ಕರಾವಳಿ

ಉಡುಪಿ ಜಿಲ್ಲೆ ವಿಷನ್ ಡಾಕ್ಯುಮೆಂಟ್ ಮಾಡುತ್ತಿರುವ ಏಕೈಕ ಜಿಲ್ಲೆ: ಜಿಲ್ಲಾಧಿಕಾರಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿದಂತಹ ಜಿಲ್ಲೆಯಾಗಿದ್ದು ಮೊದಲಿನಿಂದಲೂ ಸಹ ಎಲ್ಲಾ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಅತ್ಯುತ್ತಮ ವಾತಾವರಣ ಹೊಂದಿ ಪ್ರವಾಸಿಗರನ್ನು ಹೆಚ್ಚು ಮನಸೆಳೆಯುವ ಜಿಲ್ಲೆಯಾಗಿದೆ. ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಇಂದು ಜಿಲ್ಲಾಡಳಿತ , ಪ್ರವಾಸೋದ್ಯಮ ಇಲಾಖೆ ಉಡುಪಿ, ಮಲ್ಪೆ ಅಭಿವೃದ್ಧಿ ಸಮಿತಿ, ನೆಹರು ಯುವ ಕೇಂದ್ರ ,ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ, ಜಿಲ್ಲೆ ಹಾಗೂ ಸೌಟ್ಕ್&ಗೈಡ್ಸ್ ಇವರ ಸಹಯೋಗದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಾಗೂ ಗ್ರಾಮೀಣಾಭಿವೃದ್ಧಿ ಘೋಷಣೆಯೊಂದಿಗೆ ಆಯೋಜಿಸಿದ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಷನ್ ಡಾಕ್ಯುಮೆಂಟ್ ಮಾಡುತ್ತಿರುವ ಏಕೈಕ ಜಿಲ್ಲೆ ಉಡುಪಿ ಎಂದು ಹೇಳಲು ಹೆಮ್ಮೆಯಾಗಿದೆ, ವಿಷನ್ ಡಾಕ್ಯುಮೆಂಟ್ ಅಂತಿಮ ಹಂತದಲ್ಲಿದೆ. ಅದು ಪೂರ್ಣಗೊಂಡ ನಂತರ ಸರಕಾರಕ್ಕೆ ಸಲ್ಲಿಸಿ ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮಕ್ಕೆ ಆದ್ಯತೆ ಜಿಲ್ಲೆಯಾಗಿ ಪರಿಗಣಿಸಲಾಗುವುದು ಈ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನವನ್ನು ಪಡೆದುಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನೂ ಉತ್ತುಂಗಕ್ಕೇರಿಸಬೇಕೆಂದು ಎಂಬುದು ಎಲ್ಲಾ ಅಧಿಕಾರಿ, ಹಾಗೂ ರಾಜಕಾರಣಿಗಳ ಆಶಯವಾಗಿದೆ. ಎಂದು ತಿಳಿಸಿದರು.

ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಬರುವವರು ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರವಾಸವನ್ನು ಮಾಡಿ ಹೋಗಬೇಕೆಂದು ಮನವಿ ಮಾಡಿಕೊಂಡರು.ಬ್ಲೂ ಪ್ಲಾಗ್ ಬೀಚ್ ಇನ್ನೆನ್ನೂ ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆಯುದಷ್ಟೇ ಬಾಕಿ, ರಾಷ್ಟ್ರೀಯ ಎಲ್ಲಾ ಜ್ಯೂರಿಗಳು ಅತ್ಯುತ್ತಮವಾಗಿ ಬೆಳವಣಿಗೆಯಾಗಿರುವ ಬೀಚ್ ಎಂದರೆ ಪಡುಬಿದ್ರಿಯ ಎಂಡ್ ಪಾಯಿಂಟ್ ಬೀಚ್ ಬ್ಲೂ ಪ್ಲಾಗ್ ಬೀಚ್ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಪ್ರವಾಸೋದ್ಯಮಕ್ಕೆ ಉಡುಪಿ ಜಿಲ್ಲೆಯಲ್ಲಿ ಹೊಸ ಆಯಾಮವನ್ನು ಕೊಡ್ಬೇಕು, ಹೊಸತನವನ್ನು ನೀಡಬೇಕು, ಎಲ್ಲಾ ರಾಜ್ಯದ-ರಾಷ್ಟçದ ಜನರು ಉಡುಪಿಯತ್ತ ಪ್ರವಾಸೋದ್ಯಮಕ್ಕೆ ಬರುವಂತಾಗಬೇಕೆಂದು ತಿಳಿಸಿದರು.

ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಧನಾತ್ಮಕವಾಗಿ ಚಿಂತನೆಗಳನ್ನು ಮಾಡಿದಾಗ ಖಂಡಿತವಾಗಿಯೂ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಪ್ರೊ.ಈಶ್ವರ್ ಮಾತಾಡಿ ಪ್ರವಾಸೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಪ್ರವಾಸಿಗಳಿಗೆ ಬೇಡಿಕೆ ಮತ್ತು ಪೂರೈಕೆಗೆ ಯಾವುದು ಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದರು. ಪ್ರವಾಸಿಗರು ಅಲ್ಲಿಯ ಭಾಷೆ-ಸಂಸ್ಕ್ರತಿ, ಶೈಲಿ , ಅವರು ತಿನ್ನುವ ಸ್ಥಳೀಯ ತಿನಿಸುಗಳನ್ನು ಬಯಸುತ್ತಾರೆ, ಆಕರ್ಷಣೆಗಳಿಗೆ ಜನ ಬಂದು ಹೋಗುತ್ತಾರೆ, ಹಾಗೂ ಊಟದ ವ್ಯವಸ್ಥೆ ಮನೆಗಳಲ್ಲಿ ಆಗುವ ರೀತಿ ಬದಲಾವಣೆಯನ್ನು ಮಾಡಬೇಕೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ನಗರಾಭಿವೃದ್ಧಿ ಅಧ್ಯಕ್ಷ ರಾಘವೇಂದ್ರ ಕಿಣಿ, ಪ್ರಾಸ್ತವಿಕ ಮಾತಾಡಿದರು.
ಕರ‍್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ಮಾಸ್ಕ್ಗಳನ್ನು ತಯಾರಿಸಿ ಸರಕಾರಕ್ಕೆ ನೀಡಿದ ಇಶಿತಾ ಆಚಾರ್‌ರವರನ್ನು ಸನ್ಮಾನಿಸಲಾಯಿತು. ಹಾಗೂ ಎಲ್ಲಾ ಗಣ್ಯರು ಬೀಚ್‌ನ ಸುತ್ತ-ಮುತ್ತ ಎಲ್ಲಾ ಸ್ವಚ್ಛತಾ ಕಾರ‍್ಯದಲ್ಲಿ ಭಾಗಿಯಾದರು.

ಕಾರ‍್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ, ಭಾರತ್ ಸೌಟ್ಕ್&ಗೈಡ್ಸ್ನ ಜಿಲ್ಲಾ ಅಧಿಕಾರಿ ಡಾ. ವಿಜಯೇಂದ್ರ, ಉಡುಪಿ ಕೌನ್ಸಿಲರುಗಳಾದ ಶೇಷ ಕೊಡವೂರು, ಹಾಗೂ ಸುಂದರ್ ಕಾಮಾಡಿ, ಹಾಗೂ ಕಾರ್ಕಳದ ಕೌನ್ಸಿಲರ್ ಆ್ಯಡ್ಲಿನ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ್, ಸ್ವಾಗತಿಸಿ ಮಲ್ಪೆ ಅಭಿವೃದ್ಧಿ ಸಮಿತಿ ಹಾಗೂ ಪೌರಾಯುಕ್ತರು ಉಡುಪಿ ನಗರಸಭೆಯ ಕಾರ್ಯದರ್ಶಿ ಆನಂದ್.ಚಿ ಕಲ್ಲೋಳಿಕರ್ ಕಾರ‍್ಯಕ್ರಮ ನಿರ್ವಹಿಸಿದರು.

Comments are closed.