ಆರೋಗ್ಯ

ಕೊರೋನಾ ಮಹಾಮಾರಿಗೆ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಬಲಿ: 54 ವರ್ಷದ ಮರವಂತೆಯ ವ್ಯಕ್ತಿ ಸಾವು

Pinterest LinkedIn Tumblr

ಉಡುಪಿ: ಮಹಾಮಾರಿ ಕೊರೋನ ವೈರಸ್’ನಿಂದ ಉಡುಪಿ ಜಿಲ್ಲೆಯಲ್ಲಿ ಇನ್ನೋರ್ವ ವ್ಯಕ್ತಿ‌ ಮೃತಪಟ್ಟಿದ್ದು ಸಾವಿನ ಸಂಖ್ಯೆ ಏಳಕ್ಕೇರಿದೆ. ಉಡುಪಿಯ ವ್ಯಕ್ತಿಯೊಬ್ಬರು ಕೊರೋನಾ‌ ಸೋಂಕಿಗೆ ಬಲಿಯಾದ ವರದಿ ಬೆನ್ನಲ್ಲೇ ಕುಂದಾಪುರದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ‌ ಲಭಿಸಿದೆ.

ಉಡುಪಿ‌ ಜಿಲ್ಲೆ ಬೈಂದೂರು ತಾಲೂಕಿನ ಮರವಂತೆ ಮೂಲದ 54 ವರ್ಷ ಪ್ರಾಯದ ವ್ಯಕ್ತಿ ಮೃತಪಟ್ಟಿದ್ದು ಅವರಿಗೆ ಕೊರೋನಾ‌ ಪಾಸಿಟಿವ್ ಇರುವುದು ದೃಢವಾಗಿದೆ.

ಮರವಂತೆಯ ಈ ವ್ಯಕ್ತಿ ತೀವೃ ಅಸ್ತಮಾದಿಂದ ಬಳಲುತ್ತಿದ್ದು ಬುಧವಾರ ಸಂಜೆ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮದ್ಯೆ ಅವರು ಮೃತಪಟ್ಟಿದ್ದರು. ನಂತರ ಮೃತದೇಹವನ್ನು ಕುಂದಾಪುರಕ್ಕೆ ತಂದು ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ರ‍್ಯಾಪಿಡ್ ಟೆಸ್ಟ್ ಕಿಟ್ ಮೂಲಕ ಮಾದರಿ ಸಂಗ್ರಹಿಸಿದ್ದರಿಂದ ಶೀಘ್ರ ವರದಿ ಬಂದಿದ್ದು ಅದರಲ್ಲಿ‌ ಮೃತ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿದೆ.

ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗುರುವಾರ ಕುಂದಾಪುರದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Comments are closed.