ರಾಷ್ಟ್ರೀಯ

ಒಂದು ವೇಳೆ ನನಗೆ ಕೋವಿಡ್-19 ಸೋಂಕು ತಗುಲಿದರೆ ಮಮತಾ ಬ್ಯಾನರ್ಜಿ ತಬ್ಬಿಕೊಳ್ಳುತ್ತೇನೆ’ ಎಂದಿದ್ದ ಬಿಜೆಪಿ ನಾಯಕನಿಗೆ ಪಾಸಿಟಿವ್

Pinterest LinkedIn Tumblr


ಕೋಲ್ಕತ್ತಾ: ಒಂದು ವೇಳೆ ನನಗೆ ಕೋವಿಡ್-19 ಸೋಂಕು ತಗುಲಿದರೆ ನಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಅನುಪಮ್ ಹಜ್ರಾ ಅವರಿಗೆ ಈಗ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಇತ್ತೀಚಿಗಷ್ಟೇ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಅನುಪಮ್ ಹಜ್ರಾ ಅವರಿಗೆ ಈಗ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕೋಲ್ಕತಾದ ಖಾಸಗಿ ಆಸ್ಪತ್ಪೆಗೆ ದಾಖಲಾಗಿದ್ದಾರೆ.

ಕೋವಿಡ್-19 ರೋಗಿಗಳ ಕುಟುಂಬಗಳ ನೋವು ಏನು ಅಂತ ಮಮತಾ ಬ್ಯಾನರ್ಜಿಗೆ ಅರ್ಥ ಮಾಡಿಸಲು ನಾನು ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಹಜ್ರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಜ್ರಾ ನೀಡಿರುವ ಹೇಳಿಕೆ ವಿರುದ್ಧ ಸಿಲಿಗುರಿಯಲ್ಲಿ ಟಿಎಂಸಿ ದೂರು ದಾಖಲಿಸಿದೆ.

ನಮ್ಮ ಪಕ್ಷದ ಕಾರ್ಯಕರ್ತರು ಕೊರೋನಾಗಿಂತಲೂ ದೊಡ್ಡ ಶತ್ರುವಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಒಂದು ವೇಳೆ ನನಗೆ ಕೊರೋನಾವೈರಸ್ ತಗುಲಿದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳಲು ನಿರ್ಧರಿಸಿರುವುದಾಗಿ ಹಜ್ರಾ ಹೇಳಿದ್ದರು.

Comments are closed.