ಕನ್ನಡ ವಾರ್ತೆಗಳು

ಉಡುಪಿ: ಚೆಂಡಾಟದ ವೇಳೆ 18 ಅಡಿ ಕಾಂಪೌಂಡ್ ಹಾರಿದ ಬಾಲಕ ಸಾವು

Pinterest LinkedIn Tumblr

boy-slip-flat

ಉಡುಪಿ: ಚೆಂಡು ಹೆಕ್ಕಲು 18 ಅಡಿ ಎತ್ತರದ ಕಾಂಪೌಂಡ್ ಹತ್ತಿ ಹಾರಿ ಬಿದ್ದ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಕುಂಜಿಬೆಟ್ಟಿನ ವಸತಿ ಸಂಕೀರ್ಣದಲ್ಲಿ ವಾಸವಿರುವ ಹರೀಶ್ ಎಸ್.ಶೆಟ್ಟಿ ಪುತ್ರ ಹೃತಿಕ ಹೆಚ್.ಶೆಟ್ಟಿ (14) ಮೃತ ಬಾಲಕ.

ಸಂಜೆ ಫ್ಲ್ಯಾಟ್‌ನ ಆವರಣದಲ್ಲಿ ಆಟವಾಡುತ್ತಿದ್ದ ಸಂದರ್ಭ ಚೆಂಡು ಪಕ್ಕದ ಫ್ಲ್ಯಾಟಿನ ಕಾಂಪೌಂಡ್ ಒಳಗೆ ಬಿತ್ತು. ಹೃತಿಕ್ ಹೆಚ್. ಶೆಟ್ಟಿ ಚೆಂಡನ್ನು ಕಾಂಪೌಂಡಿನಿಂದ ಪಾರ್ಕಿಂಗ್ ಸ್ಥಳಕ್ಕೆ ಎಸೆದು, ಬಳಿಕ 18 ಅಡಿ ಎತ್ತರದ ಕಾಂಪೌಂಡ್ ಗೋಡೆ ಏರಿ ಕೆಳಗೆ ಜಿಗಿದು ಬಿದ್ದ ಪರಿಣಾಮ ಮುಖ, ಎದೆ, ಹೊಟ್ಟೆ, ಕಾಲಿಗೆ ಗಾಯ ಹಾಗೂ ಗುದ್ದಿದ ನೋವಾಗಿತ್ತು. ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ದಾಖಲಿಸಿದ್ದು ರಾತ್ರಿ 11.15ಕ್ಕೆ ಮೃತಪಟ್ಟಿದ್ದಾನೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment