ಕರ್ನಾಟಕ

ಆರ್​ಎಸ್​ಎಸ್​ನ‌ ನೂತನ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

Pinterest LinkedIn Tumblr

ಬೆಂಗಳೂರು: ರಾಷ್ಟ್ರೀಯ ಸ್ವಯಸೇವಕ ಸಂಘದ ( ಆರ್.ಎಸ್.ಎಸ್) ಎರಡನೇ ಅತ್ಯುನ್ನತ ಜವಾಬ್ದಾರಿ ಸ್ಥಾನಕ್ಕೆ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆಯವರು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಹೊರ ವಲಯದಲ್ಲಿರುವ ಚೆನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಆರ್.ಎಸ್.ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ನಲ್ಲಿ ನಡೆದ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆಯವರು ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ರಾಗಿ ಆಯ್ಕೆಯಾಗಿದ್ದಾರೆ.

ಸರಸಂಘಚಾಲಕ್ ಆರ್.ಎಸ್.ಎಸ್ ಸಂಘಟನೆಯ ಅತ್ಯುನ್ನತ ಜವಾಬ್ದಾರಿಯಾಗಿದ್ದು, ಸರಕಾರ್ಯವಾಹ ಎರಡನೇ ಅತ್ಯುನ್ನತ ಹಾಗೂ ಅತಿ ಹೆಚ್ಚು ಜವಾಬ್ದಾರಿಯ ಹುದ್ದೆಯಾಗಿದೆ.

ಪ್ರಸತುತ ಮೋಹನ್ ಭಾಗ್ವತ್ ಅವರು ಆರ್.ಎಸ್ಎಸ್ ಸರಸಂಘಚಾಲಕ್ ಆಗಿ ಸೇವೆ ಸಲ್ಲಿಸುತ್ತಿದ್ದು, 2009 ರಿಂದ ಈ ವರೆಗೂ ಸುರೇಶ್ ಭೈಯ್ಯಾಜಿ ಜೋಷಿಯವರು ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಾ.20 ರಂದು ನಡೆದ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆಯವರು ಸುರೇಶ್ ಭೈಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

ಹೋ.ವೇ ಶೇಷಾದ್ರಿ ಅವರ ನಂತರ ಕನ್ನಡಿಗರೊಬ್ಬರಿಗೆ ಮತ್ತೊಮ್ಮೆ ಸರಕಾರ್ಯವಾಹರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಇವರ ಆಯ್ಕೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಸುರೇಶ್ ಕುಮಾರ್ ಸಹಿತ ಹಲವರು ಶುಭಕೋರಿದ್ದಾರೆ.

Comments are closed.