
(ಕಡತ ಚಿತ್ರ)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕುಕೃತ್ಯ ಮತ್ತು ಹಿಂದೂ ವಿರೋಧಿ ಕೃತ್ಯಗಳನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ನಾಗೂರಿ ಪ್ರಖಂಡದವತಿಯಿಂದ ಇಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರಿನ ಕುಲಶೇಖರ ಕಲ್ಪನೆಯ ಯಕ್ಷಗಾನ ಮೈದಾನದಲ್ಲಿ ಬೃಹತ್ ಹಿಂದು ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸುವ ಕುಕೃತ್ಯ ನಿರಂತರವಾಗಿ ನಡೆಯುತ್ತಿದೆ. ಮಂಗಳೂರು ಕಂಕನಾಡಿ ಗರೋಡಿ ದೇವಸ್ಥಾನ, ಅತ್ತಾವರ ಬಾಬುಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನ, ಪಂಪುವೆಲ್ ಕಲ್ಲುರ್ಟಿ ಕಲ್ಕುಡ ದೈವಸ್ಥಾನ, ಉಜ್ಜೋಡಿ ಮಹಾಕಾಳಿ ದೈವಸ್ಥಾನ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಬೊಕ್ಕಪಟ್ನ ಅಯ್ಯಪ್ಪ ದೇವಸ್ಥಾನ, ಉಳ್ಳಾಲ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗೆ ಬಳಸಿದ ಕಾಂಡೋಮ್ ಗಳನ್ನ ಹಾಕಿ ಅಪವಿತ್ರಗೊಳಿಸಿದಲ್ಲದೆ ದೇವರ ನಿಂದನೆಯ ಮತ್ತು ಧರ್ಮ ವಿರೋಧಿ ಬರಹಗಳನ್ನು ಬರೆದು ಹಾಕಿ ಜೊತೆಗೆ ಅಪವಿತ್ರ ಗೊಳಿಸಿದ್ದಾರೆ.
ಅಲ್ಲದೆ ಕೊಣಾಜೆ ಗೋಪಾಲ ಕೃಷ್ಣ ಮಂದಿರದ ಭಗವ ದ್ವಜವನ್ನು ಕಿತ್ತು ಅದರ ಮೇಲೆ ಮಲ ಮೂತ್ರ ವಿಸರ್ಜಿಸಿ, ಮಂದಿರ ಅವರಣದೊಳಗೂ ಮಲ ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿ ವಿಕೃತಿ ಕೃತ್ಯವನ್ನು ಎಸಗಿದ್ದಾರೆ.
ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವುದನ್ನು ಖಂಡಿಸಿ,
2019 ರಲ್ಲಿ ನಡೆದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಪ್ರತಿಕಾರವಾಗಿ ಮಾಯಾ ಗ್ಯಾಂಗ್ ಮೂಲಕ ಸಂಚು ರಚಿಸಿ SDPI ಸಂಘಟನೆಯ ಕಾರ್ಯಕರ್ತರು ಪೊಲೀಸ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಮೇಲೆ ಕೊಲೆ ಯತ್ನವನ್ನು ಖಂಡಿಸಿ,
ಮಂಗಳೂರಿನಲ್ಲಿ ಉಗ್ರರ ಪರ ಗೋಡೆಬರಹದ ಮೂಲಕ ಇಡೀ ಮಂಗಳೂರಿನಲ್ಲಿ ಭಯ ಹುಟ್ಟಿಸಿದ ಶಂಕಿತ ಉಗ್ರರಾದ ತೀರ್ಥಹಳ್ಳಿ ನಿವಾಸಿ ಸಾದತ್, ಮೊಹಮ್ಮದ್ ಶಾರೀಕ್, ಮುನೀರ್ ಅಹಮದ್ ನನ್ನು ಬಂಧಿಸಿದ್ದು ಅವರಿಂದ ಜಾಗತಿಕ ಭಯೋತ್ಫಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಭಯೋತ್ಫಾದನ ಚಟುವಟಿಕೆ ದಕ್ಷಿಣ ಕನ್ನಡದಲ್ಲಿ ನೆಲೆವೂರಲು ಪ್ರತ್ನಿಸಿರುವುದಕ್ಕೆ ಸಾಕ್ಷಿಯಾಗಿದ್ದು ಈ ಉಗ್ರವಾದಿ ಚಟುವಟಿಕೆಯನ್ನು ಖಂಡಿಸಿ,
ಉಳ್ಳಾಲ ಪರಿಸರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಯತ್ನ, ಮುಡಿಪುವಿನಲ್ಲಿ ಮಾತು ಬಾರದ, ಕಿವಿ ಕೇಳದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೃತ್ಯವನ್ನು ಖಂಡಿಸಿ,
ಮಂಗಳೂರು ಪಡೀಲ್ ಬಳಿ ಓವರ್ ಟೇಕ್ ಮಾಡುವ ನೆಪದಲ್ಲಿ ಸುವರ್ಣ ಬಸ್ 23 ಸಂಖ್ಯೆಯ ಸಿಟಿ ಬಸ್ಸಿನ ಚಾಲಕನಾದ ಸಂಪತ್ ಪೂಜಾರಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲು ಪ್ರಯತ್ನಿಸಿದ ಕೃತ್ಯವನ್ನು ಖಂಡಿಸಿ,
ಬೈಕಿನಲ್ಲಿ ಶಿವಾಜಿಯ ಸ್ಟಿಕರ್ ಇದೆ ಅನ್ನುವ ಕಾರಣಕ್ಕೆ ದೀಪಕ್ ಅನ್ನುವ ಯುವಕನಿಗೆ ಚೂರಿ ಇರಿದು ಹಿಂದುಗಳಿಗೆ ಭಯ ಹುಟ್ಟಿಸುವ ಪ್ರಯತ್ನವನ್ನು ಖಂಡಿಸಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಮತಾಂತರ, ಅಕ್ರಮ ಗೋ ಹತ್ಯೆ, ಹಿಂದೂ ವಿರೋಧಿ ಕೃತ್ಯವನ್ನು ಖಂಡಿಸಿ ಹಿಂದುಗಳಲ್ಲಿ ಜಾಗೃತಿ ಮೂಡಿಸಲು ಇಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರಿನ ಕುಲಶೇಖರ ಕಲ್ಪನೆಯ ಯಕ್ಷಗಾನ ಮೈದಾನಿನಲ್ಲಿ ಬೃಹತ್ ಹಿಂದು ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಂದು ವಿಶ್ವ ಹಿಂದೂ ಪರಿಷದ್ ನಾಗೂರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ತಿಳಿಸಿದ್ದಾರೆ.
Comments are closed.