ಕನ್ನಡ ವಾರ್ತೆಗಳು

‘ನಮಗೆ ಸಿಗ್ನಲ್ ಸಿಗುತ್ತಿಲ್ಲ, ಊರಿಗೊಂದು ಟವರ್ ಬೇಕು’; ತಗ್ಗರ್ಸೆ ಜನರ ಒತ್ತಾಯ

Pinterest LinkedIn Tumblr

mobile_Tower-Taggarse

ಕುಂದಾಪುರ: ಬೈಂದೂರು ತಗ್ಗರ್ಸೆ ಗ್ರಾಮದ ಗಡಿ ಪ್ರದೇಶ ಗಂಗಾನಾಡು, ಅತ್ಯಾಡಿ ಭಾಗದಲ್ಲಿ ಹೆಚ್ಚಿನವರು ಅತೀ ಹಿಂದುಳಿದ ಮರಾಠಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯವರು ವಾಸಿಸುತ್ತಿದ್ದು. ಇಲ್ಲಿ ಬಿ.ಎಸ್.ಎನ್.ಎಲ್.ನ  ಲ್ಯಾಡ್ ಫೋನ್ ಸಂಪರ್ಕ ಇರುವುದಿಲ್ಲ. ವಯರ್‌ಲೆಸ್ ಸಂಪರ್ಕಗಳು ಸಿಗ್ನಲ್ ತೊಂದರೆಯಿಂದ ಸಮರ್ಪಕವಾದ ಸೇವೆಯು ಸಿಗುತ್ತಿಲ್ಲ. ಹೊಸ ವಯರ್‌ಲೆಸ್ ಸಂಪರ್ಕಕ್ಕೆ ಬಿ.ಎಸ್.ಎನ್.ಎಲ್ ಬೈಂದೂರು ಕೇಂದ್ರದಲ್ಲಿ ದೂರವಾಣಿ ಯಂತ್ರಗಳು ಸಿಗುತ್ತಿಲ್ಲ.

ಗ್ರಾಮದ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್ ಮೊಬೈಲ್ ಸಿಗ್ನಲ್‌ಗಳು ಸಿಗುತ್ತಿಲ್ಲ. ಹೀಗಾಗಿ ದಿನದ ಅತೀ ಅಗತ್ಯವಾದ ಸಂಪರ್ಕ ವ್ಯವಸ್ಥೆಯಿಂದ ನಾವು ವಂಚಿತರಾಗಿರುತ್ತೇವೆ ಎಂದು ಆರೋಪಿಸಿದ್ದಾರೆ. ಇಲ್ಲಿನ ಗ್ರಾಮಸ್ಥರು ಅತೀ ಹಿಂದುಳಿದವರಿಗೆ ಸಾಮಾಜಿಕ ನ್ಯಾಯದ ಪರಿಧಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರಕಾರದ ಸ್ವಾಮ್ಯದ ದೂರವಾಣಿ ಸಂಸ್ಥೆಯವರು ಇಲ್ಲಿ ಮೊಬೈಲ್ ಟವರನ್ನು ಆದಷ್ಟು ಶೀಘ್ರದಲ್ಲಿ ಸ್ಥಾಪಿಸಬೇಕೆಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳಿಗೂ ಮನವಿ ಮಾಡಿಕೊಂಡಿದ್ದಾರೆ.

ಶೀಘ್ರದಲ್ಲಿ ಮೊಬೈಲ್ ಸೇವೆಗೆ ಟವರ್ ನಿರ್ಮಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

Write A Comment