
ಬೆಂಗಳೂರು: ಅ.15ರಿಂದ ಹಂತ ಹಂತವಾಗಿ ಶಾಲಾ ಕಾಲೇಜ್ ಆರಂಭಕ್ಕೆ ರಾಜ್ಯ ಸರ್ಕಾರ ಅಸ್ತು ಹೇಳಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ ಶಾಲೆ ಹಾಗೂ ಸ್ಥಳೀಯ ಆಡಳಿತದ ಸಮಾಲೋಚನೆಯೊಂದಿಗೆ ಷರತ್ತುಗಳ ಅನ್ವಯವಾಗಿ ಹಂತಹಂತವಾಗಿ ಶಾಲೆ ಆರಂಭಿಸುವುದಾಗಿ ತಿಳಿಸಿದೆ. ಈ ಹಿಂದೆ ಸೆಪ್ಟೆಂಬರ್ 21ರಿಂದ ಶಾಲಾ-ಕಾಲೇಜ್ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನಲೆ ಈ ಆದೇಶವನ್ನು ಹಿಂಪಡೆಯಲಾಗಿತ್ತು. ಇಂದು ಅನ್ಲಾಕ್ ಮಾರ್ಗ ಸೂಚಿ ಪ್ರಕಟಿಸಿರುವ ರಾಜ್ಯ ಸರ್ಕಾರ ಆಯಾ ಶಿಕ್ಷಣ ಸಂಸ್ಥೆಗಳೊಡನೆ ಚರ್ಚೆ ನಡೆಸಿ ಶಾಲಾ-ಕಾಲೇಜು ಆರಂಭಕ್ಕೆ ಮುಂದಾಗಿದೆ. ಇದೇ ವೇಳೆ ಆನ್ಲೈನ್ ತರಗತಿಗೂ ಕೂಡ ಅದು ಒತ್ತು ನೀಡಿದ್ದು, ಇದನ್ನೇ ಮುಂದುವರೆಸಲು ಶಿಕ್ಷಣ ಸಂಸ್ಥೆಗಳು ಇಚ್ಚಿಸಿದರೆ ಇದಕ್ಕೆ ಅವಕಾಶ ಇದೆ ಎಂದಿದೆ.
ಸುತ್ತ ಶಾಲೆಗಳು ಆನ್ಲೈನ್ ತರಗತಿ ಮೊರೆಹೋಗಿದ್ದು, ಅದನ್ನೇ ಅನುಸರಿಸಲು ಇಚ್ಛಿಸಿದರೆ ಅದಕ್ಕೆ ಅನುಮತಿ ನೀಡಬಹುದು.
ಒಂದು ವೇಳೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಲು ಬಯಸಿದ್ದರೆ, ಅದಕ್ಕೆ ಅವರ ಪೋಷಕರಿಂದ ಅನುಮತಿ ಪತ್ರ ಕಡ್ಡಾಯವಾಗಿದೆ.
ಹಾಜರಾತಿ ಕಡ್ಡಾಯವಲ್ಲ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಕುರಿತು ಪೋಷಕರದ್ದೇ ಅಂತಿಮ ತೀರ್ಮಾನ.
ಶಿಕ್ಷಣ ಸಂಸ್ಥೆ ತೆರೆಯಲು ಮುಂದಾದರೆ ಆರೋಗ್ಯ ಮತ್ತು ಸುರಕ್ಷಾ ದೃಷ್ಟಿಕೋನ ಅನುಸರಿಸಬೇಕು. ಇದನ್ನು ಶಿಕ್ಷಣ ಇಲಾಖೆ ಆಧಾರದ ಮೇಲೆ ಈ ನಿಯಮಗಳ ಪಾಲನೆ ಮಾಡಬೇಕು
ಪುನರ್ಆರಂಭವಾದ ಶಾಲೆಗಳು ಈ ಸುರಕ್ಷಾ ನಿಯಮ ಪಾಲಿಸುವುದು ಕಡ್ಡಾಯ
ಉನ್ನತ ಶಿಕ್ಷಣ ಇಲಾಖೆ ಕಾಲೇಜು ಆರಂಭ ಕುರಿತು ಪರಿಸ್ಥಿತಿ ಅವಲೋಕಿಸಿ ಸಮಯ ನಿಗದಿಪಡಿಸಬಹುದು. ಆನ್ಲೈನ್/ ದೂರ ಶಿಕ್ಷಣ ಕಲಿಕೆ ಉತ್ತೇಜನಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕು.
ಅದಾಗ್ಯೂ, ಉನ್ನತ ಶಿಕ್ಷಣ ಸಂಸ್ಥೆಗಳು ಅದರಲ್ಲಿಯೂ ಸಂಶೋಧನ ವಿದ್ಯಾರ್ಥಿ (ಪಿಎಚ್ಡಿ) ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಬೋರೇಟರಿ ಅವಶ್ಯಕವಾಗಿದೆ. ಈ ಹಿನ್ನಲೆ ಅಕ್ಟೋಬರ್ 15ರಿಂದ ಇದನ್ನು ತೆರೆಯಲು ಅನುಮತಿ ನೀಡಲಾಗಿದೆ. ಇದಕ್ಕೆ ಅನುಮತಿ ಕಡ್ಡಾಯ.
Comments are closed.