ಕರ್ನಾಟಕ

ಪುನೀತ್ ಸಾವಿಂದ ನೊಂದು ಕೆ.ಆರ್ ಪೇಟೆಯ ಅಭಿಮಾನಿ ಹೃದಯಾಘಾತದಿಂದ ಮೃತ್ಯು

Pinterest LinkedIn Tumblr

ಬೆಂಗಳೂರು: ಕನ್ನಡದ ಚಲನಚಿತ್ರ ರಂಗದ ಮೇರುನಟ,ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಹಿನ್ನಲೆಯಲ್ಲಿ ಅಪ್ಪಟ ಅಭಿಮಾನಿಯಾದ ಒಬ್ಬರು ಶಾಕ್ ನಿಂದಾಗಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೆ.ಆರ್ ಪೇಟೆ ಪಟ್ಟಣದ ಲೋಕಿ‌ ಆರ್ಟ್ಸ್ ಲೋಕೇಶ್ ಅವರು ಮೃತಪಟ್ಟ ವ್ಯಕ್ತಿ.

ಪುನೀತ್ ರಾಜ್‍ಕುಮಾರ್ ಅವರ ಯಾವುದೇ ಸಿನಿಮಾ ಥಿಯೇಟರ್ ಗೆ ಬಂದಾಗ ಮೊದಲನೇ ದಿನ ಮೊದಲ ದಿನವೇ ಸಿನಿಮಾ ವೀಕ್ಷಿಸಿ ಸಂಭ್ರಮ ಪಡುತ್ತಿದ್ದ ಲೋಕೇಶ್ ಅವರು ನಿನ್ನೆ ದಿನ ಪುನೀತ್ ಅಕಾಲಿಕ ಮರಣಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ನಂತರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Comments are closed.