
ಬಿಹಾರ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಹಾಗೂ ರಾಹುಲ್ ವಿರುದ್ಧ ತೀವ್ರಗೊಂಡಿರುವ ದಾಳಿಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಟ್ವಿಟ್ಟರ್‌ನಲ್ಲಿ ಇದೀಗ ಹೊಸ ಟ್ರೆಂಡ್ ಒಂದು ಸೃಷ್ಟಿಯಾಗಿದೆ. #MyLeaderRahulGandhi ಎಂಬ ಹ್ಯಾಷ್‌ಟ್ಯಾಗ್ ಇದೀಗ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ.
ನನ್ನ ನಾಯಕ ರಾಹುಲ್ ಗಾಂಧಿ ಎಂದು ಟ್ರೆಂಡ್ ಆಗುತ್ತಿರುವ ಈ ಟ್ವೀಟ್‌ಗಳಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವ ಗುಣದ ಗುಣಗಾನ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಎಂದಿಗೂ ರಾಜಕೀಯ ಜೀವನದಲ್ಲಿ ಸುಳ್ಳು ಹೇಳಿಲ್ಲ, ಅವರು ಅಭಿವೃದ್ಧಿ ಪರ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ದನಿ ಎತ್ತಬಲ್ಲ ಏಕೈಕ ನಾಯಕ ಎಂತಲೂ ಬಿಂಬಿಸಲಾಗುತ್ತಿದೆ.
ಸತ್ಯದ ಪರ ನಿಲ್ಲುವ ನಾಯಕ ರಾಹುಲ್, ರಾಜಕೀಯ ಎದುರಾಳಿಗಳನ್ನೂ ಅಪ್ಪಿಕೊಳ್ಳುವ ನಾಯಕ ಎಂದೆಲ್ಲಾ ಬಣ್ಣಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅಪ್ಪಿಕೊಳ್ಳುವ ಫೋಟೋ ಜೊತೆ ಪ್ರಕಟಿಸಲಾಗಿದೆ.
ಒಟ್ಟಿನಲ್ಲಿ ಬಿಹಾರ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಕಾಂಗ್ರೆಸ್ ಪಕ್ಷ ಇದೀಗ ಮೈ ಲೀಡರ್ ರಾಹುಲ್ ಗಾಂಧಿ ಎಂಬ ಟ್ವಿಟ್ಟರ್ ಟ್ರೆಂಡ್ ಮೂಲಕ ಪ್ರಚಲಿತದಲ್ಲಿದೆ.
Comments are closed.