ಉಡುಪಿ: ಹೆಬ್ರಿ ತಾಲೂಕು ಆಗುಂಬೆ ಘಾಟ್ ನ ನಾಲ್ಕನೇ ತಿರುವಿನಲ್ಲಿ ಸುಮಾರು 30 ಮೀಟರ್ ಭೂಕುಸಿತ ಉಂಟಾಗಿದೆ.

ಭಾರಿ ಮಳೆಯ ಹಿನ್ನೆಲೆ ಘಾಟಿಯ 4 ನೇ ತಿರುವಿನಲ್ಲಿ ಗುಡ್ಡ ಕುಸಿತವಾಗಿದೆ. ಕುಸಿತಗೊಂಡ ಗುಡ್ಡದ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಸುಮಾರು 3 ಗಂಟೆಗಳ ಕಾಲ ಬೇಕಾಗಬಹುದು ಎನ್ನಲಾಗಿದೆ
ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದ ಕಾರಣ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಲಾಗಿದ್ದು
ಪ್ರಯಾಣಿಕರು ಬದಲಿ ರಸ್ತೆ ಉಪಯೋಗಿಸುವುದು ಸೂಕ್ತ ಎಂದು ಪ್ರಕಟಣೆ ತಿಳಿಸಿದೆ.
Comments are closed.