UAE

ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ: 11ನೇ ವರ್ಷದ ಸಾರ್ವಜನಿಕ ಗಣೇಶ ಉತ್ಸವ ವಿಜೃಂಭಣೆಯಿಂದ ಸಂಪನ್ನ

Pinterest LinkedIn Tumblr

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ಇದರ ವತಿಯಿಂದ  ನಡೆದ 11ನೇ ವರ್ಷದ ಸಾರ್ವಜನಿಕ ಗಣೇಶ ಉತ್ಸವವು ಬಹಳ ವಿಜೃಂಭಣೆಯಿಂದ 31 ಆಗಸ್ಟ್ 2025 ರಂದು ಆದಿತ್ಯವಾರ ಇಂಡಿಯನ್ ಅಸೋಸಿಯೇಷನ್ ಹಾಲ್ ಅಜ್ಮಾನ್‌ನಲ್ಲಿ ನೆರವೇರಿತು.

ಪುರೋಹಿತರಾದ ಸಂತೂರ್ ಲಕ್ಷ್ಮಿಕಾಂತ್ ಭಟ್ ಹಾಗೂ ರಾಜೇಶ್ ಅಡಿಗರವರ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ ಮಹಾ ಅನ್ನದಾನದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾನ್ ಡಾ. ಸತ್ಯಕೃಷ್ಣ ಭಟ್, ಉದ್ಯಮಿ ಡಾ. ಬಿ.ಆರ್ ಶೆಟ್ಟಿ ಅಬುದಾಬಿ, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್,  ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್, ಉದ್ಯಮಿ ರಾಘವೇಂದ್ರ ಕುಡ್ವ. ಕೆ.ಎನ್.ಆರ್ ಫೋರಂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಹರೀಶ್ ಶೇರಿಗಾರ್, ಮಾರ್ಗದೀಪ ಸಮಿತಿಯ ಅಧ್ಯಕ್ಷ ಮಹೇಶ್ ಚಂದ್ರಗಿರಿ, ಉಪಾಧ್ಯಕ್ಷ ಪ್ರವೀಣ್ ಉಪ್ಪೂರು, ಜೊತೆ  ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್, ಕೋಶಾಧಿಕಾರಿ ರಾಜೇಶ್ ರಾವ್, ಕಾರ್ಯಕ್ರಮದ ಸಂಚಾಲಕರಾದ ಸುಗಂಧರಾಜ ಬೇಕಲ್ ಸ್ವಾಗತಿಸಿದರು.

ಭಜನಾ ತಂಡ: ಮಾರ್ಗದೀಪ ಸಾಂಸ್ಕೃತಿಕ ಸಮಿತಿ. ರಾಮಕ್ಷತ್ರಿಯ  ಮಹಿಳಾ ವೃಂದ.  ಶ್ರೀ ಗುರು ರಾಘವೇಂದ್ರ ಬಳಗ. ಓಂ ಶ್ರೀ ಭಜನಾ ತಂಡ ಶಾರ್ಜಾ. ರಾಜರಾಜೇಶ್ವರಿ ಭಜನಾ ಮಂಡಳಿ. ಮೊಗವೀರ ಭಜನಾ  ತಂಡದವರಿಂದ  ಭಕ್ತಿ ಪೂರ್ವಕ ಭಜನಾ ನೆರವೇರಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಕುಮಾರಿ ದಿವ್ಯನಿಧಿ ರೈ  ಯವರಿಂದ “ಸ್ವರ ಸಮರ್ಪಣಾ” ಸಂಗೀತ ಕಾರ್ಯಕ್ರಮ ನೆರವೇರಿತು. ನೃತ ಶಕ್ತಿ ರೂಪಕಿರಣ್ ಮತ್ತು ಬಳಗ. ವಾಗ್ ದೇವಿ ಮ್ಯೂಸಿಕ್ ಸ್ಕೂಲ್ ದುಬೈ. ವಿದುಷಿ ಶ್ರೀಮತಿ ಸೋನಿಯಾ ಲೋಬೊ. ಭರತನಾಟ್ಯ ನೆರವೇರಿತು.

ಭಕ್ತಿ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀಮತಿ ಸೂರ್ಯ ಕೇಶವನ್.  ಶ್ರೀ ರಾಮಚಂದ್ರ ಬೆದ್ರಡ್ಕ, ಡಾ ಸಂತೋಷ್ ಕೆಮ್ಮಿಂಜೆ ಹಾಡಿದರು. ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವನ್ನು ಹರಿಪ್ರಸಾದ್ ಕೋಟೆ. ವಿಘ್ನೇಶ್ ಕುಂದಾಪುರ ಆರತಿ ಅಡಿಗ ನಡೆಸಿಕೊಟ್ಟರು. ಸತೀಶ್ ಹಂಗ್ಳೂರು ಸಹಕರಿಸಿದರು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು  ಭಕ್ತಾದಿಗಳು, ದಾನಿಗಳು ಸಂಘ ಸಂಸ್ಥೆಗಳಿಗೆ ಹಾಗೂ ಸಮಿತಿ ಎಲ್ಲಾ ಸದಸ್ಯರುಗಳಿಗೂ  ಕನ್ನಡ ಪರ ಸಂಘಟನೆಗಳಿಗೆ ಅಧ್ಯಕ್ಷರು ವಂದಿಸಿದರು.

ಸಂಜೆ ನಡೆದ ವಿಸರ್ಜನಾ ಮೆರವಣಿಗೆಯಲ್ಲಿ  ಕೇರಳದ ಚಂಡೆ, ನಾಸಿಕ್ ಬ್ಯಾಂಡ್ ಭಕ್ತರ ನೃತ್ಯ ಹೆಜ್ಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Comments are closed.