಸಿದ್ದ ವರ್ಷದಲ್ಲಿಯೇ ಅವರಿಬ್ಬರ ವಿವಾಹವಾಗಿತ್ತು . ಆ ಸಮಯದಲ್ಲಿ ಸ್ಟಾನ್ಲಿ ಬಾಲ್ಡ್ವಿನ್ ಬ್ರಿಟಿಷ್ ಪ್ರಧಾನಿಯಾಗಿದ್ದರು.

ವಿಶೇಷವೆಂದರೆ ಅವರಿಬ್ಬರು ಜನಿಸಿದ್ದು ಕೂಡ ಒಂದೇ ದಿನದಂದು. ಕರಮ್ ಚಂದ್ 109ನೇ ವರ್ಷಕ್ಕೆ ಕಾಲಿರಿಸಿದರೆ, ಅವರ ಪತ್ನಿ 102 ನೇ ವಸಂತವನ್ನು ಕಂಡಿದ್ದಾರೆ. ಬ್ರಾಡ್ಫೋರ್ಡ್‌ನಲ್ಲಿ ತಾವು ವಾಸವಾಗಿರುವ ಮನೆಯಲ್ಲಿ ತಮ್ಮ ಕುಟುಂಬದ ನಾಲ್ಕು ಪೀಳಿಗೆಯ ಸದಸ್ಯರೊಂದಿಗೆ ಅವರಿಬ್ಬರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಿಲ್ ಕೆಲಸಗಾರರಾಗಿ ನಿವೃತ್ತರಾಗಿರುವ ಕರಮ್, ಸಂಜೆ ಊಟಕ್ಕೂ ಮೊದಲು ಒಂದು ಸಿಗರೇಟ್ ಎಳೆಯುತ್ತಾರೆ ಮತ್ತು ವಾರದಲ್ಲಿ ಮೂರು ಅಥವಾ ನಾಲ್ಕು ದಿನ ಸ್ವಲ್ಪ ವಿಸ್ಕಿ ಅಥವಾ ಬ್ರಾಂಡಿಯನ್ನು ಗುಟುಕಿಸುತ್ತಾರೆ ಎನ್ನಾತ್ತಾರೆ ಅವರ ಕುಟುಂಬದ ಸದಸ್ಯರು

Write A Comment