ಆರೋಗ್ಯ

‘ಬಡವರ ಡಾಕ್ಟರ್’ ಎಂದೇ ಪ್ರಸಿದ್ಧಿಯಾದ ಕುಂದಾಪುರದ ಡಾ.ಎ.ಎಸ್.ಕಲ್ಕೂರ್ ವಿಧಿವಶ

Pinterest LinkedIn Tumblr

ಕುಂದಾಪುರ: ನಗರದಲ್ಲಿ ‘ಬಡವರ ಡಾಕ್ಟರ್’ ಎಂದೇ ಪ್ರಸಿದ್ಧಿಯಾದ ಖ್ಯಾತ ವೈದ್ಯರಾಗಿದ್ದ ಹಂಗಳೂರಿನ‌ ಯೂನಿಟಿ ಹಾಲ್ ಬಳಿಯ ನಿವಾಸಿ ಡಾ.ಎ.ಎಸ್. ಕಲ್ಕೂರ (87) ಅವರು ವಯೋ ಸಹಜ ಅಸೌಖ್ಯದಿಂದ ಶನಿವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ ಬಳಿಕ ಖಾಸಗಿಯಾಗಿ ಕ್ಲಿನಿಕ್ ತೆರೆದು, ಕಡಿಮೆ ಶುಲ್ಕದಲ್ಲಿ ಸೇವೆ ನೀಡುತ್ತಿದ್ದರು. 5,10,20,30 ರೂ. ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ ಬಡ ರೋಗಿಗಳಿಗೆ ಸಹಕಾರಿಯಾಗಿದ್ದರು.

ಸುದೀರ್ಘ 50 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ್ದ ಅವರು ನಾಟಕ, ಯಕ್ಷಗಾನ,
ಕಲೆ, ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಮೃತರಿಗೆ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.

Comments are closed.