ಅಂತರಾಷ್ಟ್ರೀಯ

ಮದುವೆ ಮಂಟಪದಲ್ಲಿ ವರನ ಪಕ್ಕವೇ ಕುಳಿತು ವಧುವಿಗೆ ಕಿಸ್ ಮಾಡಿದ ಯುವಕ ! ವೀಡಿಯೊ ವೈರಲ್….

Pinterest LinkedIn Tumblr

ನವದೆಹಲಿ: ಸದ್ಯ ಮದುವೆ ಸೀಸನ್​ ಆಗಿರುವುದರಿಂದ ಅದಕ್ಕೆ ಸಂಬಂಧಿಸಿದ ತರಹೇವಾರಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿಯಲ್ಲಿ ವಿಡಿಯೋವೊಂದು ಹೊರಬಂದಿದ್ದು, ಅದರಲ್ಲಿ ವರನ ಪಕ್ಕವೇ ಕುಳಿತು ಯುವಕನೊಬ್ಬ ವಧುವಿಗೆ ಕಿಸ್​ ಮಾಡುತ್ತಿರುವ ದೃಶ್ಯವಿದೆ.

ವಿಡಿಯೋದಲ್ಲಿ ವರನನ್ನು ನೋಡುತ್ತಿದ್ದರೆ, ಅಯ್ಯೋ ಪಾಪ ಅನಿಸುವಂತಿದೆ. ಈ ವಿಡಿಯೋವನ್ನು ಎಲ್ಲಿ ರೆಕಾರ್ಡ್​ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಜಾಲತಾಣದಲ್ಲಿ ಮಾತ್ರ ಬಹಳ ಸಂಚಲನ ಮೂಡಿಸಿದೆ.

ವಿವರಣೆಗೆ ಬರುವುದಾದರೆ, ರಿಸೆಪ್ಶನ್​ ವೇಳೆ ಮಂಟಪದ ವೇದಿಕೆಯಲ್ಲಿ ವಧು-ವರ ಕುಳಿತಿರುತ್ತಾರೆ. ಅದೇ ಸಮಯದಲ್ಲಿ ಅಲ್ಲಿಗೆ ಎಂಟ್ರಿ ಕೊಡುವ ಯುವಕನೊಬ್ಬ ಇಬ್ಬರ ನಡುವೆ ಕುಳಿತು ವಧುವಿಗೆ ಕಿಸ್​ ಮಾಡಲು ಆರಂಭಿಸುತ್ತಾನೆ. ಅದನ್ನು ನೋಡಿ ಎಲ್ಲರು ಶಾಕ್​ ಆಗುತ್ತಾರೆ. ಸ್ವತಃ ವರನೂ ದಿಗ್ಭ್ರಾಂತವಾಗುತ್ತದೆ.

ವರನನ್ನು ಕಾಡಿಸಲು ಬಹುಶಃ ವಧುವಿನ ಮನೆಯವರು ಮೊದಲೇ ಪ್ಲಾನ್​ ಮಾಡಿದಂತೆ ಕಾಣುತ್ತದೆ. ಆದರೆ, ಈ ಬಗ್ಗೆ ಜಾಲತಾಣದಲ್ಲಿ ಬಹಳ ಆಕ್ಷೇಪವೂ ವ್ಯಕ್ತವಾಗುತ್ತಿದೆ. ಭಾವನೆಗಳೊಂದಿಗೆ ಚೆಲ್ಲಾಟ ಆಡಬಾರದು ಎಂದು ಕಿಡಿಕಾರಿದ್ದಾರೆ

Comments are closed.