ಕುಂದಾಪುರ: ಸಮಾಜ ಸೇವಕ, ಆಂಬುಲೆನ್ಸ್ ಚಾಲಕ ಅಯೂಬ್ ಕೆ.ಎಸ್. ಕೋಟೇಶ್ವರ (56) ಎನ್ನುವರು ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಇವರು ಹಲವು ವರ್ಷಗಳಿಂದ ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರಾಗಿದ್ದು ಸಮಾಜ ಸೇವಕರಾಗಿದ್ದರು. ತಿಂಗಳ ಹಿಂದೆ ಸ್ವಂತ ಆಂಬುಲೆನ್ಸ್ ಖರೀದಿಸಿದ್ದು ಇತ್ತೀಚೆಗೆ ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಡಿವೈಡರ್ ಬಳಿ ನಿಯಂತ್ರಣ ತಪ್ಪಿ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ಜಖಂಗೊಂಡು ಅದನ್ನು ಗ್ಯಾರೇಜ್ಗೆ ರಿಪೇರಿಗೆ ಇಟ್ಟಿದ್ದು ಹಣ ಹೊಂದಿಸಿಕೊಳ್ಳುವ ಹೆಣಗಾಟದಲ್ಲಿದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿಯೂ ಒತ್ತಡದಲ್ಲಿದ್ದ ಅವರು ಮನೆಯ ಕೋಣೆಗೆ ಹೋಗಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ರವಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೃತರ ಸಹೋದರ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.