ಆರೋಗ್ಯ

ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಕೊರೋನಾ ಪಾಸಿಟಿವ್

Pinterest LinkedIn Tumblr

ನವದೆಹಲಿ: ದೆಹಲಿಯಲ್ಲಿ ಮಾರಕ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದ್ದು, ಇದೀಗ ದೆಹಲಿ ವಿಧಾನಸಭೆಗೂ ಸೋಂಕಿನ ಭೀತಿ ಹೆಚ್ಚಿದೆ. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳದೇ ವಾಪಸ್ ಆಗಿರುವ ಘಟನೆ ನಡೆದಿದೆ.

ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ . ಅವರೇ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಬರೆದುಕೊಂಡಿರುವ ಅವರು, ಲಘು ಜ್ವರ ಬಂದಿದ್ದು ಇಂದು ಕೊರೊನಾ ಟೆಸ್ಟ್ ಮಾಡಿಸಿದೆ. ಅದರ ವರದಿ ಪಾಸಿಟಿವ್ ಬಂದಿದೆ. ನಾನು ಸ್ವಯಂ ಐಸೋಲೆಟ್ ಆಗಿದ್ದೇನೆ. ಪ್ರಸ್ತುತ ಜ್ವರವಾಗಲಿ ಅಥವಾ ಇತರೆ ಯಾವುದೇ ಸಮಸ್ಯೆ ಇಲ್ಲ ಹಾಗೂ ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಆಶಿರ್ವಾದದಿಂದ ಶೀಘ್ರವೇ ಸಂಪೂರ್ಣ ಗುಣಮುಖನಾಗಿ ಕೆಲಸಕ್ಕೆ ಮರಳಲಿದ್ದೇನೆ ಎಂದಿದ್ದಾರೆ.

Comments are closed.