ಕರಾವಳಿ

ಉಡುಪಿಯಲ್ಲಿ AKMS ಬಸ್ ಮಾಲಿಕ ಸೈಪುದ್ದೀನ್ ಹತ್ಯೆಗೆ ಸ್ಕೆಚ್; ಓರ್ವ ಮಹಿಳೆ ಸೇರಿ 9 ಮಂದಿ ಬಂಧನ

Pinterest LinkedIn Tumblr

ಉಡು‌ಪಿ: ಎರಡು ದಿನದ ಹಿಂದೆ ಉಡುಪಿಯಲ್ಲಿ ನಡೆದ ಮಲ್ಪೆ ಕೊಡವೂರಿನ ನಿವಾಸಿಯಾದ ಎಕೆಎಂಎಸ್ ಬಸ್ ಮಾಲೀಕ ಸೈಪುದ್ದೀನ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ.4 ರಂದು ಈ ಘಟನೆ ನಡೆದಿತ್ತು.

(ಸೈಫುದ್ಧೀನ್)

ಆರೋಪಿತರ ಪೈಕಿ ಓರ್ವ ಮಹಿಳೆಯೂ ಇದ್ದು ವಿರಾಜಪೇಟೆಯ ನಿವಾಸಿ ದರ್ಶನ್ ದೇವಯ್ಯ, ಮೂಡಬಿದ್ರೆ ಮೂರ್ನಾಡು ನಿವಾಸಿ ಸಂತೋಷ್ , ಸೋಮವಾರಪೇಟೆಯ ಅನಿಲ್ ಕುಮಾರ್, ಬೆಳ್ತಂಗಡಿ ಮಾರೋಡಿ ನಿವಾಸಿ ಸುಕೇಶ್ ಪೂಜಾರಿ, ಮೂಡಬಿದ್ರೆ ಮಾರ್ನಾಡು ನಿವಾಸಿ ಗೋಪಾಲ, ಬೆಳ್ತಂಗಡಿ ಟಿ.ಬಿ. ಕ್ರಾಸ್ ನಿವಾಸಿ ಮೋಹನ, ಕೆ.ಆರ್ ನಗರ ಶ್ರೀರಾಂಪುರದ ಸೋಮು, ಪಿರಿಯಾಪಟ್ಟಣದ ಮಹೇಶ್ ಬಾಬು, ವಿರಾಜಪೇಟೆಯ ಸೌಭಾಗ್ಯ ದರ್ಶನ್ ದೇವಯ್ಯ ಬಂಧಿತರು.

ಎರಡು ದಿನದ ಹಿಂದೆ ನಡೆದಿದ್ದೇನು…?
ಸೈಫುದ್ದೀನ್ ಘಟನೆ ನಡೆದ ದಿನ ತನ್ನ ಪಾಲುದಾರ ಅಕ್ರಂರವರೊಂದಿಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಂದ್ರನಗರದಲ್ಲಿನ ಆಫೀಸಿನಲ್ಲಿದ್ದಾಗ 5 ಮಂದಿ ಆರೋಪಿಗಳು ಮಾರಕಾಯುಧಗಳೊಂದಿಗೆ ಕಛೇರಿಗೆ ನುಗ್ಗಿ ಸೈಪುದ್ದೀನ್‌ನನ್ನು ಹತ್ಯೆ ಮಾಡಲು ವಿಫಲ ಯತ್ನ ನಡೆಸಿದ್ದು ಸೈಪುದ್ದೀನ್ ತಕ್ಷಣ ದಾಳಿಯಿಂದ ತಪ್ಪಿಸಿಕೊಂಡಿದ್ದರು. ಇದೇ ವೇಳೆ ಆರೋಪಿಗಳು ಡಸ್ಟರ್ ಕಾರಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಸೈಪುದ್ದೀನ್ ಮಣಿಪಾಲ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದರು.

(ಉಡುಪಿ ಎಸ್ಪಿ)

ಆರೋಪಿಗಳ ಬಂಧನಕ್ಕೆ 3 ತಂಡ…ಶೀಘ್ರ ಬಂಧನ…
ಆರೋಪಿತರನ್ನು ಬಂಧಿಸಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ವಿಷ್ಣುವರ್ಧನ್, ಉಡುಪಿ ಹಾಗೂ ಕಾರ್ಕಳ ಡಿ.ವೈ.ಎಸ್.ಪಿ ಮತ್ತು ಕುಂದಾಪುರ ಎ.ಎಸ್.ಪಿ ನೇತೃತ್ವದಲ್ಲಿ 3 ಪ್ರತ್ಯೇಕ ತನಿಖಾ ತಂಡಗಳನ್ನು ರಚನೆ ಮಾಡಿದ್ದರು.ತನಿಖಾ ತಂಡದ ಅಧಿಕಾರಿ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಕಾರ್ಕಳದ ಮುರತ್ತಂಗಡಿಯ ಲಾಡ್ಜ್ ನಲ್ಲಿ ಅಡಗಿಕೊಂಡಿದ್ದ 9 ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ತಂಡ….
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ, ಅಡಿಷನಲ್ ಎಸ್.ಪಿ ಕುಮಾರ ಚಂದ್ರ ನಿರ್ದೇಶನದಲ್ಲಿ, ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ಡಿವೈಎಸ್ಪಿ ಟಿ.ಆರ್ ಜೈ ಶಂಕರ್, ಕಾರ್ಕಳ ಡಿವೈಎಸ್ಪಿ ಭರತ್.ಎಸ್.ರೆಡ್ಡಿ, ಮಣಿಪಾಲ ಇನ್ಸ್‌ಪೆಕ್ಟರ್ ಮಂಜುನಾಥ್.ಎಂ, ಕಾರ್ಕಳ ಸರ್ಕಲ್ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್.ಎ, ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತಪದ್ಮನಾಭ, ಪೊಲೀಸ್ ನಿರೀಕ್ಷಕರು ಡಿಸಿಐಬಿ, ಸಿಬ್ಬಂದಿಗಳು, ಮಣಿಪಾಲ ಪಿಎಸ್ಐ ರಾಜಶೇಖರ್, ಬ್ರಹ್ಮಾವರ ಪಿಎಸ್ಐ ರಾಘವೇಂದ್ರ ಸಿ, ಹಿರಿಯಡ್ಕ ಪಿಎಸ್ಐ ಸುಧಾಕರ ತೋನ್ಸೆ, ಕಾರ್ಕಳ ನಗರ ಪಿಎಸ್ಐ ಮಧು, ಹೆಬ್ರಿ ಪಿಎಸ್ಐ ಸುಮ ಹಾಗೂ ತಂಡ ಕಾರ್ಯಾಚರಣೆಯನ್ನು ನಡೆಸಿದೆ‌.

(ವರದಿ- ಯೋಗೀಶ್ ಕುಂಭಾಸಿ)

Comments are closed.