ಕ್ರೀಡೆ

ಎಲಿಮಿನೇಟರ್‌ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ! ಸನ್​ರೈಸರ್ಸ್​ ಹೈದರಾಬಾದ್’ಗೆ ರೋಚಕ ಗೆಲುವು

Pinterest LinkedIn Tumblr

ಅಬುಧಾಬಿ: ಇಲ್ಲಿನ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೋಲು ಕಂಡಿದ್ದು, ಹೈದರಾಬಾದ್ ಕ್ವಾಲಿಫೈಯರ್2 ಕ್ಕೆ ಪ್ರವೇಶಿಸಿದರೆ, ಕೊಹ್ಲಿ ನಾಯಕತ್ವದ ಬೆಂಗಳೂರು ಟೂರ್ನಿಯಿಂದ ನಿರ್ಗಮಿಸಿದೆ.

ಆರ್​ಸಿಬಿ ಕಳಪೆ ಬ್ಯಾಟಿಂಗ್ ನಡುವೆ ಅನುಭಕ್ಕೆ ತಕ್ಕಂತೆ ಆಡಿದ ಎಬಿ ಡಿವಿಲಿಯರ್ಸ್​ ಅರ್ಧಶತಕ ಗಳಿಸಿದ ಪರಿಣಾಮ 20 ಓವರ್​ಗಳಲ್ಲಿ 131 ರನ್ ಗಳಿಸಿತು.

ಇಲ್ಲಿನ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತೆಯೇ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಸತತ ವಿಕೆಟ್‌ ಕೈಚೆಲ್ಲಿದರ ಪರಿಣಾಮ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 131 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು.

ಆರ್‌ಸಿಬಿ ಪರ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಎಬಿ ಡಿ’ವಿಲಿಯರ್ಸ್‌, 43 ಎಸೆತಗಳಲ್ಲಿ 5 ಫೋರ್‌ ಒಳಗೊಂಡ 56 ರನ್‌ ಗಳಿಸಿದರು. ಇದಕ್ಕೂ ಮುನ್ನ ಆರೊನ್‌ ಫಿಂಚ್‌ 30 ಎಸೆತಗಳಲ್ಲಿ 32 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು. ಸನ್‌ರೈಸರ್ಸ್‌ ಪರ ಜೇಸನ್‌ ಹೋಲ್ಡರ್‌ (25ಕ್ಕೆ 3) ಮತ್ತು ಟಿ ನಟರಾಜನ್ (33ಕ್ಕೆ 2) ವಿಕೆಟ್ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.

ಗೆಲುವಿಗೆ 132 ರನ್ ಗುರಿ ಪಡೆದ ಹೈದರಾಬಾದ್ 19.4 ಓವರ್ ಗಳಲ್ಲಿ ಗುರಿ ತಲುಪಿತು. ಕೇನ್ ವಿಲಿಯಮ್ಸನ್ 55( ಎಸೆತ) ಮನೀಶ್ ಪಾಂಡೆ 24 (21 ಎಸೆತ) ರನ್ ಗಳಿಸಿದರು. ಬೆಂಗಳೂರು ಪರ ಸಿರಾಜ್ 2 ವಿಕೆಟ್ ಪಡೆದರು.

ಇದಕ್ಕೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 131/7 ರನ್ ಗಳಿಸಿತು. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕೊಹ್ಲಿ(6) ನಿರಾಶೆ ಮೂಡಿಸಿದರು. ದೇವದತ್ತ ಪಡಿಕ್ಕಲ್ ಕೇವಲ 1 ರನ್ ಗಳಿಸಿದ ಔಟಾದರು. ಈ ವೇಳೆ ತಂಡವನ್ನು ಡಿವಿಲಿಯರ್ಸ್ ಹಾಗೂ ಆರೋನ್ ಫಿಂಚ್ ಆಧರಿಸಿದರು.

ಫಿಂಚ್ 32 (30 ಎಸೆತ) ರನ್ ಗಳಿಸಿದರೆ, ಡಿವಿಲಿಯರ್ಸ್ 56 ( 43 ಎಸೆತ) ರನ್ ಬಾರಿಸಿ ನಿರ್ಗಮಿಸಿದರು. ಉಳಿದಂತೆ ಮುಹಮ್ಮದ್ ಸಿರಾಜ್ (10) ಮಾತ್ರ ಎರಡಂಕಿ ಸ್ಕೋರ್ ಗಳಿಸಿದರು. ಸನ್‌ರೈಸರ್ಸ್‌ ಹೈದರಾಬಾದ್ ಪರ ಜೇಸನ್ ಹೋಲ್ಡರ್ 3, ನಟರಾಜನ್ 2, ನದೀಮ್ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಸೋಲುವ ಮೂಲಕ ಬೆಂಗಳೂರು ಫೈನಲ್‌ಗೆ ಹೋಗುವ ಅವಕಾಶ ಕಳೆದುಕೊಂಡಿತು. ಸನ್‌ರೈಸರ್ಸ್ ಎರಡನೇ ಕ್ವಾಲಿಫೈಯರ್ ನಲ್ಲಿ ಆಡಲಿದೆ.

Comments are closed.