ಕರಾವಳಿ

ಪಚ್ಚನಾಡಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಕೊರೋನಾ ವಾರಿಯರ್ಸ್‌ಗೆ ಗೌರವಾರ್ಪಣೆ ಹಾಗೂ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು : ನಗರದ ಪಚ್ಚನಾಡಿ ವಾರ್ಡಿನ ದೇವಿನಗರದ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್, ಶ್ರೀ ದೇವಿ ಮಾತೃ ಮಂಡಳಿ ಹಾಗೂ ಊರ ದಾನಿಗಳ ಸಹಕಾರದಿಂದ ಪಚ್ಚನಾಡಿ ವಾರ್ಡಿನ 27 ಜನ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಹಾಗೂ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವು ಪಚ್ಚನಾಡಿ ದೇವಿನಗರದ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್‌ನ ಸಭಾಂಗಣದಲ್ಲಿ ನೆರವೇರಿತು.

ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷರಾದ ಮೋಹನ್ ಪಚ್ಚನಾಡಿ, ಅಧ್ಯಕ್ಷರಾದ ರಾಜೇಶ್ ಕುಲಾಲ್, ಸಾಮಾಜಿಕ ಕಾರ್ಯಕರ್ತರಾದ ಶಿವಪ್ಪ ಸಂತೋಷನಗರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಶ್ರೀಮತಿ ಭವ್ಯಾ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಹರೀಶ್ ಮುಂತಾದ ಅತಿಥಿಗಳಿಂದ ದೀಪ ಬೆಳಗುವಿಕೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮೋಹನ್ ಪಚ್ಚನಾಡಿ ಕಾರ್ಯಕ್ರಮದ ಕುರಿತಾಗಿ ಮಾತನಾಡುತ್ತಾ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಬೇಕಾದರೆ ಮುಖ್ಯ ಕಾರಣ ಕೊರೋನಾ ವಾರಿಯರ್ಸ್. ಅದು ಪೊಲೀಸ್ ಸಿಬ್ಬಂದಿ ಇರಬಹುದು ಅಥವಾ ವೈದ್ಯರು, ದಾದಿಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇವರುಗಳು ಜೀವದ ಹಂಗು ತೊರೆದು ಬೀದಿಗಿಳಿದು ಮನೆ ಮನೆ ಸಂಪರ್ಕ ಮಾಡಿ ಕೊರೋನಾದ ವಿರುದ್ಧ ಸಮಾಜದ ಪರ ಹೋರಾಟ ಮಾಡಿರುವುದೇ ಕೊರೋನಾ ನಿಯಂತ್ರಣಕ್ಕೆ ಕಾರಣವಾಗಿದೆ.

ಇವರು ಮಾಡಿರುವ ಕಾರ್ಯವು ದೇವರು, ನಾಗರಿಕ ಸಮಾಜ ಮೆಚ್ಚುವಂತದ್ದು.. ಹಾಗಾಗಿ ಅವರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಪಚ್ಚನಾಡಿ, ಶ್ರೀ ದೇವಿ ಮಾತೃ ಮಂಡಳಿ ಜೊತೆಯಾಗಿ ಊರ ದಾನಿಗಳ ಸಹಕಾರದಿಂದ ಪಚ್ಚನಾಡಿ ನಾಗರಿಕರ ಪರವಾಗಿ ಗೌರಾವಾರ್ಪಣೆ ಮಾಡುತ್ತಿದೆ ಎಂದ ಅವರು ಎಲ್ಲಾ ಕೊರೋನಾ ವಾರಿಯರ್ಸ್ ಗೂ ದೇವರು ಇನ್ನಷ್ಟು ಕೆಲಸ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.

ಶಿವಪ್ಪ ಪಚ್ಚನಾಡಿ ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮ ನಡೆದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವುದು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರವಿದೆ ಎಂದರು.

ಪೊಲೀಸ್ ಅಧಿಕಾರಿ ಹರೀಶ್ ಅವರು ಮಾತನಾಡುತ್ತಾ ಕೊರೊನಾ ನಿಯಮಗಳನ್ನು ಪಾಲಿಸಿ ಕೊರೋನಾ ಮಹಾಮಾರಿಯಿಂದ ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಭವ್ಯಾರವರು ಮಾತನಾಡುತ್ತಾ, ನಮ್ಮ ಇಲಾಖೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ಕೊಡುವ ಸಂದರ್ಭದಲ್ಲಿ ಜನರ ಅಸಹಕಾರ ಹಾಗೂ ಬೈಗುಳಗಳನ್ನು ಕೇಳಿ ನೊಂದುಕೊಂಡಿರುವ ಕಾರ್ಯಕರ್ತೆಯರಿಗೆ ಇಂತಹ ಕಾರ್ಯಕ್ರಮಗಳಿಂದ ಪ್ರೋತ್ಸಹ ಪ್ರೇರಣೆ ಸಿಕ್ಕಿ ಮನಸಿಗೆ ನೆಮ್ಮದಿ ಉಂಟು ಮಾಡುತ್ತದೆ ಎಂದರು. ಹಾಗಾಗಿ ಇಂತಹ ಸಂಘ ಸಂಸ್ಥೆಗಳಿಗೆ ನಾವು ಅಭಾರಿಯಾಗಿದ್ದೇವೆ ಎಂದರು.

ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ಟೀಚರ್ ಮಾತನಾಡಿ ಯಾವುದೇ ಸಮಸ್ಯೆಗಳಿಗೆ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಗೆ ನಾವು ಚಿರಋಣಿಯಾಗಿರುತ್ತೇವೆ ಎಂದರು. ಪಚ್ಚನಾಡಿ ವಾರ್ಡಿನ ಎಲ್ಲಾ 27 ಕೊರೊನಾ ವಾರಿಯರ್ಸ್ ಗೆ ಅತಿಥಿಗಳಿಂದ ಶಾಲು ಹೊದಿಸಿ ಕಿಟ್ ಕೊಟ್ಟು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಅಶಕ್ತ ಮಗುವಿಗೆ ಬಾಲಕೃಷ್ಣ ತೊಯ್ಪಕಲ್ ಇವರಿಂದ ಪೌಷ್ಟಿಕ ಆಹಾರದ ಕಿಟ್ ಮತ್ತು ಚಂದ್ರು ಬೋಂದೆಲ್ ಅವರಿಂದ ಆರ್ಥಿಕ ಸಹಾಯದ ನೆರವನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಅನಿಲ್ ಜೋಶ್ ಬೋಂದೆಲ್, ಬಾಲಕೃಷ್ಣ ತೊಯ್ಪಕಲ್, ವಸಂತ ಸಂತೋಷನಗರ, ಚಂದ್ರು ಬೋಂದೆಲ್, ಕಿರಣ್ ಸಂತೋಷನಗರ, ಸ್ವರಾಜ್ ದೇವಿನಗರ, ಧನುಷ್ ಆಶ್ರಯ, ತುಕಾರಾಮ ದೇವಿನಗರ, ಕೃಷ್ಣಾನಂದ ಸನಿಲ್ ದೇವಿನಗರ, ನವೀನ್ ಕುಲಾಲ್, ಗೌರೀಶ್ ಪಚ್ಚನಾಡಿ, ಶೈಲೇಶ್ ಪಚ್ಚನಾಡಿ, ಮನೋಜ್ ಪಚ್ಚನಾಡಿ, ಶಿವಾನಂದ ಪಚ್ಚನಾಡಿ, ಲಾಲಿನಿ , ಧನಲಕ್ಷ್ಮೀ, ವಿಜಯ ಉಮೇಶ್ ಯೋಗಿತಾ ಮುಂತಾದವರು ಭಾಗವಹಿಸಿದರು. ನಟರಾಜ್ ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿದರು.

Comments are closed.