ಕರಾವಳಿ

ಮತಾಂತರ ಹಾಗೂ ಲವ್ ಜಿಹಾದ್ ತಡೆಗೆ ಕಾನೂನು ಜಾರಿ ಅಗತ್ಯ: ಕಾಸರಗೋಡಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್

Pinterest LinkedIn Tumblr

ಮಂಗಳೂರು / ಕಾಸರಗೋಡು: ಕಾಸರಗೋಡು ತಾಲಿಪಡ್ಪು ಮೈದಾನದಲ್ಲಿ ಅಯೋಜಿಸಲಾಗಿದ್ದ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ವಿಜಯ ಯಾತ್ರೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆದಿತ್ಯವಾರ ಸಂಜೆ ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, . ಉತ್ತರ ಪ್ರದೇಶ ಮಾದರಿಯಲ್ಲಿ ಕೇರಳದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನಿನ ಅಗತ್ಯ ಇದೆ ಎಂದು ಹೇಳಿದರು.

ಕೇರಳದಲ್ಲಿ ಲವ್ ಜಿಹಾದ್ ಗೆ ಎಲ್ ಡಿ ಎಫ್ ಮತ್ತು ಯುಡಿಎಫ್ ಪ್ರೋತ್ಸಾಹ ನೀಡುತ್ತಿದೆ. ಆದರೆ ಆಡಳಿತಕ್ಕೆ ಬಂದ ಸರಕಾರಗಳು ಇದನ್ನು ತಡೆಯಲು ಕಾನೂನು ರೂಪಿಸಲು ಮುಂದಾಗಿಲ್ಲ. ಉತ್ತರಪ್ರದೇಶ ಸರಕಾರ ಈಗಾಗಲೇ ಕಾನೂನು ರೂಪಿಸಿದೆ. ಮತಾಂತರ ಹಾಗೂ ಲವ್ ಜಿಹಾದ್ ತಡೆಗೆ ಕಾನೂನು ಜಾರಿ ಅಗತ್ಯ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಕೇರಳದಲ್ಲಿ ಆಡಳಿತ ನಡೆಸಿದ ಎರಡೂ ಒಕ್ಕೂಟಗಳು ಜನಹಿತ ಮರೆತು ಭ್ರಷ್ಟಾಚಾರಕ್ಕೆ ಮಾತ್ರ ಒತ್ತು ನೀಡಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮತ್ತೆ ಕೇರಳದಲ್ಲಿ ಪ್ರತಿ ದಿನ ಅತೀ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. ಕೊರೋನಾ ತಡೆಗಟ್ಟಲು ಕೇರಳ ಸರಕಾರ ವೈಫಲ್ಯ ಕಂಡಿದೆ ಎಂದು ಟೀಕಿಸಿದರು.

ಕೇಂದ್ರ ಸಚಿವ ವಿ. ಮುರಳೀಧರನ್, ಮುಖಂಡರಾದ ಕುಮ್ಮನಂ ರಾಜಶೇಖರನ್, ಪಿ .ಕೆ ಕೃಷ್ಣದಾಸ್, ಶಾಸಕ ಒ . ರಾಜಗೋಪಾಲ್ , ಶೋಭಾ ಸುರೇಂದ್ರನ್, ಸಿ .ಕೆ ಪದ್ಮನಾಭನ್ , ಕಾರ್ಕಳ ಶಾಸಕ ಸುನಿಲ್ ಕುಮಾರ್, ಎಂ . ಟಿ ರಮೇಶ್, ಬಿ . ಡಿ . ಜೆ . ಎಸ್ ಮುಖಂಡ ತುಷಾರ್ ವೆಳ್ಳಾ ಪಳ್ಳಿ, ಪಿ .ಸಿ ಥಾಮಸ್ , ಜೋರ್ಜ್ ಕುರಿಯನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್, ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Comments are closed.