ರಾಷ್ಟ್ರೀಯ

ವಿಚಿತ್ರ ಘಟನೆ ! ಲೂಡೋ ಆಡುವಾಗ ತಂದೆ ತನಗೆ ಮೋಸ ಮಾಡಿದ್ದಾರೆ ಎಂದು ಕೋರ್ಟು ಮೆಟ್ಟಿಲೇರಿದ ಮಗಳು!

Pinterest LinkedIn Tumblr

ಮಧ್ಯ ಪ್ರದೇಶ: ತಂದೆ-ಮಗ-ಮಗಳ ಮಧ್ಯೆ ಏನೆಲ್ಲ ವಿಷಯಕ್ಕಾಗಿ ಕಚ್ಚಾಟ, ಜಗಳ, ಕೇಸು, ಕೋರ್ಟು ಮೆಟ್ಟಿಲೇರಿರುವುದು ನಾವು ನೋಡಿದ್ದೇವೆ. ಆದರೆ ಇಲ್ಲಯೊಬ್ಬಳು ಮಗಳು, ತನ್ನ ತಂದೆ ಲೂಡೋ ಆಡುವಾಗ ಮೋಸ ಮಾಡಿದ್ದಾರೆ ಎಂದು ಕೋರ್ಟು ಮೆಟ್ಟಿಲೇರಿದ್ದಾಳೆ. ಈ ಸುದ್ದಿ ವಿಚಿತ್ರ ಆದರೂ ನಿಜ !

ಮಧ್ಯಪ್ರದೇಶದಲ್ಲಿ ನಡೆದಿರುವ ಈ ಘಟನೆಯನ್ನು ಕೇಳಿರುವ ಜನ ಒಮ್ಮೆಗೆ ಆಶ್ಚರ್ಯಚಕಿತರಾಗಿದ್ದಾರೆ.

ಮಧ್ಯ ಪ್ರದೇಶದ ಕುಟುಂಬವೊಂದು ಇತ್ತೀಚೇಗೆ ಲೂಡೋ ಆಟದಲ್ಲಿ ತೊಡಗಿತ್ತು. ಈ ವೇಳೆ ಅಪ್ಪ, ಮಗಳನ್ನು ಸೋಲಿಸಿದ್ದ. ಇದಕ್ಕೆ ಸಿಟ್ಟಾದ ಮಗಳು ಕೋರ್ಟ್​ ಮೆಟ್ಟಿಲೇರಿದ್ದಾಳೆ.

“ನನ್ನ ತಂದೆ ನನಗೆ ಮೋಸ ಮಾಡುತ್ತಾನೆ ಎಂದು ನಾನು ಭಾವಿಸಿರಲಿಲ್ಲ. ಈ ಘಟನೆ ನಂತರದಲ್ಲಿ ನನಗೆ ತಂದೆ ಮೇಲಿದ್ದ ಗೌರವ ಸಂಪೂರ್ಣ ನಾಶವಾಗಿದೆ. ಈ ಮೋಸದ ವಿಚಾರವಾಗಿ ನಾನು ಭೋಪಾಲ್​ ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದೇನೆ ಎಂದಿದ್ದಾಳೆ,” ಮಗಳು.

ಮಹಿಳೆ ತನ್ನ ಸಹೋದರು ಹಾಗೂ ತಂದೆ ಜೊತೆ ಲೂಡೋ ಆಡುತ್ತಿದ್ದಳು. ಈ ಆಟದಲ್ಲಿ ಆಕೆ ಸೋತಿದ್ದಳು. ಈ ವೇಳೆ ಸಿಟ್ಟಾದ ಮಗಳು, “ನೀನು ನನ್ನ ಖುಷಿಗಾಗಿ ನನ್ನನ್ನು ಗೆಲ್ಲಿಸಬಹುದಿತ್ತು. ಆದರೆ, ನೀನು ಆರೀತಿ ಮಾಡದೇ ನೀನೇ ಗೆದ್ದಿದ್ದೀಯಾ. ನೀನು ನನಗೆ ಮೋಸ ಮಾಡುತ್ತೀಯಾ ಎಂದು ಕನಸಲ್ಲೂ ಭಾವಿಸಿರಲಿಲ್ಲ,” ಎಂದಿದ್ದಾಳೆ. ಅಲ್ಲದೆ ತಂದೆ ಜೊತೆಗಿನ ಸಂಬಂಧವನ್ನೂ ಸಂಪೂರ್ಣವಾಗಿ ಕಡಿದುಕೊಳ್ಳಲು ಆಕೆ ನಿರ್ಧರಿಸಿದ್ದಾಳೆ.

Comments are closed.