ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ವಿಚ್ಛೇದನ ಪಡೆಯುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ. ನಾವಿಬ್ಬರು ಇನ್ಮುಂದೆ ಪರಸ್ಪರ ಗಂಡ-ಹೆಂಡತಿಯಾಗಿರಲ್ಲ. ಆದರೆ, ಮಕ್ಕಳಿಗೆ ಪೋಷಕರಾಗಿ ಇರುತ್ತೇವೆ ಎಂದಿದ್ದಾರೆ. ಈ ಮೂಲಕ 15 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ ಹೇಳಲು ತಯಾರಿ ನಡೆಸಿದ್ದಾರೆ.
ಅಮೀರ್ ಖಾನ್ ಹಾಗೂ ಕಿರಣ್ ರಾವ್ 2005ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್ನ ಎವರ್ಗ್ರೀನ್ ಸಿನಿಮಾ ಲಗನ್ ಸೆಟ್ನಲ್ಲಿ ಪರಿಚಯಗೊಂಡು ನಂತರ ಸ್ನೇಹ ಪ್ರೀತಿಯಾಗಿ ಬಳಿಕ ವಿವಾಹವಾಗಿದ್ದರು.
Comments are closed.