ಕನ್ನಡ ವಾರ್ತೆಗಳು

ಪ್ರತಿಯೊಬ್ಬ ಬ್ಯಾರಿಗಳಲ್ಲೂ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಉಸಿರಾಗಬೇಕು :ಆಳ್ವಾಸ್ ಬ್ಯಾರಿ ಭಾಷಾ ಸಿರಿ ಕಾರ್ಯ ಕ್ರಮದಲ್ಲಿ ಸಚಿವ ಖಾದರ್

Pinterest LinkedIn Tumblr

Alvas_Bery_siri

ಮೂಡುಬಿದಿರೆ, ವಿದ್ಯಾಗಿರಿ, (ಬಿ.ಎಂ.ಇದಿನಬ್ಬ ವೇದಿಕೆ, ಅಹ್ಮದ್ ನೂರಿ ಸಭಾಂಗಣ), ನ.17: ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟಕ್ಕೆ ಏರಿಸಿದ ಡಾ.ಮೋಹನ್ ಆಳ್ವರು ತನ್ನ 11ನೆ ಆಳ್ವಾಸ್ ನುಡಿಸಿರಿಯಲ್ಲಿ ಇತರ ಸಮುದಾಯ, ಭಾಷಿಗರನ್ನು ಹೇಗೆ ಗೌರವಿಸಬೇಕು ಎಂದು ತೋರಿಸಿಕೊಟ್ಟ ಆಳ್ವರಿಂದಾಗಿ ಬ್ಯಾರಿ ಚಳವಳಿಗೆ ಹೊಸ ಶಕ್ತಿ ಸಿಕ್ಕಂತಾಗಿದೆ. ಹಾಗಾಗಿ ಪ್ರತಿಯೊಬ್ಬ ಬ್ಯಾರಿಗಳಲ್ಲೂ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಉಸಿರಾಗಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯಲ್ಲಿ ನಡೆಯುವ ‘ಆಳ್ವಾಸ್ ನುಡಿಸಿರಿ 2014’ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸಹಕಾರದೊಂದಿಗೆ ರವಿವಾರ ಜರಗಿದ ಬ್ಯಾರಿ ಭಾಷಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ -ಆಳ್ವಾಸ್ ಬ್ಯಾರಿ ಭಾಷಾ ಸಿರಿ ಕಾರ್ಯ ಕ್ರಮವನ್ನು ಮೂರು ತೆಂಗಿನ ಸಸಿಗಳಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನದ ಸಂದಭರ್ದಲ್ಲೂ ಕರ್ನಾಟಕದ ಎಲ್ಲಾ ಭಾಷಿಗರ ಸಮ್ಮೇಳನ ನಡೆಸುವ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಆ ಮೂಲಕ ಪ್ರಾದೇಶಿಕ ಭಾಷಿಗರ ಮಧ್ಯೆ ಮತ್ತಷ್ಟು ಅನ್ಯೋನ್ಯತೆ ಸಾಧಿಸಬಹುದು ಎಂದು ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್ ವಹಿಸಿದ್ದರು. ಶಾಸಕ ಬಿ.ಎ.ಮೊಯ್ದಿನ್ ಬಾವಾ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಶುಭ ಹಾರೈಸಿದರು. ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿಯ ರೂವಾರಿ ಡಾ.ಮೋಹನ್ ಆಳ್ವರನ್ನು ಅಕಾಡಮಿಯ ಪರವಾಗಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ನುಡಿಸಿರಿಯ ಸರ್ವಾಧ್ಯಕ್ಷ ನಾಡೋಜ ಡಾ. ಸಿದ್ದಲಿಂಗಯ್ಯ, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರ, ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್, ಟಿ.ಆರ್.ಎಫ್. ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಭಾರತೀಯ ಕೃಷಿಕ ಸಮಾಜದದ ದ.ಕ.ಜಿಲ್ಲಾಧ್ಯಕ್ಷ ಹಾಜಿ ಹೈದರ್ ಪರ್ತಿಪ್ಪಾಡಿ, ನಿವೃತ್ತ ಕಂದಾಯ ನಿರೀಕ್ಷಕ ಮೂಸಬ್ಬ ಜೋಕಟ್ಟೆ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಜಿಲ್ಲಾ ಉಪಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಆಯಿಶಾ ಎ.ಎ.ಪೆರ್ಲ, ಅಬ್ಬಾಸ್ ಕಿರುಗುಂದ, ಅಲಿಯಬ್ಬ ಜೋಕಟ್ಟೆ, ಯೂಸುಫ್ ವಕ್ತಾರ್, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಹಾಜಿ ಅಬ್ದುಲ್ ಅಝೀಝ್ ಬೈಕಂಪಾಡಿ, ಅಝೀಝ್ ಹಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಗಾಯಕ ಶರೀಫ್ ನಿರ್ಮುಂಜೆ ಧ್ಯೇಯಗೀತೆ ಹಾಡಿದರು. ಬ್ಯಾರಿ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ವಂದಿಸಿದರು. ಅಕಾಡಮಿಯ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಇಸ್ಮಾಯೀಲ್ ಮೂಡುಶೆಡ್ಡೆ ರಚಿಸಿ, ನಿರ್ದೇಶಿಸಿದ ಹಾಸ್ಯ ‘ನಾಟಕ ಕಾಸಿಮಾಕರೊ ಪಿತ್ತ್‌ಲ್’ ಹಾಗೂ ಕೊಳ್ನಾಡು ಮತ್ತು ಬಿ.ಸಿ.ರೋಡ್ ತಂಡದಿಂದ ದಫ್ ಪ್ರದರ್ಶನಗೊಂಡಿತು. ಎಡಪದವು ಐಡಿಯಲ್ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಹುಸೈನ್ ಕಾಟಿಪಳ್ಳ ಮತ್ತು ತಂಡದಿಂದ ಬ್ಯಾರಿ ಭಾಷಾ ಹಾಡು ಮತ್ತು ಖವ್ವಾಲಿ ಕಾರ್ಯಕ್ರಮ, ಅಝೀಝ್ ಬೈಕಂಪಾಡಿ ಮತ್ತು ತಂಡದಿಂದ ತೇನ್‌ಕಿನ್ಯ ಸಂಗೀತ ನಾಟಕ ಪ್ರದರ್ಶನಗೊಂಡಿತು.

ಸಮದ್ ಕಾಟಿಪಳ್ಳರ ಬ್ಯಾರಿ ಚುಟುಕುಗಳು, ಎಂ.ಜಿ. ರಹೀಂ ತಂಡದಿಂದ ಕೋಲ್ಕಲಿ, ಕಲ್ಲಡ್ಕ ತಂಡದಿಂದ ಒಪ್ಪಣೆ ಹಾಡು ಹಾಗೂ ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ಮುಹಮ್ಮದ್ ಶರೀಫ್ ನಿರ್ಮುಂಜೆ, ರಹೀಂ ಬಿ.ಸಿ.ರೋಡ್, ಹುಸೈನ್ ಕಾಟಿಪಳ್ಳ, ಖಾಲಿದ್ ತಣ್ಣೀರುಬಾವಿ, ಸಮದ್ ಕಾಟಿಪಳ್ಳ, ಶೌಕತ್ ಪಡುಬಿದ್ರೆ, ಅಶ್ರಫ್ ಅಪೋಲೊ ಕಲ್ಲಡ್ಕ, ಶಮೀರ್ ಮುಲ್ಕಿ, ಸುಹೈಲ್ ಬಡ್ಡೂರು, ಮಲ್ಲಿಕಾ, ನಯನಾ ಬ್ಯಾರಿ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸಿದರು.

Write A Comment