ಕರಾವಳಿ

ನಾಟಕ ಹಾಗೂ ಕರಾವಳಿಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ಕೋರಿ ಕಲಾವಿದರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Pinterest LinkedIn Tumblr

ಮಂಗಳೂರು, ನವೆಂಬರ್. 06: ಕೋವಿಡ್ ಲಾಕ್‌ಡೌನ್ ಸಂದರ್ಭ ಸ್ಥಗಿತಗೊಂಡಿದ್ದ ಯಕ್ಷಗಾನಕ್ಕೆ ಸರ್ಕಾರ ಈಗಾಗಲೇ ಅನುಮತಿ ನೀಡಿದ್ದು, ಅದೇ ರೀತಿ ದ.ಕ.ಜಿಲ್ಲೆಯಲ್ಲಿ ನಾಟಕ ಹಾಗೂ ಕರಾವಳಿಯ ಇನ್ನಿತರ ಸಾಂಪ್ರಾದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ತು (ರಿ) ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಜಿಲ್ಲೆ ಇದರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ನಿಯೋಗವು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಕಲೆಯನ್ನೇ ನಂಬಿಕೊಂಡು ಬಂದಿರೋ ಅದೆಷ್ಟೋ ಕಲಾವಿದರನ್ನ ನಾವು ನಮ್ಮ ಸುತ್ತಮುತ್ತ ನೋಡುತ ಬಂದಿದ್ದೀವಿ. ಆದರೆ ಕಳೆದ ಎಂಟು ತಿಂಗಳು ಗಳಿಂದ ಇವರ ಜೀವನ ಸಂಪೂರ್ಣ ಸಂಕಷ್ಟದಲ್ಲೇ ನಡೆಯುತಿದೆ. ಇದಕ್ಕೆ ಕಾರಣ ದೇಶಾದ್ಯಂತ ವಕ್ಕರಿಸಿಕೊಂಡ ಮಹಾಮಾರಿ ಕೊರೊನ.

ಸಾಮಾಜಿಕ ಅಂತರ ಹಾಗೂ ಸುರಕ್ಷತೆಯ ಬಗ್ಗೆ ಸರಕಾರದ ನಿಯಮಾನುಸಾರ ಜನರ ಆರೋಗ್ಯದ ನಿಟ್ಟಿನಲ್ಲಿ ಎಲ್ಲಾ ಸಭೆ ಸಮಾರಂಭಗಳನ್ನು ದೇವಸ್ಥಾನ ಉತ್ಸವ ಅಂಕ ಆಯಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದ ಮೇಲೆ ನಿರ್ಬಂದನೆ ಹೇರಲಾಯಿತು ಅವತ್ತಿನಿಂದ ಕಲಾವಿದರ ಬದುಕಲ್ಲಿ ಕಾರ್ಮೊಡದ ಕರಿ ಛಾಯೆ ಆವರಿಸ ತೊಡಗಿತು ಇನ್ನು ಏನು? ಎತ್ತ? ಎನ್ನುವಷ್ಟರಲ್ಲಿ ಹಲವು ಸಂಕಷ್ಟಕಗಳ ನಡುವೆ ಕಲಾವಿದನ ಬದುಕು ಉರುಳಿ ಹೋಯಿತು.

ಸರಕಾರದ ಸಾಂತ್ವನದ ಹಣ ಬೆರಳಣಿಕೆಯಷ್ಟು ಕಲಾವಿದರಿಗೆ ದೊರೆತರೆ ಇನ್ನು ಸಂಘ ಸಂಸ್ಥೆಗಳಿಂದ ಆರ್ಥಿಕ ಸ್ಥಿತಿ ಕಷ್ಟದಲ್ಲಿರುವ ಹಲವು ಕಲಾವಿದರಿಗೆ ಸಹಾಯ ಮಾಡಿದರು ಸಂಕಷ್ಟದ ಸಮಯದಲ್ಲಿ ಬಡ ಕಲಾವಿದರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದ ಎಲ್ಲಾ ಸಂಘ ಸಂಸ್ಥೆಗಳಿಗೂ ಕಲಾವಿದರು ಚಿರಋಣಿ ಆಗಿರುತಾರೆ.

ಅವೆಲ್ಲ ಓರ್ವ ಕಲಾವಿದನ ಎಂಟು ತಿಂಗಳ ಬದುಕಿನಲ್ಲಿ ಶೇಕಡಾ ನೂರಕ್ಕೆ ಒಂದು ಭಾಗ ಜೀವನಕ್ಕೆ ಸರಿದೂಗಿತು ನಂತರದ ದಿನಗಳಲ್ಲಿ ಕಲಾವಿದ ತನ್ನ ಒಂದೊಂದು ದಿನದಲ್ಲಿ ಕೂಡಾ ತನ್ನ ವಯಕ್ತಿಕ ವೇದನೆಯನ್ನು ಯಾರಲ್ಲಿ ತೋರ್ಪಡಿಸದೆ ಕಾಲವನ್ನು ಕಳೆಯುತ್ತ ಬಂದಿದ್ದಾನೆ. ಕಾರಣ ನಂಬಿಕೆ ಇಂದು ಸರಿಯಾಗಬಹುದು ಬದುಕು ನಾಳೆ ಸರಿಯಾಗಬಹುದು ಎಂದು. ಇದೀಗ ಬದುಕಿನ ಬದಲಾವಣೆ ಮಹಾಮಾರಿ ಕೊರೋನದ ಆರ್ಭಟ ಮಾಸುತ ಬರುವಾಗ ಏನೋ ಕಲಾವಿದನ ಬದುಕಲ್ಲಿ ಮತ್ತೆ ಚಿಗುರೊಡೆದು ನಿಂತಿದೆ.

ತುಳುನಾಡಿನಲ್ಲಿ ಯಕ್ಷಗಾನ ಕಲಾವಿದರು ನಾಟಕ ರಂಗದ ಕಲಾವಿದರು ಸಂಗೀತ ರಸಮಂಜರಿ ಕಲಾವಿದರು ನೃತ್ಯ ಕಲಾವಿದರು ಜಾದೂ ಕಲಾವಿದರು ದೈವಾರಾಧನೆ ಮಾಡುವ ಕಲಾವಿದರು ಇದ್ದಾರೆ. ಇದೀಗ ಸರಕಾರದ ಆದೇಶದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಇದೆ ಎಂದು ಆದೇಶವನ್ನು ಸರಕಾರ ಹೊರಡಿಸಿದೆ. ಆದರೆ ನಾಟಕ ರಂಗದ ಕಲಾವಿದರು ಸಂಗೀತ ರಸಮಂಜರಿ ಕಲಾವಿದರು ನೃತ್ಯ ಕಲಾವಿದರು ಜಾದೂ ಕಲಾವಿದರು ದೈವಾರಾಧನೆ ಮಾಡುವ ಕಲಾವಿದರು ಇವರ ಪಾಡೇನು ಅನ್ನೋ ಪ್ರಶ್ನೆ ಬಂದಿದೆ.

ಈ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಂದಿಸಿ ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ತು (ರಿ) ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಜಿಲ್ಲೆ ಇದರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ನಿಯೋಗವು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಇವರನ್ನು ಭೇಟಿಯಾಗಿ ನಾಟಕ ಹಾಗು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಂತೆ ಮನವಿಯನ್ನು ಸಲ್ಲಿಸಿದೆ.

ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ತು (ರಿ) ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಜಿಲ್ಲೆ ಇದರ ಅಧ್ಯಕ್ಷರಾದ ಮೋಹನ್ ದಾಸ್ ಕೊಟ್ಟಾರಿ, ಪ್ರ ಧಾನ ಕಾರ್ಯದರ್ಶಿ ರಾಜೇಶ್ ಕಣ್ಣೂರು, ಗೌರವ ಸಲಹೆಗಾರರು ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸ್ಥಾಪಕ ಸದಸ್ಯ ರಮೇಶ್ ರೈ ಕುಕ್ಕುವಳ್ಳಿ, ಚಿದಾನಂದ ಅದ್ಯಪಾಡಿ, ನ್ಯಾಯವಾದಿ ಮೋಹನ್ ದಾಸ್ ರೈ,, ಕೀತ್ ಪುರ್ತಾಡೊ, ಚಲನಚಿತ್ರ ನಿರ್ದೇಶಕ ವಿಶ್ವನಾಥ್ ಕೋಡಿಕಲ್, ನ್ಯಾಯವಾದಿ ರಿತೇಶ್ ಬಂಗೇರ ಹಾಗೂ ಮಾಜಿ ಮೇಯರ್ ಶಶಿಧರ್ ಹೆಗ್ಡೆ ನಿಯೋದಲ್ಲಿದ್ದರು.

ಮನವಿ ಸ್ವೀಕರಿಸಿರುವ ಜಿಲ್ಲಾಧಿಕಾರಿಗಳು ಸರಕಾರ ಹೇರಿರುವ ನಿಯಮಗಳನ್ನು ಪಾಲಿಸಿಕೊಂಡು ಆ ಪ್ರಕಾರ ನಾಟಕ ಪ್ರದರ್ಶನಕ್ಕೆ ಒಪ್ಪಿಗೆಯನ್ನ ನೀಡಿರುತಾರೆ ಎಂದು ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ತ್ ನ ಅಧ್ಯಕ್ಷರು ತಿಳಿಸಿದ್ದಾರೆ.

Comments are closed.