ಅಂತರಾಷ್ಟ್ರೀಯ

ಮನಮೋಹನ್ ಸಿಂಗ್ ರನ್ನು ಪ್ರಧಾನಿ ಮಾಡುವುದರಿಂದ ರಾಹುಲ್ ಗೆ ಯಾವುದೇ ತೊಂದರೆಯಾಗದು: ಬರಾಕ್ ಒಬಾಮಾ ಆತ್ಮಚರಿತ್ರೆ

Pinterest LinkedIn Tumblr


ರಾಹುಲ್ ಗೆ ಮನಮೋಹನರಿಂದ ಯಾವುದೇ ತೊಂದರೆಯಾಗದು ಅಂತ ಅವರನ್ನು ಪ್ರಧಾನಿ ಮಾಡಲಾಗಿತ್ತು ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತನ್ನ ಆತ್ಮಚರಿತ್ರೆ A Promised land ನಲ್ಲಿ ನಮ್ಮ ದೇಶದ ಹಲವರ ಬಗ್ಗೆ ಬರೆದಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ಅವರು ಬರೆದ ಮಾತುಗಳು ಕೆಲವು ದಿನಗಳಿಂದ ಬಹಳ ಚರ್ಚೆಯಾಗಿ ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದ್ದವು. ರಾಹುಲ್ ಒಬ್ಬ ಅಂಜುಬುರುಕ, ಯಾವುದೆ ವಿಷಯವನ್ನು ಗಾಢವಾಗಿ ಅಭ್ಯಸಿಸುವುದಿಲ್ಲ, ಟ್ಯೂಶನ್ ನಲ್ಲಿ ಹೇಳಿ ಕೊಟ್ಟದ್ದನ್ನು ಟೀಚರ್ ಗೆ ಒಪ್ಪಿಸುವಂತೆ ರಾಹುಲ್ ಇದ್ದಾರೆ ಅಂತ ಬರೆದಿದ್ದಕ್ಕೆ ಕಾಂಗ್ರೆಸಿಗರು ಬರಾಕ್ ಒಬಾಮರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಈಗ ಅದೇ ಬುಕ್ ನಲ್ಲಿ ಬರಾಕ್ ಮನಮೋಹನ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆಯೂ ಬರೆದಿದ್ದಾರೆ. ಅದರಲ್ಲಿ ” ಮನಮೋಹನ್ ಸಿಂಗ್ ಒಬ್ಬರು ವಯಸ್ಸಾದ ಸಿಖ್ ರು. ಅವರಿಗೆ ಯಾವುದೇ ರಾಜಕೀಯದ ತಳಹದಿಯಿಲ್ಲ. ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಬೆಳೆಸುತ್ತಿರುವ ತನ್ನ 40 ವರ್ಷದ ಮಗ ರಾಹುಲ್ ಗಾಂಧಿಗೆ ಮನಮೋಹನರಿಂದ ಯಾವುದೇ ತೊಂದರೆಯಾಗದು ಅಂತ ಅವರನ್ನು ಪ್ರಧಾನಿ ಮಾಡಿದ್ದಾರೆ ಅಂತ ಲೇವಡಿ ಮಾಡಿದ್ದಾರೆ. ಇದು ಈಗ ರಾಜಕೀಯವಲ್ಲಿ ಮತ್ತೆ ಬಿರುಗಾಳಿ ಎಬ್ಬಿಸುವ ಸಾದ್ಯತೆ ಇದೆ.

Comments are closed.