
ಬೆಂಗಳೂರು: ಕೊರೋನಾ ಆತಂಕದಿಂದ ಸ್ಥಗಿತಗೊಂಡಿದ್ದ ಪದವಿ, ಸ್ನಾತಕೋತರ ಪದವಿ ಸೇರಿದಂತೆ ಡಿಪ್ಲೋಮಾ ಕಾಲೇಜುಗಳನ್ನು ಇಂದಿನಿಂದ (ಮಂಗಳವಾರ) ಆರಂಭವಾಗಿದೆ. ಸರ್ಕಾರದ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಕಾಲೇಜುಗಳು ಪ್ರಾರಂಭವಾದರೂ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಆಗಮಿಸಿದ್ದಾರೆ.
ಏಳೆಂಟು ತಿಂಗಳ ಬಳಿಕ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೆರ್ ಸಿಂಪಡಿಸಿ ಕರೆದುಕೊಳ್ಳಲಾಗಿದೆ. ಕೊಠಡಿಗಳಲ್ಲಿ ಮಾಸ್ಕ್ ಕಡ್ಡಾಯದ ಜೊತೆಗೆ ಸಾಮಾಜಿಕ ಅಂತರದೊಂದಿಗೆ ಮೊದಲ ದಿನದ ತರಗತಿಗಳು ನಡೆದವು.
ಕಾಲೇಜಿಗೆ ಮಕ್ಕಳು ಕಳುಹಿಸಲು ಪೋಷಕರ ಹಿಂದೇಟು ಹಾಕಿದ್ದಾರೆ. ಅಲ್ಲದೇ ಹಬ್ಬದ ಬಳಿಕವೇ ಮಕ್ಕಳನ್ನು ಕಳುಹಿಸಲು ಒಪ್ಪದ ಪೋಷಕರು ಮೂರು ದಿನ ತಡವಾಗಿ ಅಂದರೆ, ನ.20ರಿಂದ ಆರಂಭಿಸುವಂತೆ ಮನವಿ ಸಲ್ಲಿಸಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರುವ ಮನಸ್ಸಿದ್ದರೂ ಪೋಷಕರು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಮನೆ ಹಾಗೂ ಕಾಲೇಜಿನಲ್ಲಿ ಸುರಕ್ಷತೆಯಿದ್ದರೂ. ವಿದ್ಯಾರ್ಥಿಗಳು ಸಂಚಾರಕ್ಕೆ ಸಾರ್ವಜನಿಕ ಸಾರಿಗೆ ಬಳಸುವುದರಿಂದ ಆತಂಕ ಉಂಟಾಗಿದೆ. ಪೋಷಕರ ಒಪ್ಪಿಗೆ ಪತ್ರ ಕೊಟ್ಟಿದ್ದರೂ, ವಿದ್ಯಾರ್ಥಿಗಳ ಹಾಜರು ಕಡಿಮೆ ಇದೆ. ಮಕ್ಕಳು ಕಾಲೇಜಿಗೆ ಬಂದ ಮೇಲೆ ಎಷ್ಟು ಪ್ರತಿಶತ ಹಾಜರಾತಿ ಗೊತ್ತಾಗಲಿದೆ ಎಂದು ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ತಿಳಿಸಿದರು.
ಮೊದಲ ದಿನ ಶೇ. 25ರಷ್ಟು ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಉಳಿದವರು ಆನ್ಲೈನ್ ಕ್ಲಾಸ್ ಪಡೆಯಲು ಇಚ್ಚೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
Comments are closed.