ಪ್ರಮುಖ ವರದಿಗಳು

ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ: ಓವೈಸಿ

Pinterest LinkedIn Tumblr

ಲಕ್ನೋ: ಹಿಜಬ್ ಧರಿಸಿದ ಮಹಿಳೆಯೇ ದೇಶದಲ್ಲಿ ಮುಂದೊಂದು ದಿನ ಪ್ರಧಾನಿ ಸ್ಥಾನಕ್ಕೆ ಏರುತ್ತಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವೀಡಿಯೋ ಮಾಡಿರುವ ಅವರು, ಹಿಜಬ್‍ನ್ನು ಧರಿಸಿ ಕಾಲೇಜಿಗೂ ಹೋಗುತ್ತಾರೆ. ಹಿಜಬ್ ಧರಿಸಿಯೇ ಡಾಕ್ಟರ್, ಜಿಲ್ಲಾಧಿಕಾರಿಯಂತಹ ವಿವಿಧ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ. ಜೊತೆಗೆ ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ಪ್ರಧಾನಿಯಾಗುತ್ತಾರೆ. ಇದನ್ನು ನೋಡಲು ನಾನು ಬದುಕಿರುತ್ತೇನೋ, ಇಲ್ಲವೋ ಎನ್ನುವುದರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನಾನು ಹೇಳಿದ ಮಾತು ಒಂದು ದಿನ ಸತ್ಯವಾಗುತ್ತದೆ ಎಂದರು.

ಹೆಣ್ಣು ಮಕ್ಕಳು ಹಿಜಬ್ ಧರಿಸಲು ನಿರ್ಧರಿಸಿ ಅದನ್ನು ಪೋಷಕರಿಗೆ ತಿಳಿಸಿದರೆ ಅದನ್ನು ಎಲ್ಲಾ ಪೋಷಕರು ಬೆಂಬಲಿಸುತ್ತಾರೆ. ಆಗ ಅದನ್ನು ಯಾರು ತಡೆಯುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಿಡಿಕಾರಿದ ಅವರು, ಮೋದಿ ಅವರು ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆ, ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಹಾಗೇ ಮಾತನಾಡುವಾಗಲೆಲ್ಲಾ ತ್ರಿವಳಿ ತಲಾಖ್ ಕಾನೂನನ್ನು ಉಲ್ಲೇಖಿಸುತ್ತಾರೆ. ಆದರೆ ಈಗ ಹಿಜಬ್ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಬ್ ಮುಸ್ಲಿಂ ಹುಡುಗಿಯರ ಹಕ್ಕು. ಆದರೆ ಅದನ್ನು ಧರಿಸಲು ನಿರಾಕರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Comments are closed.