ಮಳೆಗಾಲದಲ್ಲಿ ಅನೇಕರಿಗೆ ಚರ್ಮದ ಸಮಸ್ಯೆಗಳು ಕಾಡುವುದು ಸಹಜ. ಅದರೆ ಅದರಿಂದ ಪರಿಹಾರ ಕಾಣುವ ಪ್ರಯತ್ನ ಯಾರು ಮಾಡಲ್ಲ. ಪ್ರತಿಯೊಂದಕ್ಕೂ ವೈದ್ಯರ ಮೊರೆ ಹೋಗುವುದು ಪರಿಹಾರವೆಂದು ಬಾವಿಸುತ್ತಾರೆ ಆದರೆ ವೈದ್ಯರ ಬಳಿ ಹೋಗದೆ ಮನೆಯಲ್ಲಿ ಮಾಡುವಂತಹ ಔಷಧವನ್ನು ಪ್ರಯತ್ನಸಿ ಇದಕ್ಕೆ ಪರಿಹಾರ ಕಾಣಿರಿ.
ಚರ್ಮದ ಅಲರ್ಜಿಗೆ ಕಾರಣ ಮತ್ತು ಪರಿಹಾರ:
ಚರ್ಮದ ಅಲರ್ಜಿಯಿಂದ ತುರಿಕೆ ಕಡಿತ ಉಂಟಾಗುವುದು ಕಂಡುಬರುತ್ತದೆ. ಈ ರೀತಿಯ ಸಮಸ್ಯೆಗಳು ಬರುವುದಕ್ಕೆ ಮುಖ್ಯ ಕಾರಣ ಗಳೆಂದರೆ ಚರ್ಮದ ಮೇಲೆ ಫಂಗಸ್, ಇನ್ಫೆಕ್ಷನ್, ಫುಡ್ ಅಲರ್ಜಿ ಇಂತಹ ಹಲವಾರು ಕಾರಣಗಳು ಇರುತ್ತವೆ. ಆದರೆ ಕೆಲವರಿಗೆ ಈ ರೀತಿಯ ಅಲರ್ಜಿಗಳು ಉಂಟಾದಾಗ ಉಗುರಿನಿಂದ ಕೆರೆದುಕೊಳ್ಳುವ ಅಭ್ಯಾಸವಿರುತ್ತದೆ. ಹೀಗೆ ಮಾಡುವುದರಿಂದ ಮೃದುವಾದ ಚರ್ಮ ಹಾಳಾಗುವುದರ ಜೊತೆಗೆ ಅಲ್ಲಿ ಗಾಯಗಳು ಉಂಟಾಗುತ್ತವೆ. ಅಷ್ಟಲ್ಲದೆ ಈ ರೀತಿಯಾಗಿ ಕೆರೆದುಕೊಳ್ಳುವುದರಿಂದ ಇನ್ಫೆಕ್ಷನ್ ಎಲ್ಲಾ ಕಡೆ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗೂ ಚರ್ಮದ ಅಲರ್ಜಿಗಳು ಮನೆಯಲ್ಲಿ ಒಬ್ಬರಿಗೆ ಬಂದರೆ ಉಳಿದವರಿಗೂ ಹರಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಈ ರೀತಿ ಚರ್ಮದ ಅಲರ್ಜಿಗಳು ಉಂಟಾದಾಗ ತೊರಿಸಿಕೊಳ್ಳುವುದು ಕೆರೆದು ಕೊಳ್ಳುವುದನ್ನು ಬಿಟ್ಟು ಸುಲಭದ ಮನೆಮದ್ದನ್ನು ಮಾಡಿಕೊಳ್ಳುವುದರಿಂದ ತಕ್ಷಣವೇ ಅಲರ್ಜಿಯಂತಹ ಕಾಯಿಲೆಯನ್ನು ಶಮನ ಮಾಡಿಕೊಳ್ಳಬಹುದು.
ಕಹಿ ಬೇವಿನ ಎಲೆ ಪೇಸ್ಟ್ :
ಈ ಮನೆಮದ್ದನ್ನು ಮಾಡಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಕಹಿ ಬೇವಿನ ಎಲೆ. ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯ ದು. ಚರ್ಮದ ಅಲರ್ಜಿ ಹಾಗೂ ಇನ್ಫೆಕ್ಷನ್ ಗಳಿಗೆ ಈ ಕಹಿಬೇವಿನ ಎಲೆ ತುಂಬಾ ಒಳ್ಳೆಯದು. ಇದರಲ್ಲಿ ಆಂಟಿ ಸಪ್ಟಿಕ್ ಗುಣಗಳು ಹೆಚ್ಚಾಗಿರುತ್ತದೆ. ಫಂಗಸ್ಗಳನ್ನು ಬ್ಯಾಕ್ಟೀರಿಯಾಗಳನ್ನು ನಾಶ ಮಾಡಲು ಬೇವಿನ ಸೊಪ್ಪು ತುಂಬಾ ಸಹಾಯಕಾರಿಯಾಗಿದೆ. ಕಜ್ಜಿಯ ಮೂಲಕ ಬರುವಂತಹ ಇನ್ಫೆಕ್ಷನ್ ಹಾಗೂ ಕಡಿತವನ್ನು ಸಹ ನಿವಾರಣೆ ಮಾಡುತ್ತದೆ. ಈ ಎಲ್ಲಾ ಕಾಯಿಲೆಗಳನ್ನೂ ನಿವಾರಣೆ ಮಾಡಿಕೊಳ್ಳಲು ಒಂದು ಹಿಡಿಯಷ್ಟು ಬೇವಿನ ಎಲೆಯನ್ನು ತಂದು ಸ್ವಚ್ಛವಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಮಾತ್ರ ನೀರು ಸೇರಿಸಿ ಸಾಧ್ಯ ಆದಷ್ಟು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ಪೇಸ್ಟ್ ಮಾಡಿಕೊಂಡು ಒಂದು ಸಣ್ಣ ಬೌಲ್ನಲ್ಲಿ ತೆಗೆದುಕೊಂಡು ನಂತರ ಮನೆಯಲ್ಲಿ ಸಿಗುವಂತಹ ಎಲೋವೇರದ ಒಂದು ಸಣ್ಣ ತುಂಡನ್ನು ಕೊಳ್ಳಬೇಕು. ಎಲೋವೆರಾ ದಲ್ಲಿ ಆಂಟಿ ಫಂಗಲ್ , ಆಂಟಿಸೆಪ್ಟಿಕ್ , ಆಂಟಿ-ಬ್ಯಾಕ್ಟಿರಿಯಾ ಲಕ್ಷಣಗಳು ಇರುತ್ತದೆ. ಮುಖ್ಯವಾಗಿ ಇದು ನಮ್ಮ ಚರ್ಮ ಕಾಯಿಲೆಗಳನ್ನು ದೂರ ಮಾಡಲು ತುಂಬಾ ಸಹಾಯ ಮಾಡುತ್ತದೆ. ಹಾಗೆ ಕಜ್ಜಿ ಇನ್ಫೆಕ್ಷನ್ ಗಳಿಂದ ಆಗುವ ಕಡಿತ ಉರಿಯನ್ನು ಸಹ ಕಡಿಮೆ ಮಾಡುತ್ತದೆ.
ನಂತರ 1 ಸ್ಪೂನ್ ಎಲೋವೆರ ಜೆಲ್ ಗೆ 1 ಸ್ಪೂನ್ ಬೇವಿನ ಪೇಸ್ಟ್ ಅನ್ನು ಸೇರಿಸಿ ಅದಕ್ಕೆ ಒಂದು ಕರ್ಪೂರವನ್ನು ಕೈಯಿಂದ ಪುಡಿ ಮಾಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಕರ್ಪೂರ ನಮ್ಮ ಶರೀರದ ಮೇಲೆ ಒಂದು ಆಂಟಿ ಫಂಗಲ್ ತರಾ ಕೆಲಸ ಮಾಡುತ್ತದೆ. ಕೆಲವು ಸೂಕ್ಷ್ಮ ಜೀವಿಗಳನ್ನು ಹಾಗೂ ಫಂಗಸ್ ಗಳನ್ನು ನಾಶ ಮಾಡುತ್ತದೆ. ಇದು ಎಲ್ಲಾ ರೀತಿಯ ಸ್ಕಿನ್ ಅಲರ್ಜಿ ಹಾಗೂ ಇನ್ಫೆಕ್ಷನ್ ಗಳನ್ನು ಹೋಗಲಾಡಿಸುತ್ತದೆ. ಹಾಗಾಗಿ ಈ ಮೂರು ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಇದನ್ನು ನೇರವಾಗಿ ಕೈಯಿಂದ ಹಚ್ಚದೆ ಒಂದು ಹತ್ತಿಯ ಸಹಾಯದಿಂದ ನಮಗೆ ಇನ್ಫೆಕ್ಷನ್ ಅಥವಾ ಕಜ್ಜಿ ಆದ ಜಾಗಕ್ಕೆ ಹಚ್ಚಬೇಕು. ಯಾವುದೇ ರೀತಿಯ ಚರ್ಮದ ಅಲರ್ಜಿ ಇನ್ಫೆಕ್ಷನ್ ಗಳಿಗೆ ಇದು ಉತ್ತಮ ಪರಿಹಾರ ಎನ್ನಬಹುದು.
ಇನ್ಫೆಕ್ಷನ್ ಆದ ಜಾಗಕ್ಕೆ ಮಾತ್ರ ಹಚ್ಚುವುದು ಮಾತ್ರ ಅಲ್ಲದೆ ಅದರ ಸುತ್ತಲಿನ ಜಾಗಕ್ಕೂ ಸಹ ಹಚ್ಚುವುದರಿಂದ ಬೇರೆ ಕಡೆ ಇನ್ಫೆಕ್ಷನ್ ಹರಡುವುದನ್ನು ತಡೆಗಟ್ಟಬಹುದು. ಆದಷ್ಟು ಇದನ್ನು ಪ್ರತೀ ದಿನ ರಾತ್ರಿ ಮಲಗುವ ಸಮಯದಲ್ಲಿ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ವನ್ನು ಕಾಣಬಹುದು. ನಾವು ಇಲ್ಲಿ ಎಲ್ಲವನ್ನು ನೈಸರ್ಗಿಕ ಪದಾರ್ಥಗಳನ್ನು ಹೆಚ್ಚಾಗಿ ಬಳಸಿರುವುದರಿಂದ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಹಿಂದಿನ ಕಾಲದವರು ಸಹ ಈ ರೀತಿಯ ಚರ್ಮ ಸಂಬಂಧಿತ ಕಾಯಿಲೆಗಳು ಬರಬಾರದು ಎಂದು ಸ್ನಾನ ಮಾಡುವಾಗ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಸ್ನಾನ ಮಾಡುತ್ತಾ ಇದ್ದರು. ಈ ರೀತಿಯಾಗಿ ಸತತವಾಗಿ ಏಳು ದಿನಗಳ ಕಾಲ ಈ ಮನೆಮದ್ದನ್ನು ರಾತ್ರಿ ಮಲಗುವ ಸಮಯದಲ್ಲಿ ಹಚ್ಚಿಕೊಂಡು ಮಲಗಿದರೆ ಯಾವುದೇ ರೀತಿಯ ಚರ್ಮದ ಅಲರ್ಜಿಗಳು ಇದ್ದರೂ ಸಹ ನಿವಾರಣೆಯಾಗುತ್ತದೆ.

Comments are closed.