ಕನ್ನಡ ವಾರ್ತೆಗಳು

  ತೈಲ ನಿಗಮಗಳಿಂದ ಸಿಹಿ ಸುದ್ದಿ :  ನ.30ರಿಂದ  ಪೆಟ್ರೋಲ್, ಡೀಸೆಲ್ ದರದಲ್ಲಿ 2 ರೂ.ಕಡಿತ

Pinterest LinkedIn Tumblr

petrol_1

ನವದೆಹಲಿ,ನ.26: ಜನಸಾಮಾನ್ಯರಿಗೆ ತೈಲನಿಗಮಗಳ ಸಿಹಿ ಸುದ್ದಿ ನವೆಂಬರ್ 30ರಂದು ಹೊರಬೀಳಲಿದೆ. ಪೆಟ್ರೋಲ್ , ಡೀಸೆಲ್ ದರದಲ್ಲಿ 2 ರೂ. ಕಡಿತವನ್ನು ಕೇಂದ್ರಸರ್ಕಾರ ಮಾಡುವ ಸಾಧ್ಯತೆಯಿದ್ದು, ನವೆಂಬರ್ 30ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಕಚ್ಚಾ ತೈಲ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಕಡಿತ ಮಾಡಲಾಗುತ್ತದೆ. ನ. 30ರಂದು ತೈಲ ನಿಗಮಗಳ ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ದರಗಳ ಕಡಿತವನ್ನು ಪ್ರಕಟಿಸಲಾಗುತ್ತದೆ.

ಒಂದು ವೇಳೆ ಪೆಟ್ರೋಲ್ ದರದಲ್ಲಿ ಕಡಿತವಾದಲ್ಲಿ ಆಗಸ್ಟ್ 2014 ರಿಂದ ಸತತ ಏಳನೇ ಬಾರಿಗೆ ಪೆಟ್ರೋಲ್ ದರದಲ್ಲಿ ಇಳಿಕೆಯಾದಂತಾಗುತ್ತದೆ. ಕೇಂದ್ರ ಸರಕಾರ ದರ ನಿಯಂತ್ರಣ ಮುಕ್ತಗೊಳಿಸಿದ ನಂತರ ಮೊದಲ ಬಾರಿಗೆ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ.

Write A Comment