ಕುಂದಾಪುರ: ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿ ಸಿಬ್ಬಂದಿ ಹಾಗೂ ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣೆಯವರಾಗಿದ್ದು ಹೈವೇ ಪಟ್ರೋಲ್ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಚಾಲಕ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.
ಸದ್ಯ ಕುಂದಾಪುರ ಎಲ್ಐಸಿ ರಸ್ತೆಯಲ್ಲಿರುವ ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಮುಚ್ಚಿ ಸ್ಯಾನಿಟೈಸರ್ ಮಾಡಲಾಗುತ್ತದೆ. ಕುಂದಾಪುರ ಟ್ರಾಫಿಕ್ ಠಾಣೆ ಮಾಮೂಲಿಯಂತೆ ನಡೆಯಲಿದೆ. ಪಾಸಿಟಿವ್ ದೃಢಗೊಂಡ ಎಎಸ್ಪಿ ಕಚೇರಿ ಸಿಬ್ಬಂದಿ ಜುಲೈ2 ರಿಂದ ಹೋಂ ಕ್ವಾರೆಂಟೈನ್’ನಲ್ಲಿದ್ದು ಟ್ರಾಫಿಕ್ ಠಾಣೆ ಎಎಸ್ಐ ಹಾಗೂ ಸಿಬ್ಬಂದಿ ಜುಲೈ5 ರಿಂದ ಕ್ವಾರೆಂಟೈನ್ ಇದ್ದಾರೆ.
ಎಎಸ್ಪಿ ಕಚೇರಿ ಕಾರ್ಯವು ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ನಡೆಯಲಿದೆ. ಕುಂದಾಪುರ ಉಪವಿಭಾಗಕ್ಕೆ ಉಡುಪಿ ಡಿವೈಎಸ್ಪಿ ಅವರನ್ನು ಪ್ರಭಾರ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
(ವರದಿ-ಯೋಗೀಶ್ ಕುಂಭಾಸಿ)
Comments are closed.