
ಮುಂಬೈ: ಅಕ್ಟೋಬರ್ 30ಕ್ಕೆ ನಟಿ ಕಾಜಲ್ ಅಗರ್ವಾಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಬಗ್ಗೆ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ವಿವರವನ್ನು ಹಂಚಿಕೊಂಡಿದ್ದಾರೆ.
ಕಾಜಲ್ ಅವರು ಬೆಂಗಳೂರು ಮೂಲದ ಉದ್ಯಮಿ ಗೌತಮ್ ಕಿಚ್ಲು ಅವರೊಂದಿಗೆ ಅಕ್ಟೋಬರ್ 30ರಂದು ಮುಂಬೈನಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ನನ್ನ ಮದುವೆ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಮುಂಬೈನಲ್ಲಿ ಸರಳವಾಗಿ ನಡೆಯಲಿದೆ. ಕೊರೋನಾದಂತಹ ಈ ಬಿಕ್ಕಟ್ಟಿನ ಸಂದರ್ಭ ನಮ್ಮ ಮದುವೆಯ ಸಂಭ್ರಮದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ನಾವು ಸರಳವಾಗಿ ವಿವಾಹವಾಗುತ್ತಿದ್ದೇವೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ನಮಗೆ ಎಲ್ಲರೂ ಆಶೀರ್ವದಿಸಿ, ಹಾರೈಸಿ ಎಂದು ಹೇಳಿಕೊಂಡಿದ್ದಾರೆ.
‘ನಾನು ಬೆಳ್ಳಿತೆರೆಯಲ್ಲಿ ಇಷ್ಟು ದೀರ್ಘಕಾಲ ಉಳಿಯಲು ಅಭಿಮಾನಿಗಳೇ ಕಾರಣ. ಇದೇ ಅಭಿಮಾನವನ್ನು ಮುಂದೆಯೂ ನನಗೆ ನೀಡಿ. ನಿಮ್ಮ ಆಶೀರ್ವಾದದಿಂದಲೇ ಹೊಸ ಪಯಣ ಆರಂಭಿಸಲು ನಿರ್ಧರಿಸಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ಕಾಜಲ್ ತಿಳಿಸಿದ್ದಾರೆ.
Comments are closed.