ಕನ್ನಡ ವಾರ್ತೆಗಳು

ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ವಿವಾಹ ಪ್ರಕರಣ /ಮೈತ್ರಿಯಾ ಗೌಡರ ಅರ್ಜಿ ತಿರಸ್ಕರಿಸಿದ ಕೌಟುಂಬಿಕ ಕೋರ್ಟು

Pinterest LinkedIn Tumblr

Karthik

ಬೆಂಗಳೂರು, ನ.26: ಮುಂದಿನ ತಿಂಗಳು ಹಸಮಣೆ ಏರಲು ಸಜ್ಜಾಗಿರುವ ಕಾರ್ತಿಕ್ ಗೌಡ ಅವರಿಗೆ ಕೌಟುಂಬಿಕ ಕೋರ್ಟಿನಿಂದ ಸಿಹಿ ಸುದ್ದಿ ಸಿಕ್ಕಿದೆ. ಕಾರ್ತಿಕ್ ಗೌಡ ನನ್ನ ಗಂಡ ಎಂದು ಹೇಳಿ ಮೈತ್ರಿಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ‘ಕಾರ್ತಿಕ್ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ನಮ್ಮಿಬ್ಬರ ಮದುವೆಯಾಗಿದೆ. ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಂಡು ಪತ್ನಿಗೆ ಸೇರುವ ಎಲ್ಲಾ ಹಕ್ಕುಗಳನ್ನು ನೀಡತಕ್ಕದ್ದು, ಅಲ್ಲದೆ ಕಾರ್ತಿಕ್ ಅವರು ಬೇರೆ ಯಾವುದೇ ಯುವತಿ ಜೊತೆ ಮದುವೆಯಾಗುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇಂಥ ಪ್ರಯತ್ನಕ್ಕೆ ತಡೆ ಒಡ್ಡಬೇಕು ಎಂದು ಮೈತ್ರಿಯಾ ಅರ್ಜಿ ಹಾಕಿದ್ದರು.

ಆದರೆ, ಇಬ್ಬರ ನಡುವೆ ಮದುವೆಯಾಗಿದೆ ಎನ್ನುವುದಕ್ಕೆ ಸೂಕ್ತ ದಾಖಲೆಗಳು ಸಿಕ್ಕಿಲ್ಲ. ಫೋಟೋ ಪುರಾವೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಮದುವೆಯನ್ನು ಅನೂರ್ಜಿತಗೊಳಿಸಿದೆ. ಇದಲ್ಲದೆ, ಕಾರ್ತಿಕ್ ಗೌಡ ಅವರು ಬೇರೆ ಮದುವೆಯಾಗಬಾರದು ಮೈತ್ರಿಯಾ ಗೌಡ ಸಲ್ಲಿಸಿದ್ದ ಅರ್ಜಿ ಕೂಡಾ ತಿರಸ್ಕರಲಾಗಿದ್ದು, ಕಾರ್ತಿಕ್ ಅವರು ತಮ್ಮ ಮದುವೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ.

ಕೋರ್ಟ್ ಹೇಳಿದ್ದೇನು?: ಅದರೆ, ಕಥೆ ಇಲ್ಲಿಗೆ ಮುಗಿಯುವುದಿಲ್ಲ ನಟಿ ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ಅವರ ಪ್ರೇಮ-ವಿವಾಹ ಪ್ರಕರಣ ಮತ್ತೆ ವಿವಿಧ ಕೋರ್ಟ್ ಗಳ ಕಟಕಟೆಯ ಮುಂದೆ ಬರುವ ಸಾಧ್ಯತೆಯಿದೆ. ಹಿಂದೂ ಸಂಸ್ಕೃತಿ ಪ್ರಕಾರ ಮದುವೆಯಾಗಿಲ್ಲ, ತಾಳಿ ಕಟ್ಟಿರುವ ಹಾಗೂ ಸಪ್ತಪದಿ ತುಳಿದಿರುವ ಚಿತ್ರಗಳನ್ನು ಒದಗಿಸಿಲ್ಲ, ಹಿಂದೂ ವಿವಾಹ ಕಾಯ್ದೆ ಅನ್ವಯ ವಿವಾಹವನ್ನು ಊರ್ಜಿತಗೊಳಿಸಲು ಅಗತ್ಯವಾದ ದಾಖಲೆಗಳನ್ನು ಅರ್ಜಿದಾರರು ಒದಗಿಸಿಲ್ಲ. ವಿವಾಹ ನೋಂದಣಿ ಮಾಡಿಸಿ, ಮದುವೆ ಪ್ರಮಾಣ ಪತ್ರ ಪಡೆದಿಲ್ಲ ಎಂದು ಕೋರ್ಟ್ ಹೇಳಿದ ಅದರೆ, ಕೋರ್ಟ್ ಕೆಲ ಸಾಕ್ಷಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಸೂಕ್ತ ದಾಖಲೆಗಳಿಲ್ಲದ ಕಾರಣ ಅರ್ಜಿ ತಿರಸ್ಕರಿಸಲಾಗಿದೆ.

ಅರಿಶಿನ ಕೊಂಬು ಕಟ್ಟಿದರೆ ಅದು ಮದುವೆಗೆ ಸಮಾನ ಎಂಬುದು ಹಿಂದೂ ಧಾರ್ಮಿಕ ನಂಬಿಕೆ. ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಮೈತ್ರಿಯಾ ಅವರ ಪರ ವಕೀಲರು ಹೇಳಿದ್ದಾರೆ. ಕಾರ್ತಿಕ್ ಪರ ವಕೀಲರು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ನಮ್ಮ ಅರ್ಜಿದಾರರ ಮದುವೆಗೆ ಅಡ್ಡಿಪಡಿಸದಂತೆ ಮೈತ್ರಿಯಾ ಅವರ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.ಅದರಂತೆ ಕಾರ್ತಿಕ್ ಪರ ತೀರ್ಪು ಹೊರಬಂದಿದೆ. ಮೈತ್ರಿಯಾ ಅವರ ಅರ್ಜಿಯ ಮೊದಲ ಮನವಿ : ನಾನು ಹಾಗೂ ಕಾರ್ತಿಕ್ ಪತಿ ಪತ್ನಿ ಎಂಬುದು ಅನೂರ್ಜಿತಗೊಂಡಿರುವುದರಿಂದ ಕಾರ್ತಿಕ್ ಹೊಸ ಮದುವೆಗೆ ಅನುಮತಿ ನೀಡಬಾರದು ಎಂಬ ಎರಡನೇ ಮನವಿ ತಾನೇ ತಾನಾಗಿ ಮುರಿದು ಬಿದ್ದಿದೆ.

Write A Comment