ಉಡುಪಿ: ಕುಂದಾಪುರ ತಾಲ್ಲೂಕಿನ ಕೋಟ ಸಮೀಪ ಗುಳ್ಳಾಡಿಯಲ್ಲಿ ಮಂಜಿ ಎನ್ನುವ ಮಹಿಳೆಯ ಕೊಟ್ಟಿಗೆಯಲ್ಲಿದ್ದ ಗೋವು ಅನ್ನು ಕದ್ದ ಪ್ರಕರಣವನ್ನು ಖಂಡಿಸಿ ಆರೋಪಿಗಳನ್ನು ವಾರದೊಳಗೆ ಶೀಘ್ರವಾಗಿ ಬಂಧಿಸುವಂತೆ ಹಾಗೂ ಅಕ್ರಮ ಗೋ ಕಳ್ಳತನ ಮತ್ತು ಗೋ ಕಳ್ಳರನ್ನು ಮಟ್ಟ ಹಾಕುವಂತೆ ಕೋಟ ಪೋಲೀಸ್ ಠಾಣಾಧಿಕಾರಿಗಳಿಗೆ ಬಿಜೆಪಿ ಕುಂದಾಪುರ ಯುವಮೋರ್ಚಾ ವತಿಯಿಂದ ಮನವಿ ನೀಡಿದೆ.
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಬಳಿಕವೂ ಗೋ ಕಳವು ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಚಾರವಾಗಿದೆ. ಪೊಲೀಸ್ ಇಲಾಖೆ ಗೋ ದಲ್ಲಾಳಿಗಳ ಸಹಿತ ಕಳವು ಮಾಡುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಯುವಮೋರ್ಚಾ ಆಗ್ರಹಿಸಿದೆ.
ಈ ಸಂದರ್ಭ ಕುಂದಾಪುರ ಯುವಮೋರ್ಚಾ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿ ಗಳಾದ ಚೇತನ್ ಬಂಗೇರಾ ಮತ್ತು ಸುನಿಲ್ ಖಾರ್ವಿ, ಯುವಮೋರ್ಚಾ ಉಪಾಧ್ಯಕ್ಷ ಅಭಿಷೇಕ್ ಅಂಕದಕಟ್ಟೆ ಮತ್ತು ವಿನಯ್ ಶಿರಿಯಾರ,ಯುವಮೋರ್ಚಾ ಕಾರ್ಯದರ್ಶಿ ಅರುಣ್ ಕುಮಾರ್ ಕುಂದಾಪುರ, ಸಫಲ್ ಶೆಟ್ಟಿ ಐರೋಡಿ,ಯುವಮೋರ್ಚಾ ಕೋಟೇಶ್ವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿವೇಕ್ ದೇವಾಡಿಗ, ಮಂದಾರ್ತಿ ಮಹಾಶಕ್ತಿಕೇಂದ್ರದ ಯುವಮೋರ್ಚಾ ಅಧ್ಯಕ್ಷ ರೋಹಿತ್ ಶೆಟ್ಟಿ ಕಾಡೂರು,ಯುವಮೋರ್ಚಾ ಕೆದೂರು ಶಕ್ತಿಕೇಂದ್ರದ ಅಧ್ಯಕ್ಷರ ಪ್ರತಾಪ್ ಶೆಟ್ಟಿ ಉಳ್ತೂರು ಉಪಸ್ಥಿತರಿದ್ದರು.
(ವರದಿ- ಯೋಗೀಶ್ ಕುಂಭಾಸಿ)