ಆರೋಗ್ಯ

ಕೊರೋನಾ: ಅಣಬೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ: ಜನರಿಂದ ಭಾರೀ ಬೇಡಿಕೆ!

Pinterest LinkedIn Tumblr


ಬೆಂಗಳೂರು: ಅಣಬೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿರುವದರಿಂದ ಇದಕ್ಕೆ ರಾಜ್ಯಾದ್ಯಂತ ಜನರಿಂದ ಭಾರೀ ಬೇಡಿಕೆ ಹೆಚ್ಚಿದೆ.

ಅಣಬೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಣಬೆ ಮಾರಾಟ ಮಾಡುವ ಕೇಂದ್ರಗಳಲ್ಲಿ ಬೇಡಿಕೆಗಳು ಹೆಚ್ಚಾಗಿವೆ.

ಭಾರತೀಯ ತೋಟಗಾರಿಕಾ ಸಂಸ್ಥೆಯು (ಐಐಎಚ್ಆರ್) ವಿಜ್ಞಾನಿಗಳು ಮಾತನಾಡಿ, ರೆಡಿ ಟು ಫ್ರೂಟ್ ಬ್ಯಾಗ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಅಣಬೆ ಕೃಷಿಗೆ ಒಣಹುಲ್ಲು ಅತ್ಯಗತ್ಯವಾಗಿದ್ದು, ಇವುಗಳ ಪೂರೈಕೆಯಲ್ಲಿ ಕೊರತೆ ಎದುರಾಗಿರುವುದರಿಂದ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ,

“ಅಣಬೆಗಳು ಮನುಷ್ಯನ ದೇಹಕ್ಕೆ ಶಕ್ತಿ ಮತ್ತು ಪೌಷ್ಟಿಕಾಂಶ ನೀಡುವ ಉತ್ತಮ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಣ್ಣ ಪ್ರಮಾಣದ ರೈತರು ಹಾಗೂ ಮಹಿಳೆಯರು ಅಣಬೆಯನ್ನು ಖರೀದಿ ಮಾಡುತ್ತಿದ್ದರು. ಆದರೀಗ ಹೊಸ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಇದೀಗ ಒಣಹುಲ್ಲಿನ ಕೊರತೆ ಎದುರಾಗಿರುವುದರಿಂದ ಚೀಲಗಲ್ಲಿ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಿದ್ದೇವೆಂದು ಭಾರತೀಯ ತೋಟಗಾರಿಕಾ ಸಂಸ್ಥೆಯ ಸಂಶೋಧನಾ ಪ್ರಯೋಗಾಲಯದ ಪ್ರಧಾನ ಸೈಂಟಿಸ್ಟ್ ಡಾ.ಮೀರಾ ಪಾಂಡೆ ಹೇಳಿದ್ದಾರೆ.

ಅಣಬೆ ಬೆಳೆಯುವ ವೇಳೆ ಬಳಸಲಾಗುವ ಒಳಹುಲ್ಲನ್ನು ತಮಿಳನಾಡಿನಿಂದ ಸರಬರಾಜು ಮಾಡಿಸಿಕೊಳ್ಳಲಾಗುತ್ತಿತ್ತು. ಆದರೆ, ಲಾಕ್ಡೌನ್ ಹಾಗೂ ಸಾರಿಗೆ ನಿರ್ಬಂಧಗಳು ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ಅಣಬೆ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.

Comments are closed.