ಕರಾವಳಿ

ಮಂಗಳೂರು : ಉಳ್ಳಾಲ ಆಟೋ ಚಾಲಕರಿಂದ ಸೌಹಾರ್ದ ರಕ್ತದಾನ ಶಿಬಿರ : 56 ಯುನಿಟ್ ರಕ್ತ ಸಂಗ್ರಹ

Pinterest LinkedIn Tumblr

ಮಂಗಳೂರು : ಉಳ್ಳಾಲ ಆಟೋ ರಾಜಾಕನ್ಮಾರ್ ಹೆಲ್ಪ್ ಲೈನ್ ಗ್ರೂಫ್ ಹಾಗೂ ಬ್ಲಡ್ ಡೋನಸ್೯ ಮಂಗಳೂರು ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಮಂಗಳೂರು ಸಹಕಾರದೊಂದಿಗೆ ಸೌಹಾರ್ದ ರಕ್ತದಾನ ಶಿಬಿರ ಮುಡಿಪಿನ ಸಾಂಬಾರತೋಟ ಮದ್ರಸ ಹಾಲ್ ನಲ್ಲಿ ನಡೆಯಿತು.

ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಸೌಹಾರ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆಟೋ ಚಾಲಕರು ಕರ್ತವ್ಯ ನಿರ್ವಸುವ ಜೋತೆಗೆ ಸಂಘಟಿತರಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ‌ ಬೆಳವಣಿಗೆಯಾಗಿದೆ.ನಮ್ಮ ಊರಿನ ಆಟೋ ಚಾಲಕರು ನಿಮ್ಮ ಊರಿನ ಸಮಾಜ ಸೇವಕರಾಗಿದರೆ. ಆಟೋ ಚಾಲಕರಾಗಿ ಕಾಣಬೇಡಿ ಎಂದು ಹೇಳಿದರು.

ಸಾಂಬಾರತೋಟ ನೂರಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ನೂರಾನಿಯಾ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ರಝಾಕ್ ಅಹ್ಸನಿ, ಬ್ಲಡ್ ಡೋನಸ್೯ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್‌ ಮಂಜೇಶ್ವರ, ಇಸ್ಮಾಯಿಲ್ ಮಾಸ್ಟರ್, ಎಸ್ ವೈಎಸ್ ಸಾಂಬಾರತೋಟ ಶಾಖಾಧ್ಯಕ್ಷ ಹಸನ್ ಹಾಜಿ, ಖಿದ್ಮತುಲ್ ಇಸ್ಲಾಂ ಅಸೋಶಿಯೇಶನ್ ಅಧ್ಯಕ್ಷ ಶಾಹುಲ್ ಹಮೀದ್ ಎಚ್.ಬಿ.ಟಿ ಮುಖ್ಯ ಅತಿಥಿಯಾಗಿದರು‌‌.

ಆಟೋ ರಾಜಕನ್ಮಾರ್ ಹೆಲ್ಪ್ ಲೈನ್ ಗ್ರೂಫ್ ಮುಖ್ಯಸ್ಥರಾದ ನಾಸಿರ್ ಕಲ್ಮಿಂಜ, ಇಸಾಕ್ ಬೋಳಿಯಾರ್, ಬ್ಲಡ್ ಡೋನಸ್೯ ಮಂಗಳೂರು ಇದರ ಕಾರ್ಯನಿವಹಾಕರಾದ ಫಯಾಝ್ ಮಡೂರು, ಸಿರಾಜ್ ಫಜೀರ್, ಹಮೀದ್ ಪಜೀರ್, ಸದಸ್ಯರಾದ ಮನ್ಸೂರ್ ಕೋಡಿಜಾಲ್, ಇಸ್ಹಾಕ್ ಮುಂತಾದವರು ಉಪಸ್ಥಿತರಿದರು.

ಈ ಸಂದರ್ಭ ಎಂಎನ್ ಜಿ ಫೌಂಡೇಶನ್ ನ ಇಲ್ಯಾಸ್ ಮಂಗಳೂರು, ಮೈಮೂನಾ ಫೌಂಡೇಶನ್ ನ ಆಪತ್ಭಾಂದವ ಆಸಿಫ್ ಹಾಗೂ ಎಸ್.ಎಚ್ ಇಬ್ರಾಹೀಂ ಸಾಂಬಾರತೋಟು ರವರನ್ನು ಸನ್ಮಾನಿಸಲಾಯಿತು.
ಕರವೇ ಬಂಟ್ವಾಳ ವಲಯಾಧ್ಯಕ್ಷ ಅಬ್ದುಲ್‌ ಜಲೀಲ್ ಸ್ವಾಗತಿದರು.

ಆಟೋ ರಾಜಕನ್ಮಾರ್ ಹೆಲ್ಪ್ ಲೈನ್ ಗ್ರೂಫ್ ಮುಖ್ಯಸ್ಥ ಸಿದ್ದೀಕ್ ಕೊಡಕ್ಕಲ್ ವಂದಿಸಿದರು. ಬ್ಲಡ್ ಡೋನಸ್೯ ಮಂಗಳೂರು ಇದರ ಆಡ್ಮಿನ್ ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ‌ ನಿರೂಪಿಸಿದರು.

ಕಾರ್ಯಕ್ರಮದ ಮೊದಲು ಮುಡಿಪಿನಿಂದ ಸಾಂಬಾರತೋಟವರೆಗೆ ಆಟೋ ರಾಜಕನ್ಮಾರ್ ಆಟೋ ಚಾಲಕರಿಂದ ಆಟೋ ರ್‍ಯಾಲಿ ನಡೆಯಿತು. ದಾನಿಗಳಿಂದ 56 ಯುನಿಟ್ ರಕ್ತ ಸಂಗ್ರಹಿಸಲಾಯಿತು.

Comments are closed.