ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ಇಂದು ಸಂಜೆಯೇ ನೆರವೇರಿಸಲಾಗುವುದು. ಮಧ್ಯಾಹ್ನದ ವೇಳೆಗೆ ಪುನೀತ್ ರಾಜಕುಮಾರ್ ಅವರ ಪುತ್ರಿ ದೃತಿ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆ ನಡೆಯುತ್ತಿದೆ.

ಸಂಜೆ 6 ರಿಂದ 7 ಗಂಟೆಯ ಒಳಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಡಾ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿ ಪಕ್ಕದಲ್ಲೇ ಇಂದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ವಿದೇಶದಿಂದ ದೆಹಲಿಗೆ ಆಗಮಿಸಲಿರುವ ಪುನೀತ್ ಪುತ್ರಿ ದೃತಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಅವರು ಮಧ್ಯಾಹ್ನದೊಳಗೆ ಬೆಂಗಳೂರಿಗೆ ಬಂದರೆ ದರ್ಶನ ಪಡೆದ ನಂತರ ಸಂಜೆಯೊಳಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಇದಕ್ಕಾಗಿ ಸರ್ಕಾರದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
Comments are closed.