ರಾಷ್ಟ್ರೀಯ

ಕೃಷ್ಣಾ ಢಾಬಾ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ವಶ

Pinterest LinkedIn Tumblr

ಶ್ರೀನಗರ: ಶ್ರೀನಗರದ ಡಾಲ್ಗೇಟ್ ಬಳಿಯ ಕೃಷ್ಣಾ ಢಾಬಾ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ನಡೆಸಿದ್ದ ಭದ್ರತಾ ಪಡೆಗಳು ಅನಂತ್‌ನಾಗ್ ಕಾಡಿನಲ್ಲಿ ಉಗ್ರರು ನಿರ್ಮಿಸಿಕೊಂಡಿದ್ದ ಅಡಗುದಾಣವನ್ನು ಪತ್ತೆ ಮಾಡಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಈಗಾಗಲೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೃಷ್ಣಾ ಢಾಬಾ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರನನ್ನು ಬಂಧಿಸಿದ್ದು, ಈ ಸಂಬಂಧ ನಡೆದ ಶೋಧ ಕಾರ್ಯಾಚರಣೆಯಲ್ಲಿ ಅನಂತ್‌ನಾಗ್ ಕಾಡಿನಲ್ಲಿದ್ದ ಉಗ್ರರ ಅಡಗುದಾಣವನ್ನು ಮತ್ತೆ ಮಾಡಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಮೂರು ಎಕೆ -56 ರೈಫಲ್‌ಗಳು, ಎರಡು ಚೈನೀಸ್ ಪಿಸ್ತೂಲ್‌ಗಳು, ಎರಡು ಚೀನೀ ಗ್ರೆನೇಡ್‌ಗಳು, ಒಂದು ಟೆಲಿಸ್ಕೋಪ್, ಆರು ಎಕೆ ಮ್ಯಾಗಜಿನ್ ಗಳು, ಎರಡು ಪಿಸ್ತೂಲ್ ಮ್ಯಾಗಜಿನ್ ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ ದುರ್ಗಾನಾಗ್ ಡಾಲ್ಗೇಟ್ ಪ್ರದೇಶದಲ್ಲಿ ಭಯೋತ್ಪಾದಕರು ಢಾಬಾ ಮಾಲೀಕ ಮತ್ತು ಆತನ ಪುತ್ರನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಢಾಬಾ ಮಾಲೀಕರ 22 ವರ್ಷದ ಮಗ ತೀವ್ರವಾಗಿ ಗಾಯಗೊಂಡಿದ್ದ. ಗಾಯಾಳುವನ್ನು ರಮೇಶ್ ಕುಮಾರ್ ಮೆಹ್ರಾ ಅವರ ಪುತ್ರ ಆಕಾಶ್ ಮೆಹ್ರಾ ಎಂದು ಗುರುತಿಸಲಾಗಿದೆ. ಯುವಕನನ್ನುಕೂಡಲೇ ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ನ ಸದಸ್ಯನೆಂದು ಶಂಕಿಸಲಾಗಿರುವ ಭಯೋತ್ಪಾದಕ ಶ್ರೀನಗರದ ದುರ್ಗಾನಾಗ್ ಡಾಲ್ಗೇಟ್ ಪ್ರದೇಶದ ಜನಪ್ರಿಯ ಆಹಾರ ಜಂಟಿ ಕೃಷ್ಣ ಧಾಬಾ ಬಳಿ ಆತನ ಮೇಲೆ ಗುಂಡು ಹಾರಿಸಿದ್ದ, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ 90 ರ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ‘ಮುಸ್ಲಿಂ ಜನ್ಬಾಜ್ ಫೋರ್ಸ್’ ನ ದಾಳಿ ಹೊಣೆಗಾರಿಕೆ ಹೊತ್ತಿತ್ತು.

ಇನ್ನು ದಾಳಿ ನಡೆದ ಢಾಬಾ ಹೋಟೆಲ್ ಲಲಿತ್‌ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದು, ಇದೇ ಹೋಟೆಲ್ ಲಲಿತ್‌ ನಲ್ಲಿ 20 ಕ್ಕೂ ಹೆಚ್ಚು ವಿದೇಶಿ ರಾಯಭಾರಿಗಳು ತಂಗಿದ್ದರು. ವಿಧಿ 370ರ ರದ್ಧತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತ ಅಧ್ಯಯನಕ್ಕಾಗಿ ಎರಡು ದಿನಗಳ ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.

Comments are closed.