ಕರ್ನಾಟಕ

ಶಾಂಪೇನ್ ಬಾಟಲಿಗಳಲ್ಲಿ‌ ಪತ್ತೆಯಾಯ್ತು 2.5 ಕೋಟಿ ಮೌಲ್ಯದ ಡ್ರಗ್ಸ್ | ಮತ್ತೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ..!

Pinterest LinkedIn Tumblr

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಡೋಸ್ಸಾ ಖಲೀಫಾ (28) ಎಂಬಾತನನ್ನು ಬಂಧಿಸಿರುವ ಗೋವಿಂದಪುರ ಪೊಲೀಸರು 2.50 ಕೋಟಿ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಿದ್ದಾರೆ.

ಐವರಿಕೋಸ್ಟ್ ಪ್ರಜೆ ಡೋಸ್ಸಾ, ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ. ಎಚ್‌ಬಿಆರ್ ಲೇಔಟ್‌ನ 4ನೇ ಹಂತದಲ್ಲಿ ವಾಸವಿದ್ದ. ಆದರೆ, ಆತನ ಬಳಿ ಸದ್ಯ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಎನ್‌ಡಿಪಿಎಸ್ ಹಾಗೂ ವಿದೇಶಿ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

‘ಡ್ರಗ್ಸ್ ಪ್ರಕರಣದಲ್ಲಿ ಮಹಿಳಾ ಉದ್ಯಮಿ ಸೋನಿಯಾ ಅಗರವಾಲ್ ಸೇರಿ ಹಲವರನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಅವರ ವಿಚಾರಣೆಯಿಂದ ಡೋಸ್ಸಾ ಬಗ್ಗೆ ಮಾಹಿತಿ ಸಿಕ್ಕಿದ್ದು ಆತನೇ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪ್ರಮುಖ ಪೆಡ್ಲರ್ ಎಂಬುದು ತಿಳಿದಿತ್ತು. ಅದೇ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಡೋಸ್ಸಾನನ್ನು ಬಂಧಿಸಲಾಗಿದೆ ಎಂದರು.

‘ಗೋವಾದಿಂದ ಡ್ರಗ್ಸ್ ತರಿಸುತ್ತಿದ್ದ ಆರೋಪಿ ಡೋಸ್ಸಾ, ನಗರದ ಕೆಲ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು, ಕೆಲ ಉದ್ಯಮಿಗಳಿಗೂ ಡ್ರಗ್ಸ್ ನೀಡುತ್ತಿದ್ದ.
ಶಾಂಪೇನ್ ಬಾಟಲಿಗಳಲ್ಲಿ ಡ್ರಗ್ಸ್ ಮಾತ್ರೆಗಳನ್ನು ಬಚ್ಚಿಟ್ಟು ಗ್ರಾಹಕರಿಗೆ ತಲುಪಿಸುತ್ತಿದ್ದ. ಹೀಗಾಗಿ, ಯಾರಿಗೂ ಅನುಮಾನ ಬರುತ್ತಿರಲಿಲ್ಲ ಎಂದವರು ಹೇಳಿದರು.

ಪೊಲೀಸರ ಕಾರ್ಯಾಚರಣೆ ತಂಡಕ್ಕೆ ಪ್ರಶಂಸಿಸಲಾಗಿದ್ದು 60 ಸಾವಿರ ಬಹುಮಾನ ಘೋಷಿಸಲಾಗಿದೆ ಎಂದು ಅಧಿಕಾರಿಗಳು‌ ತಿಳಿಸಿದ್ದಾರೆ.

Comments are closed.