ಕರಾವಳಿ

ಮಹಾನ್ ಗಾಯಕ ಡಾ.ಎಸ್​ಪಿಬಿ ಅವರು ಹಾಡಿದ ಕೊನೆಯ ಹಾಡು ಯಾವ ನಾಯಕನ ಚಿತ್ರಕ್ಕೆ ? ಇಲ್ಲಿದೆ ಉತ್ತರ..

Pinterest LinkedIn Tumblr

ಚೆನ್ನೈ : ಎರಡು ದಿನಗಳ ಹಿಂದೆ ದೇಶ-ವಿದೇಶಗಳ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ ಮಹಾನ್ ಗಾಯಕ ಡಾ.ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿದ್ದಾರೆ ಎಂಬುವು ದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಅವರ ನಿಧನಕ್ಕೆ ಕಣ್ಣೀರು ಹಾಕುತ್ತಿದೆ.

ಈ ನಡುವೆ ಎಸ್​ಪಿಬಿ ಅವರ ಕೊನೆಯ ಹಾಡು ಯಾವುದು, ಯಾವ ಚಿತ್ರಕ್ಕೆ, ಯಾರ ಚಿತ್ರಕ್ಕೆ ಅವರು ಕೊನೆಯ ಬಾರಿ ಹಾಡಿದ್ದಾರೆ ಎಂಬ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.

ಎಸ್​ಪಿಬಿ ಅವರು ತಮ್ಮ ವೃತ್ತಿಜೀವನದಲ್ಲಿ 40ಸಾವಿರ ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಸಾಧನೆಗಳ ಬಗ್ಗೆ ಲೆಕ್ಕ ಹಾಕಲು ಸಾಧ್ಯವಾಗದಷ್ಟು ಅವರು ಸಾಧನೆ ಮಾಡಿದ್ದಾರೆ. ಲಾಕ್​ಡೌನ್​ ಶುರುವಾಗುವುದಕ್ಕಿಂತ ಮುನ್ನವೂ ಅವರು ಹಾಡಿದ್ದರು. ಹಾಗೆ ಹಾಡಿದ ಕೊನೆಯ ಹಾಡು ಯಾವ ಚಿತ್ರಕ್ಕಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಎಸ್​ಪಿಬಿ ಅವರು ಹಾಡಿರುವ ಕೊನೆಯ ಹಾಡು ಯಾವೂದು ಎಂಬುವುದನ್ನು ಖ್ಯಾತ ಸಂಗೀತ ನಿರ್ದೇಶಕ ಡಿ. ಇಮಾನ್ ಅವರು ಬಹಿರಂಗ ಪಡಿಸಿದ್ದಾರೆ. ಎಸ್​ಪಿಬಿ ಅವರು ಹಾಡಿರುವ ಕೊನೆಯ ಹಾಡು, ರಜನಿಕಾಂತ್​ ಅವರ ‘ಅಣ್ಣಾತ್ತೆ’ ಚಿತ್ರಕ್ಕೆ ಎಂದು ಸ್ವತಹ ಸಂಗೀತ ನಿರ್ದೇಶಕ ಡಿ. ಇಮಾನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ರಜನಿಕಾಂತ್​ ಮತ್ತು ಎಸ್​ಪಿಬಿ ಅವರ ಜತೆಯಾಟ ಸುಮಾರು 40 ವರ್ಷಗಳ ಹಿಂದಿನದ್ದು. ಎಸ್​ಪಿಬಿ ಅವರು ರಜನಿಕಾಂತ್​ ಅವರಿಗೆ ನೂರಾರು ಹಾಡುಗಳನ್ನು ಹಾಡಿದ್ದರು. 1980ರಲ್ಲಿ ಬಿಡುಗಡೆಯಾದ ‘ಬಿಲ್ಲ’ ಚಿತ್ರದ ‘ಮೈ ನೇಮ್​ ಈಸ್​ ಬಿಲ್ಲ’ ಎಂಬ ರಜನಿಕಾಂತ್​ ಇಂಟ್ರೊಡಕ್ಷನ್​ ಹಾಡನ್ನು ಹಾಡಿದ್ದು ಎಸ್​ಪಿಬಿಯವರೇ. ಅದರಲ್ಲೂ ಪ್ರತೀ ಚಿತ್ರದಲ್ಲೂ ತಮ್ಮ ಇಂಟ್ರೊಡಕ್ಷನ್​ ಹಾಡನ್ನು ಎಸ್​ಪಿಬಿ ಅವರೇ ಹಾಡಬೇಕು ಎಂದು ರಜನಿಕಾಂತ್ ಪಟ್ಟುಹಿಡಿಯುತ್ತಿದ್ದರಂತೆ.

‘ಭಾಷಾ’, ‘ಮುತ್ತು’, ‘ಪಡೆಯಪ್ಪ’ ಸೇರಿದಂತೆ ರಜನಿಕಾಂತ್​ ಅವರ ಹಲವು ಚಿತ್ರಗಳ ಇಂಟ್ರೊಡಕ್ಷನ್​ ಹಾಡುಗಳನ್ನು ಎಸ್​ಪಿಬಿ ಅವರು ಹಾಡಿದ್ದರು. ರಜನಿಕಾಂತ್​ ಅವರ ಹಿಂದಿನ ಚಿತ್ರ ‘ದರ್ಬಾರ್​’ನ ನಾಯಕನ ಪರಿಚಯದ ಹಾಡಿಗೂ ಎಸ್​ಪಿಬಿ ಧ್ವನಿಯಾಗಿದ್ದರು.

‘ಅಣ್ಣಾತ್ತೆ’ ಚಿತ್ರ ಶುರುವಾದಾಗ, ಎಸ್​ಪಿಬಿ ಅವರಿಂದಲೇ ಹಾಡಿಸಬೇಕು ಎಂಬುದು ಚಿತ್ರತಂಡದ ನಿರ್ಧಾರ ವಾಗಿತ್ತು. ಅದರಂತೆ, ಲಾಕ್​ಡೌನ್​ ಶುರುವಾಗುವುದಕ್ಕಿಂತ ಕೆಲವು ದಿನಗಳ ಮೊದಲು, ಎಸ್​ಪಿಬಿ ಅವರಿಂದ ನಾಯಕನ ಪರಿಚಯದ ಗೀತೆಯನ್ನು ಹಾಡಿಸಲಾಗಿದೆ. ಎಸ್​ಪಿಬಿ ಅವರಿಗೆ ಟ್ವೀಟ್​ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವ ಸಂಗೀತ ನಿರ್ದೇಶಕ ಡಿ. ಇಮಾನ್ ಇದೇ ವೇಳೆ ಎಸ್​ಪಿಬಿ ಅವರ ಕೊನೆಯ ಹಾಡಿನ ಬಗ್ಗೆ ಬರೆದುಕೊಂಡಿದ್ದಾರೆ.

ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಅಣ್ಣಾತ್ತೆ’ ಚಿತ್ರವನ್ನು ಸನ್​ ಪಿಕ್ಚರ್ಸ್​ ನಿರ್ಮಿಸುತ್ತಿದೆ. ಚಿತ್ರದಲ್ಲಿ ರಜನಿಕಾಂತ್​ ಜತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್​ ಮುಂತಾದವರು ನಟಿಸುತಿದ್ದಾರೆ.

Comments are closed.