ಉಡುಪಿ: ಕೊರೋನಾ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆಯೇ ಹೊರತು ಕೊರೋನಾ ಇನ್ನೂ ಹಿನ್ನಡೆಯಾಗಿಲ್ಲ. ನಿರ್ಬಂದ ಸಡಿಲಿಕೆ ನೆಪದಲ್ಲಿ ಅನಗತ್ಯವಾಗಿ ನಿಯಮ ಉಲ್ಲಂಘಿಸಿದರೆ ಅಂತವರು ಯಾರೇ ಆದರೂ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಬಸ್ಸುಗಳಲ್ಲಿ 50% ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಮಾತ್ರವಲ್ಲ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮಗಳು ನಡೆಯುತ್ತಿದೆ. ಮದುವೆ ಕಾರ್ಯಕ್ರಮದಲ್ಲಿ 40 ಕ್ಕಿಂತ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಸಂಘ ಸಂಸ್ಥೆ, ಪಕ್ಷಗಳು ಕಾರ್ಯಕ್ರಮ, ಪ್ರತಿಭಟನೆ ಆಯೋಜಿಸುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದರು. ಜಿಲ್ಲಾಧಿಕಾರಿಯಾಗಿ ನಾನು ನಿಯಮ ಪಾಲಿಸಿದರೆ ಜನರು ನನ್ನನ್ನು ಫಾಲೋ ಮಾಡ್ತಾರೆ. ಹಾಗೇ ಜನಪ್ರತಿನಿಧಿಗಳು ನಿಯಮ ಪಾಲಿಸಿದಾಗ ಅವರ ಬೆಂಬಲಿಗರು ಕೂಡ ನಿಯಮ ಪಾಲಿಸುತ್ತಾರೆ.
ನಿಯಮ ಉಲ್ಲಂಘಿಸಿ ಎಷ್ಟೇ ದೊಡ್ಡ ವ್ಯಕ್ತಿಗಳು ಕಾರ್ಯಕ್ರಮ ಆಯೋಜಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
Comments are closed.