ಕನ್ನಡ ವಾರ್ತೆಗಳು

ನ. 29 : ದೇರಾಜೆ ಜನ್ಮ ಶತಮಾನೋತ್ಸವ ಸಮಾರಂಭ / ಶ್ರೀ ಪಾದೆಕಲ್ಲು ನರಸಿಂಹ ಭಟ್ಟ ಅವರಿಗ ದೇರಾಜೆ ಪ್ರಶಸ್ತಿ

Pinterest LinkedIn Tumblr

Deraje_padekallu_sanman

ಮಂಗಳೂರು :ಯಕ್ಷಗಾನ ತಾಳಮದ್ದಳೆ ಕಲಾಲೋಕದಲ್ಲಿತಮ್ಮ ನಿತ್ಯ ನೂತನ ವಾಕ್ ವೈಖರಿಯಿಂದ, ಧ್ವನಿ, ಅರ್ಥ, ರಸ ವಿಲಾಸದಿಂದ, ವಿಶಿಷ್ಟ ರಂಗ ಪ್ರತಿಭೆಯಿಂದ ಕಂಗೊಳಿಸಿ ಇತಿಹಾಸ ಸೃಷ್ಟಿಸಿದ ದೇರಾಜೆ ಸೀತಾರಾಮಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭವು ನವೆಂಬರ್ 29ನೇ ಶನಿವಾರ‌ಅಪರಾಹ್ನ 3ರಿಂದ ಸಂಜೆ 7ರವರೆಗೆ ಶ್ರೀ ಶರವು ಮಹಾಗಣಪತಿದೇವಸ್ಥಾನದ ಸಭಾಂಗಣದಲ್ಲಿ ನೆರವೇರಲಿರುವುದು.

ಕಲ್ಕೂರ ಪ್ರತಿಷ್ಠಾನ ಮಂಗಳೂರು ದೇರಾಜೆ ಸೀತಾರಾಮಯ್ಯ ಜನ್ಮ ಶತಮಾನೋತ್ಸವ ಸಮಿತಿ ಹಾಗೂ ನೆಡ್ಳೆ ನರಸಿಂಹಭಟ್ಟ ಯಕ್ಷಗಾನ ಪ್ರತಿಷ್ಠಾನದ ಸಹಯೋಗದೊಂದಿಗೆಜರಗಲಿರುವ‌ಈ ಕಾರ್ಯಕ್ರಮದಲ್ಲಿ ಸಂಸ್ಮರಣೆ – ಸನ್ಮಾನ- ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ಜರಗಲಿರುವ ಸಭಾಕಾರ್ಯಕ್ರಮಕ್ಕೆ ಶರವುರಾಘವೇಂದ್ರ ಶಾಸ್ತ್ರಿಗಳು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡುವರು.

ಹಿರಿಯಕಲಾವಿದ‌ಅಗರಿರಘುರಾಮ ಭಾಗವತ‌ಉದ್ಘಾಟಿಸುವರು‌ಎಸ್. ಪ್ರದೀಪಕುಮಾರಕಲ್ಕೂರ‌ಅಧ್ಯಕ್ಷತೆವಹಿಸಲಿದ್ದು, ಕುಂಬ್ಳೆ ಸುಂದರರಾವ್‌ದೇರಾಜೆಯವರ ಸಂಸ್ಮರಣೆಗೈಯ್ಯುವರು. ದೇರಾಜೆಯವರಕುರಿತಾದ ಮೂರು ಕೃತಿಗಳನ್ನು ಹಿರಿಯ ಸಾಹಿತಿ‌ಏರ್ಯಲಕ್ಷ್ಮೀ ನಾರಾಯಣ ಆಳ್ವ ಬಿಡುಗಡೆಗೊಳಿಸುವರು. ಇದೇ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ಟರನ್ನು ಸನ್ಮಾನಿಸಲಾಗುವುದು.

ಸಭಾಕಾರ್ಯಕ್ರಮದಮೊದಲು‌ಅಪರಾಹ್ನ ೩ ರಿಂದ ಪಾರ್ಥಸಾರಥ್ಯ ಎಂಬ ಯಕ್ಷಗಾನ ತಾಳಮದ್ದಲೆ ಜರಗಲಿದ್ದುದೇರಾಜೆಯವರ ಅಭಿಮಾನಿಗಳು ಹಾಗೂ ಯಕ್ಷಗಾನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಷ್ಠಾನದ‌ಅಧ್ಯಕ್ಷ‌ಎಸ್. ಪ್ರದೀಪಕುಮಾರಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ತಾಳಮದ್ದಳೆ ಕಲಾಲೋಕದಲ್ಲಿ ಇತಿಹಾಸ ಸೃಷ್ಟಿಸಿದ ದೇರಾಜೆ ಸೀತಾರಾಮಯ್ಯ..

ದೇರಾಜೆ ಸೀತಾರಾಮಯ್ಯನವರು ಯಕ್ಷಗಾನ ತಾಳಮದ್ದಳೆ ಕಲಾಲೋಕದಲ್ಲಿತಮ್ಮ ನಿತ್ಯನೂತನ ವಾಕ್-ವೈಖರಿಯಿಂದ, ದ್ವನಿ-ಅರ್ಥ-ರಸ ವಿಲಾಸದಿಂದ, ವಿಶಿಷ್ಟ ರಂಗ ಪ್ರತಿಭೆಯಿಂದ, ಕಾಮನಬಿಲ್ಲಿನಂತೆ ಕಂಗೊಳಿಸಿ,ಇತಿಹಾಸ ಸೃಷ್ಟಿಸಿದವರು. ರಾಮಾಯಣ, ಮಹಾಭಾರತಗಳನ್ನು ತಮ್ಮ ಒಳನೋಟದಿಂದ ನೋಡಿ, ಶ್ರೀರಾಮ ಚರಿತಾಮೃತಂ ಮತ್ತು ಶ್ರೀಮನ್ಮಹಾಭಾರತ ಕಥಾಮೃತಂ ಗ್ರಂಥಗಳನ್ನು ರಚಿಸಿದ್ದಾರೆ. ಒಂದು `ಪಾತ್ರ’ ಹೇಳಲು ಸಾದ್ಯವಾಗದ, ನಿರೂಪಕ ಮಾತ್ರ ಹೇಳಲು ಸಾಧ್ಯವಿರುವ ಸಂಗತಿಗಳನ್ನು ಇದರಲ್ಲಿಕಾಣಬಹುದು.

ಇವರ‌ಇತರಕೃತಿಗಳು :

ಮಹಾಭಾರತದ ಪಾತ್ರಗಳು ತಮ್ಮ ಸ್ವಗತದ ಮಾತುಗಳನ್ನು ಹೇಳುವ `ಕುರುಕ್ಷೇತ್ರಕ್ಕೊಂದು‌ಆಯೋಗ’ ಒಂದು‌ಅಪೂರ್ವ, ಅನನ್ಯಕೃತಿ. ನಮ್ಮೆಲ್ಲರಕನಸು-ಆದರ್ಶವಾದ `ರಾಮರಾಜ್ಯ’ ಸ್ಥಾಪನೆಗೆ ರಾಮನನ್ನು ಸಿದ್ಧಗೊಳಿಸಿದವರು-ಮಹರ್ಷಿ ವಿಶ್ವಾಮಿತ್ರ-ಎನ್ನುವಚಿಂತನೆಯಲ್ಲಿರಚಿತವಾದ `ರಾಮರಾಜ್ಯದರೂವಾರಿ’, ರಾಮರಾಜ್ಯಕ್ಕೆ ಬುನಾದಿ ನಿರ್ಮಿಸಿದಾತ- ಭರತ-ಎನ್ನುವಕಲ್ಪನೆ `ರಾಮರಾಜ್ಯಪೂರ್ವರಂಗ’ದಲ್ಲಿ‌ಇದೆ. ಯಕ್ಷಗಾನ ವಿವೇಚನೆ, ಪ್ರಿಯದರ್ಶನಂ, ವಿಚಾರವಲ್ಲರಿ, ಧರ್ಮದರ್ಶನ‌ಇವರ ಕೃತಿಗಳು. ಭೀಷ್ಮಾರ್ಜುನ, ಸುಭದ್ರಾರ್ಜುನ, ಕೃಷ್ಣಸಂಧಾನ, ಸುಗ್ರೀವ ಸಖ್ಯ- ಅರ್ಥಸಹಿತಯಕ್ಷಗಾನ ಪ್ರಸಂಗಗಳು. ಧರ್ಮದಾಸಿ, ಶೂರ್ಪಖಿಯ ಸ್ವರಾಜ್ಯ – ನಾಟಕಗಳು.

40-50 ರದಶಕದಲ್ಲಿ ಸುಳ್ಯ ತಾಲೂಕಿನಚೊಕ್ಕಾಡಿಯಲ್ಲಿ-ಯಕ್ಷಗಾನ ನಾಟಕತಂಡಕಟ್ಟಿ ಪ್ರದರ್ಶನ ನೀಡಿದ್ದರು. ಆ ಕಾಲದಲ್ಲೇಗ್ಯಾಸ್ ಲೈಟ್‌ನಲ್ಲಿ ಬೆಳಕಿನ ಪರಿಣಾಮದ ಬಗ್ಗೆ ಪ್ರಯೋಗ ನಡೆಸಿದ್ದರು. ದೇರಾಜೆಯವರ ಮಕರಂದ, ಸುದಾಮ, ಚಂದ್ರಾವಳಿ ವಿಲಾಸದ‌ಅತ್ತೆ ಪಾತ್ರಗಳು ಜನಪ್ರಿಯವಾಗಿದ್ದವು. ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ಕುವೆಂಪು ಅವರರಕ್ತಾಕ್ಷಿ ನಾಟಕವನ್ನುದೇರಾಜೆಯವರು ನಿರ್ದೇಶಿಸಿದ್ದು ಇದುತುಂಬಾ ಪ್ರಸಿದ್ಧಿ ಪಡೆದಿತ್ತು.

1948ರಲ್ಲಿ, ಸುಳ್ಯ ತಾಲೂಕಿನಚೊಕ್ಕಾಡಿಯಲ್ಲಿದೇರಾಜೆಯವರು ಶ್ರೀರಾಮ ದೇವಾಲಯವನ್ನು ಕಟ್ಟಿಸಿದ್ದರು. ಶ್ರೀಯುತರು ಗ್ರಾಮದ ಪಠೇಲರಾಗಿದ್ದು‌ಉತ್ತಮ ಸಂಘಟಕರಾಗಿದ್ದರು. ಮೊಳಹಳ್ಳಿ ಶಿವರಾಯರ ಪ್ರೇರಣೆಯಿಂದ ಸಹಕಾರಿಕ್ಷೇತ್ರದಲ್ಲೂ ಸಾಧನೆ ಮಾಡಿದವರು, `ಉತ್ತಮ ಬತ್ತದ ಕೃಷಿ’ಗೆ ಪುರಸ್ಕಾರವನ್ನು ಪಡೆದವರು. ಸರಳ, ನೇರ ವ್ಯಕ್ತಿತ್ವ, ಸಾತ್ವಿಕ ಸ್ವಭಾವ, ಪ್ರಾಮಾಣಿಕ ಹೃದಯವಂತ. ನಿತ್ಯಜೀವನದಲ್ಲೂ ಸರಸ ಮಾತುಗಾರ. ನಡೆ-ನುಡಿ ಒಂದಾಗಿಸಿ, ಜೀವನದರ್ಶನವನ್ನು ಪಡೆದ ಮಹಾನುಭಾವದೇರಾಜೆಯವರು.

ಶ್ರೀ ಪಾದೆಕಲ್ಲು ನರಸಿಂಹ ಭಟ್ಟ ಅವರಿಗ ದೇರಾಜೆ ಪ್ರಶಸ್ತಿ

ಸಂಸ್ಕೃತ, ಕನ್ನಡ, ಇಂಗ್ಲೀಷ್ ಭಾಷಾ ಪ್ರವೀಣ; ಸಂಸ್ಕೃತದಲ್ಲಿ ಪ್ರಥಮ ಸ್ಥಾನದಲ್ಲಿ ಎಂ.ಎ. ಪದವಿ; ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸಶಾಸ್ತ್ರ ಪದವಿಧರ, ಅಧ್ಯಾಪಕ. ಅಭಿನವ ಗುಪ್ತ, ಭಾರತೀಯ ಋಷಿ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯ, ಸೇಡಿಯಾಪು ಕೃಷ್ಣಭಟ್ಟರ ತಥ್ಯದರ್ಶನದ ಆಂಗ್ಲಾನುವಾದ ಡಿಸ್ಕವರಿ ಆಫ್ ಫ್ಯಾಕ್ಟ್ ಮತ್ತು ಶಿಕ್ಷಣ ಶೋಧನೆ ಕೃತಿಗಳಿಂದ ಬಹುಮಾನ್ಯರಾಗಿ, ಮಾಂಬಾಡಿ ನಾರಾಯಣ ಭಾಗವತರ ಅಭಿನಂದನ ಗ್ರಂಥದ ಸಂಪಾದಕರಾಗಿ, ಹಲವಾರು ವೈಚಾರಿಕ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ, ತಮ್ಮ ವಿದ್ವತ್ತನ್ನು ಧಾರೆಯೆರೆದ, ಶ್ರೇಷ್ಠ ವಿದ್ವಾಂಸ.

ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಮತ್ತು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ತಮ್ಮ ವಿದ್ವತ್ಪೂರ್ಣ ಉಪನ್ಯಾಸದಿಂದ ಜನಮನ್ನಣೆ ಪಡೆದ ಪಾದೆಕಲ್ಲು ನರಸಿಂಹ ಭಟ್ಟರಿಗೆ ನ.29ರಂದು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಲಿರುವ ದೇರಾಜೆ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ  ‘ದೇರಾಜೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Write A Comment