UAE

ದುಬೈ: ನ.22ರಂದು ‘ಕರ್ನಾಟಕ ರಾಜ್ಯೋತ್ಸವ- 2026’ ಸಂಭ್ರಮ; ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Pinterest LinkedIn Tumblr

ದುಬೈ: 1985ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಘ ದುಬೈ ಹಾಗೂ ಕನ್ನಡಿಗರ ಕೂಟ ದುಬೈ ಇವರ ಸಂಯುಕ್ತ ಆಶ್ರಯದಲ್ಲಿ ವರ್ಷದ ಅತಿ ದೊಡ್ಡ ಸಂಭ್ರಮವಾದ ‘ದುಬೈ ಕರ್ನಾಟಕ ರಾಜ್ಯೋತ್ಸವ – 2026’ ಕಾರ್ಯಕ್ರಮವನ್ನು ನವೆಂಬರ್ 22, 2026ರ ಭಾನುವಾರದಂದು ಬೆಳಿಗ್ಗೆ 10:00 ರಿಂದ ರಾತ್ರಿ 8:00 ಗಂಟೆಯವರೆಗೆ ಆಯೋಜಿಸಲಾಗಿದೆ. ದುಬೈನ ಅಲ್ ಕಿಸೈಸ್ 4ರಲ್ಲಿರುವ (ಮದೀನಾ ಮಾಲ್ ಹಿಂಭಾಗ) ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಸಭಾಂಗಣದಲ್ಲಿ ಈ ದಿನಪೂರ್ತಿ ಉತ್ಸವ ನಡೆಯಲಿದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು: ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಜಾಗತಿಕ ಕನ್ನಡಿಗರ ಒಗ್ಗಟ್ಟನ್ನು ಸಾರುವ ಈ ಕಾರ್ಯಕ್ರಮದಲ್ಲಿ ವಿವಿಧ ವಿಶೇಷತೆಗಳನ್ನು ಹಮ್ಮಿಕೊಳ್ಳಲಾಗಿದೆ.

ಭವ್ಯ ಮೆರವಣಿಗೆ: ವಿವಿಧ ಕನ್ನಡಪರ ಸಂಘಟನೆಗಳ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳ ಆಕರ್ಷಕ ಮೆರವಣಿಗೆ ನಡೆಯಲಿದೆ. ಜೊತೆಗೆ ಕರ್ನಾಟಕದ ಕಲೆ, ಕರಕುಶಲ ವಸ್ತುಗಳು, ಸಾಹಿತ್ಯ, ಖಾದ್ಯಗಳು ಹಾಗೂ ವಾಣಿಜ್ಯ ಮಳಿಗೆಗಳ ಭವ್ಯ ಪ್ರದರ್ಶನ ಇರಲಿದೆ.

ಸಾಂಸ್ಕೃತಿಕ ವೈಭವ: ಸಂಜೆಯ ಪ್ರಮುಖ ಆಕರ್ಷಣೆಯಾಗಿ ಖ್ಯಾತ ಗಾಯಕರಾದ ವಸುಶ್ರೀ ಹಳೆಮನೆ ಮತ್ತು ಸುಪ್ರೀತ್ ಫಲ್ಗುಣ ಅವರಿಂದ ‘ಕನ್ನಡ ರಸಮಂಜರಿ’ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಯುಎಇಯ ಸ್ಥಳೀಯ ಪ್ರತಿಭೆಗಳಿಂದ ಜಾನಪದ, ಶಾಸ್ತ್ರೀಯ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರವಿ ಪ್ರಕಾಶ್ ಮತ್ತು ಆರತಿ ಅಡಿಗ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಮುಖ್ಯ ಅತಿಥಿಗಳು ಮತ್ತು ಗಣ್ಯರು: ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ, ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಅನಿವಾಸಿ ಭಾರತೀಯ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ, ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಸಂಸ್ಥಾಪಕ ಡಾ. ತುಂಬೆ ಮೊಯಿದೀನ್, ಇಂಡಿಯನ್ ಕ್ವಿಜ್ ಮಾಸ್ಟರ್ ಡಾ. ಎನ್. ಸೋಮೇಶ್ವರ, ಯುಎಇ ಕನ್ನಡಿಗರ ಪೋಷಕ ಡಾ. ಬಿ.ಆರ್. ಶೆಟ್ಟಿ, ಕೆಎನ್‌ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಸಯಾನ್ ಪ್ರಾಪರ್ಟೀಸ್‌ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಅಮರನಾಥ್ ಹಾಗೂ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ಅವರು ಪಾಲ್ಗೊಳ್ಳಲಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಮತ್ತು ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತಿದೆ

ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ರಾಮಚಂದ್ರ ಹೆಗಡೆ

ದುಬೈ ಸೇವಾ ರತ್ನ ಪ್ರಶಸ್ತಿ: ಕಿಶೋರ್ ಗಟ್ಟಿ ಉಚ್ಚಿಲ (ಕಲಾಸೇವೆ), ಶೇಖರ್ ಡಿ. ಶೆಟ್ಟಿಗಾರ್ (ಕಲಾಸೇವೆ) ಮತ್ತು ಶೇಖ್ ಮುಜಾಫರ್ (ಸಮಾಜಸೇವೆ), ರಾಜೇಶ್ ಮೆರ್ವಿನ್ ಅಲೋಸಿಯಸ್ ಸಿಕ್ವೇರಾ (ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿ)

ವಿಶೇಷ ಗೌರವ: ರಜನಿ ಶೆಟ್ಟಿ, ಮಂಗಳೂರು

ವಿಶೇಷ ಗೌರವ: ಕನ್ನಡ ಪಾಠ ಶಾಲೆ ದುಬೈ

ಸಾರ್ವಜನಿಕರಿಗೆ ಉಚಿತ ಪ್ರವೇಶ: ಪೋಸ್ಟರ್‌ನಲ್ಲಿರುವ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಿಕೊಳ್ಳುವ ಮೂಲಕ ಉಚಿತ ಪ್ರವೇಶ ಪಡೆಯಬಹುದು. ಮಧ್ಯಾಹ್ನ 1:00 ರಿಂದ 2:00 ಗಂಟೆಯವರೆಗೆ ಎಲ್ಲರಿಗೂ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಎತಿಸಲಾತ್ ಮೆಟ್ರೋ ನಿಲ್ದಾಣದಿಂದ (Etisalat Metro Station) ಕಾರ್ಯಕ್ರಮದ ಸ್ಥಳಕ್ಕೆ ಉಚಿತ ಶಟಲ್ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಯುಎಇಯ ಎಲ್ಲಾ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ  ಶಶಿಧರ್ ನಾಗರಾಜಪ್ಪ ಮತ್ತು ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಪ್ರಕಟಣೆಯಲ್ಲಿ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶಶಿಧರ್ ನಾಗರಾಜಪ್ಪ (ಅಧ್ಯಕ್ಷರು, ಕರ್ನಾಟಕ ಸಂಘ ದುಬೈ): +971 50 629 1566

ಮನೋಹರ್ ಹೆಗಡೆ (ಪ್ರಧಾನ ಕಾರ್ಯದರ್ಶಿ): 055 548 5003

ವಿನುತಾ ಪ್ರಕಾಶ್ (ಸಾಂಸ್ಕೃತಿಕ ಕಾರ್ಯದರ್ಶಿ): +971 55 887 4594

ಅರುಣ್ ಕುಮಾರ್ ಎಂ.ಕೆ (ಅಧ್ಯಕ್ಷರು, ಕನ್ನಡಿಗರ ಕೂಟ ದುಬೈ): +971 56 991 9774

Comments are closed.